ವಿವಿಧ ಠರಾವುಗಳನ್ನು ಒಪ್ಪಿಗೆ ನೀಡಿ ೯ ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಉತ್ಸಾಹ ಪೂರ್ಣ ವಾತಾವರಣದಿಂದ ಸಮಾರೋಪ !

ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಶ್ರೀರಾಮಮಂದಿರದಲ್ಲಿ ಹಿಂದೂಗಳಿಗಾಗಿ ಧರ್ಮಶಿಕ್ಷಣ ನೀಡಬೇಕು. ಅಲ್ಲಿಯ ಇತರ ದೇವಸ್ಥಾನಗಳು ಹಾಗೂ ಐತಿಹಾಸಿಕ ವಾರಸ್ಸುಗಳಾಗಿರುವ ಸ್ಥಳಗಳನ್ನೂ ಆಕ್ರಮಣದಿಂದ ಮುಕ್ತ ಮಾಡಿ ಅದರ ಜೀರ್ಣೋದ್ಧಾರ ಮಾಡಬೇಕು. ಧಾರ್ಮಿಕ ಅಸಮಾಧಾನವನ್ನು ತಡೆಗಟ್ಟಲು ಅಯೋಧ್ಯೆಯಲ್ಲಿ ಇತರ ಧರ್ಮಗಳ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲು ಅನುಮತಿಯನ್ನು ನೀಡಬಾರದು.

ಆಪತ್ಕಾಲದಿಂದ ಸುರಕ್ಷಿತವಾಗಿ ಪಾರಾಗಲು ಸಾಧನೆಯನ್ನು ಕಲಿಸುವ ಸನಾತನ ಸಂಸ್ಥೆ !

ಆಪತ್ಕಾಲದಲ್ಲಿ ಮಾರುಕಟ್ಟೆಯಲ್ಲಿ ಅನೇಕ ನಿತ್ಯೋಪಯೋಗಿ ವಸ್ತುಗಳ ಕೊರತೆಯುಂಟಾಗಬಹುದು ಅಥವಾ ಅವು ದುಬಾರಿಯಾಗಬಹುದು ಅಥವಾ ಅವು ಸಿಗದೇ ಇರಬಹುದು. ಇಂತಹ ಸಮಯದಲ್ಲಿ ಮುಂದಿನ ಪರ್ಯಾಯಗಳು ಉಪಯುಕ್ತವಾಗುವವು. ಇದರಲ್ಲಿನ ಸಾಧ್ಯವಿರುವಷ್ಟು ಪರ್ಯಾಯಗಳನ್ನು ಈಗಿನಿಂದಲೇ ಕೃತಿಯಲ್ಲಿ ತರುವ ಅಭ್ಯಾಸವನ್ನು ಮಾಡಬೇಕು.

ಜಗದ್ಗುರು ಭಗವಾನ ಶ್ರೀಕೃಷ್ಣನ ಜೀವನದ ವೈಶಿಷ್ಟ್ಯಪೂರ್ಣ ಅಂಗಗಳು !

‘ಅರ್ಜುನನು ಸರ್ವಶ್ರೇಷ್ಠ ಧನುರ್ಧರನಾಗಿದ್ದನು’, ಎಂದು ತಿಳಿಯಲಾಗುತ್ತದೆ; ಆದರೆ ವಾಸ್ತವದಲ್ಲಿ ಶ್ರೀಕೃಷ್ಣನು ಈ ವಿದ್ಯೆಯಲ್ಲಿ ಸರ್ವಶ್ರೇಷ್ಠನಾಗಿದ್ದನು ಮತ್ತು ಅದು ಸಿದ್ಧವೂ ಆಗಿತ್ತು. ಮದ್ರ ರಾಜಕುಮಾರಿ ಲಕ್ಷ್ಮಣಾ ಇವಳ ಸ್ವಯಂವರದಲ್ಲಿನ ಪ್ರತಿಜ್ಞೆಯು ದ್ರೌಪದಿಯ ಸ್ವಯಂವರದಲ್ಲಿನ ಪ್ರತಿಜ್ಞೆಗಿಂತಲೂ ಕಠಿಣವಾಗಿತ್ತು. ಆಗ ಕರ್ಣ ಮತ್ತು ಅರ್ಜುನರಿಬ್ಬರೂ ವಿಫಲಗಿದ್ದರು. ಆಗ ಶ್ರೀಕೃಷ್ಣನು ಗುರಿಯನ್ನು ಭೇದಿಸಿ ಲಕ್ಷ್ಮಣಾಳ ಇಚ್ಛೆಯನ್ನು ಪೂರ್ಣಗೊಳಿಸಿದನು.

‘ಕೊರೋನಾ ವಿಷಾಣುವಿನ ಸಂಕಟದಿಂದಾಗಿ ಒಟ್ಟಿಗೆ ಸೇರಿ ಉತ್ಸವವನ್ನು ಆಚರಿಸಲಾಗದಿರುವುದರಿಂದ ‘ಶ್ರೀಕೃಷ್ಣ ಜನ್ಮಾಷ್ಟಮಿಯ ಪೂಜೆಯನ್ನು ಮನೆಯಲ್ಲಿಯೇ ಭಕ್ತಿಭಾವದಿಂದ ಹೇಗೆ ಮಾಡಬೇಕು ?

ಪ್ರತಿವರ್ಷ ಭಾರತದಲ್ಲಿ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಉತ್ಸವವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಈ ವರ್ಷ ೧೧.೮.೨೦೨೦ ಈ ದಿನದಂದು ‘ಶ್ರೀಕೃಷ್ಣ ಜನ್ಮಾಷ್ಟಮಿ ಇದೆ. ಉತ್ಸವವನ್ನು ಆಚರಿಸುವಾಗ ಪ್ರಾಂತಗಳಿಗನುಸಾರ ಉತ್ಸವವನ್ನು ಆಚರಿಸುವ ಪದ್ಧತಿಯಲ್ಲಿ ಭಿನ್ನತೆ ಇರುತ್ತದೆ. ಉತ್ಸವದ ನಿಮಿತ್ತ ಬಹಳಷ್ಟು ಜನರು ಒಟ್ಟು ಸೇರಿ ಭಕ್ತಿಭಾವದಿಂದ ಈ ಉತ್ಸವವನ್ನು ಆಚರಿಸುತ್ತಾರೆ.

ಜುಲೈ ೩೦ ರಿಂದ ಆರಂಭವಾಗಿರುವ ‘೯ ನೆಯ ಅಖಿಲಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ನಿಮಿತ್ತ …

‘ರಾಷ್ಟ್ರ ಹಿತಕ್ಕಿಂತ ಮಿಗಿಲಾಗಿ ಬೇರೊಂದಿಲ್ಲ |’ ಇಂತಹ ಶ್ರೇಷ್ಠ ಹಾಗೂ ಸಂಪೂರ್ಣ ನಿಷ್ಕಳಂಕ, ನಿಸ್ವಾರ್ಥಿ ಹಾಗೂ ರಾಷ್ಟ್ರನಿಷ್ಠ ವಿಚಾರವುಳ್ಳ ಹಿಂದೂ ಸಮಾಜವು ದೇಶದ ಪ್ರಗತಿಗಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿದೆ. ಆದ್ದರಿಂದ ಇಂತಹ ಸಮಾಜದ ಹಿತಕ್ಕಾಗಿ ‘ಲೋಕಕಲ್ಯಾಣಕಾರಿ ಹಿಂದೂ ರಾಷ್ಟ್ರ’ ಸ್ಥಾಪನೆ ಮಾಡುವುದು ಕಾಲಾನುಸಾರ ಆವಶ್ಯಕವಾಗಿದೆ.

‘ರಾಮಮಂದಿರದ ನಿರ್ಮಾಣಕ್ಕೆ ಈಗೇಕೆ ವಿರೋಧ ?’, ಈ ಕುರಿತಾದ ವಿಚಾರ ಸಂಕೀರ್ಣದಲ್ಲಿ ಗಣ್ಯರ ಸಹಭಾಗ !

ಕೇವಲ ರಾಮಮಂದಿರ ಮಾತ್ರವಲ್ಲದೇ, ಅಯೋಧ್ಯೆಯಲ್ಲಿನ ಲಕ್ಷ್ಮಣ, ಭರತ ಹಾಗೂ ಶತ್ರುಘ್ನದೊಂದಿಗೆ ಒಟ್ಟು ೩೬೦ ದೇವಸ್ಥಾಗಳನ್ನು ದಾಳಿಖೋರರು ಧ್ವಂಸ ಮಾಡಿ ಅದರ ಮೇಲೆ ಮಸೀದಿ ಹಾಗೂ ಕಬ್ರಸ್ತಾನವನ್ನು ನಿರ್ಮಿಸಿದರು. ಈ ಪ್ರಾಚೀನ ದೇವಸ್ಥಾನದ ಮೊಗಲೀಕರಣ ಮಾಡಿದ ಪ್ರಕರಣವನ್ನೂ ನ್ಯಾಯಾಲಯದಲ್ಲಿ ಮಂಡಿಸಲಾಗಿದೆ. ಅದಕ್ಕಾಗಿ ನಾವು ಸಾಧು-ಸಂತರು ಸತತ ಸಂಘರ್ಷ ಮಾಡುತ್ತಿದ್ದೇವೆ.

ಕೊರೊನಾ, ಶ್ರಾದ್ಧಕರ್ಮಗಳು ಮತ್ತು ಅವಕಾಶವಾದಿ ನಾಸ್ತಿಕರು !

ಸನಾತನ ಧರ್ಮದಲ್ಲಿ ಪುನರ್ಜನ್ಮದ ಸಿದ್ಧಾಂತವನ್ನು ಹೇಳಲಾಗಿದೆ. ‘ವ್ಯಕ್ತಿಯ ಕರ್ಮಾನುಸಾರ ಅವನಿಗೆ ಮೃತ್ಯುವಿನ ನಂತರದ ಗತಿ ದೊರಕುತ್ತದೆ, ಎಂದು ಶಾಸ್ತ್ರವು ಹೇಳುತ್ತದೆ. ಜೀವನವಿಡೀ ಸತ್ಕರ್ಮಗಳನ್ನು ಮಾಡಿದ್ದರೆ, ಜೀವಕ್ಕೆ ಮೃತ್ಯುವಿನ ಬಳಿಕ ಸದ್ಗತಿ ಸಿಗುತ್ತದೆ; ಆದರೆ ಜೀವನದಲ್ಲಿ ಪಾಪ, ಪರಪೀಡೆ, ಅನೈತಿಕತೆ ಇತ್ಯಾದಿ ಕೃತ್ಯಗಳನ್ನು ಮಾಡಿದ್ದರೆ, ಕರ್ಮದ ಫಲಗಳು ಪರಲೋಕದಲ್ಲಿ ಅಧೋಗತಿಯತ್ತ ಕರೆದುಕೊಂಡು ಹೋಗುತ್ತವೆ.

ಮತಾಂತರಿತರ ಶುದ್ಧೀಕರಣದ ಇತಿಹಾಸದಲ್ಲಿನ ಕೆಲವು ದಾಖಲೆಗಳು

ಛತ್ರಪತಿ ಶಿವಾಜಿ ಮಹಾರಾಜರು ಬಜಾಜೀ ನಿಂಬಾಳ್ಕರನನ್ನು ಶುದ್ಧಗೊಳಿಸಿದರು ಮತ್ತು ಅವನ ಮಗನಿಗೆ ತನ್ನ ಮಗಳು ಸಖುಬಾಯಿಯನ್ನು ಕೊಟ್ಟರು. ಮುಸಲ್ಮಾನ ಆಗಿರುವ ನೇತಾಜಿ ಪಾಲಕರನ್ನು ಪುನಃ ಹಿಂದೂ ಮಾಡಿಕೊಂಡರು.

ಎಲ್ಲೆಡೆಯ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

‘ಆಪತ್ಕಾಲದ ಸ್ಥಿತಿಯು ಯಾವಾಗ ಉದ್ಭವಿಸುವುದು ?’, ಎಂದು ಹೇಳಲು ಆಗುವುದಿಲ್ಲ. ಆದುದರಿಂದ ಆಪತ್ಕಾಲದ ಪೂರ್ವ ತಯಾರಿಯೆಂದು ಸನಾತನದ ಧರ್ಮಪ್ರಸಾರ ಕಾರ್ಯಕ್ಕಾಗಿ ಸೈಕಲ್ ಲಭ್ಯವಾಗುವುದು ಆವಶ್ಯಕವಾಗಿದೆ. ಒಟ್ಟು ಸಾಧಕರ ಸಂಖ್ಯೆಯ ಬಗ್ಗೆ ವಿಚಾರ ಮಾಡಿದರೆ ಸದ್ಯ ಪುರುಷರಿಗಾಗಿ ಉಪಯೋಗಕ್ಕೆ ಬರುವ ೪೦೦ ಮತ್ತು ಮಹಿಳೆಯರು ಉಪಯೋಗಿಸುವಂತಹ ೬೦೦ ಹೀಗೆ ಒಟ್ಟು ೧ ಸಾವಿರ ಸೈಕಲ್‌ಗಳ ಆವಶ್ಯಕತೆಯಿದೆ.

ಸಾಧಕರೇ, ‘ತಮ್ಮ ಆಧ್ಯಾತ್ಮಿಕ ಮಟ್ಟ ಹೆಚ್ಚಾಗಬೇಕು’, ಎಂಬ ವಿಚಾರವೂ ಸ್ವೇಚ್ಛೆಯೇ ಆಗಿರುವುದರಿಂದ ಆ ವಿಚಾರಗಳಲ್ಲಿ ಸಿಲುಕದೇ ‘ಭಾವ’ ಮತ್ತು ‘ತಳಮಳ’ವನ್ನು ಹೆಚ್ಚಿಸಿ ಸಾಧನೆಯ ಆನಂದವನ್ನು ಪಡೆಯಿರಿ !

‘ಅಭ್ಯಾಸ ಮಾಡಿದರೆ, ಪರೀಕ್ಷೆಯಲ್ಲಿ ಉತ್ತೀರ್ಣರಾಗಲೇಬೇಕು. ಅದರಂತೆ ಸಾಧನೆಯನ್ನು ಯೋಗ್ಯ ರೀತಿಯಲ್ಲಿ ಮಾಡಿದರೆ, ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವು ಪ್ರಾಪ್ತವಾಗಲೇಬೇಕು. ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಪ್ರಗತಿಯ ವಿಚಾರಗಳಿಗಿಂತ ಪ್ರಯತ್ನಗಳ ದಿಶೆಯು ಯೋಗ್ಯವಿರಬೇಕು. ಸಾಧನೆಯನ್ನು ಮಾಡಲು ಸಾತತ್ಯದಿಂದ ಮತ್ತು ನಿರಪೇಕ್ಷವಾಗಿ ಪ್ರಯತ್ನಿಸಿದರೆ ಸಾಧನೆಯಲ್ಲಿನ ಆನಂದವನ್ನು ಅನುಭವಿಸಲು ಸಾಧ್ಯವಾಗುತ್ತದೆ.