ಧರ್ಮಾಧಿಷ್ಠಿತ ‘ಹಿಂದೂ ರಾಷ್ಟ್ರ’ದ ಸ್ಥಾಪನೆಗಾಗಿ ಯೋಗದಾನ ನೀಡುವುದರ ಆವಶ್ಯಕತೆ !

ಸದ್ಯದ ಜಾತ್ಯತೀತ, ಭ್ರಷ್ಟ, ಸ್ವಾರ್ಥಲೋಲುಪ, ಜಾತ್ಯಂಧ ಮತ್ತು ದೇಶಾಭಿಮಾನ ಶೂನ್ಯ ರಾಜ್ಯವ್ಯವಸ್ಥೆಯಲ್ಲಿಯೇ ಎಲ್ಲ ಜನರು ಸಿಲುಕಿ  ಕೊಂಡಿದ್ದಾರೆ. ಈ ರಾಜ್ಯವ್ಯವಸ್ಥೆಯು ನಿರ್ಮಿಸಿದ ಮಾಲಿನ್ಯದಿಂದ ‘ಹಿಂದೂ ರಾಷ್ಟ್ರ’ವೆಂಬ ತೇಜಸ್ವೀ ಸಂಕಲ್ಪನೆಯೇ ಮುಚ್ಚಿಹೋಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಸ್ಥಾಪಿಸಿದ ‘ಹಿಂದವೀ ಸ್ವರಾಜ್ಯ’ ಅಂದರೆ, ‘ಹಿಂದೂ ರಾಷ್ಟ್ರ’ವನ್ನು ವಿಸ್ಮೃತಿಯಲ್ಲಿ ಕೊಂಡೊಯ್ದು ಅದಕ್ಕೆ ‘ಸರ್ವಧರ್ಮಸಮಭಾವ ರಾಜ್ಯ’ದ ಹೆಸರಿನಲ್ಲಿ ಹಸಿರು ಬಣ್ಣವನ್ನು ಬಳಿಯುವ ಅಟ್ಟಹಾಸವನ್ನು ಮಾಡಲಾಗುತ್ತಿದೆ. ‘ರಾಮರಾಜ್ಯ’ ಎಂದರೆ ಪ್ರತ್ಯಕ್ಷ ‘ಹಿಂದೂ ರಾಷ್ಟ್ರ’ವೇ ಇಲ್ಲಿ ಅವತರಿಸಿದ್ದರೂ, ಅದನ್ನು ಒಂದು ‘ದಂತಕತೆ’ ಎಂದು ಅಣಕಿಸಲಾಗುತ್ತಿದೆ. ‘ಹಿಂದೂ ರಾಷ್ಟ್ರವೆಂದರೆ ಧರ್ಮಾಂಧತೆ’ ಎಂದು ಉದ್ದೇಶ ಪೂರ್ವಕವಾಗಿ ಬಿಂಬಿಸಲಾಗುತ್ತಿದೆ; ಆದರೆ ಇದು ಅಪಪ್ರಚಾರವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ‘ಹಿಂದೂ ರಾಷ್ಟ್ರ’ದ ಆದರ್ಶವನ್ನು ಎದುರಿನಲ್ಲಿಟ್ಟುಕೊಂಡು ೨೦೨೩ ನೇ ಇಸವಿಯಲ್ಲಿ ಭಾರತದಲ್ಲಿ ಒಂದು ಸಂಪನ್ನ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಕಾಪಾಡುವ ಮತ್ತು ‘ರಾಮರಾಜ್ಯ’ದ ದರ್ಶನವನ್ನು ನೀಡುವಂತಹ ‘ಹಿಂದೂ ರಾಷ್ಟ್ರ’ವು ಸ್ಥಾಪನೆಯಾಗುವುದು! ‘ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದು’ ಎಂಬ ಆಸೆ ನಿರ್ಮಾಣವಾಗುವಂತಹ ಯಾವುದೇ ಘಟನೆಯು ಸ್ಥೂಲದಲ್ಲಿ ಘಟಿಸದಿರುವಾಗ ‘ಹಿಂದೂ ರಾಷ್ಟ್ರ’ದ ಬಗ್ಗೆ ಇಷ್ಟು ದೃಢವಾಗಿ ಹೇಳುವುದನ್ನು ನೋಡಿ, ಕೆಲವರಿಗೆ ಇದು ಅತಿಶಯೋಕ್ತಿ ಅನಿಸಬಹುದು, ಆದರೆ ಕಾಲದ ಹೆಜ್ಜೆಗಳನ್ನು ಗುರುತಿಸಬಲ್ಲ ಸಂತರಿಗೆ ಆ ಉಜ್ವಲ ನಾಳೆಯ ‘ಹಿಂದೂ ರಾಷ್ಟ್ರ’ದ ಸುಳಿವು ಸಿಕ್ಕಿದೆ. ಆಧುನಿಕ ಭಾಷೆಯಲ್ಲಿ ನಾವು ಯಾವುದಕ್ಕೆ ‘ರಾಷ್ಟ್ರರಚನೆ’ ಎಂದು ಹೇಳುತ್ತೇವೆಯೋ, ಅದಕ್ಕೆ ಸಂಸ್ಕತ ಭಾಷೆಯ ಧರ್ಮಗ್ರಂಥಗಳಲ್ಲಿ ‘ಧರ್ಮಸಂಸ್ಥಾಪನೆ’ ಎಂಬ ಹೆಸರಿದೆ. ಇಂತಹ ಧರ್ಮಸಂಸ್ಥಾಪನೆ ಎಂದರೆ ‘ಹಿಂದೂ ರಾಷ್ಟ್ರ’ದ ಸ್ಥಾಪನೆ ಇದೇ ಸದ್ಯದ ಸ್ಥಿತಿಯಲ್ಲಿ ಎಲ್ಲ ದೃಷ್ಟಿಯಿಂದ ಶ್ರೇಯಸ್ಕರವಾಗಿದೆ. ಎಲ್ಲ ಹಿಂದೂಗಳು ಈ ದಿಶೆಯಲ್ಲಿ ಪ್ರಯತ್ನಿಸುವುದು ಅವರ ಸಾಧನೆ ಅಥವಾ ಧರ್ಮಕರ್ತವ್ಯವೇ ಆಗಿದೆ. ಧರ್ಮಸಂಸ್ಥಾಪನೆಗೆ ಬ್ರಾಹ್ಮತೇಜ ಮತ್ತು ಕ್ಷಾತ್ರತೇಜ ಎಂಬ ಎರಡು ಘಟಕಗಳು ಆವಶ್ಯಕವಾಗಿರುತ್ತವೆ. ಸಾಧನೆಯ ಬಲದಲ್ಲಿ ರಾಷ್ಟ್ರಕ್ಕಾಗಿ ‘ಬ್ರಾಹ್ಮತೇಜ’ವನ್ನು ಹೆಚ್ಚಿಸುವ ಕಾರ್ಯವನ್ನು ಬಹಳಷ್ಟು ಸಂತರು ಮತ್ತು ‘ಸನಾತನ ಸಂಸ್ಥೆ’ಯಂತಹ ಆಧ್ಯಾತ್ಮಿಕ ಸಂಸ್ಥೆಗಳು ಮಾಡುತ್ತಿವೆ. ರಾಷ್ಟ್ರದ ದುಃಸ್ಥಿತಿಯನ್ನು ಬದಲಾಯಿಸಲು ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿ ಸಂಸ್ಥೆಗಳು, ಕೆಲವು ದಿನನಪತ್ರಿಕೆಗಳು ಹಾಗೂ ಅನೇಕ ವಿಚಾರವಂತರು ಅನುಕ್ರಮವಾಗಿ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಸ್ತರದಲ್ಲಿ ಪ್ರತ್ಯಕ್ಷ ಕಾರ್ಯವನ್ನು ಮಾಡುತ್ತಿದ್ದಾರೆ, ಅರ್ಥಾತ್ ‘ಕ್ಷಾತ್ರತೇಜ’ವನ್ನು ಹೆಚ್ಚಿಸುತ್ತಿದ್ದಾರೆ. ಈ ಕಾರ್ಯದ ಸ್ವರೂಪ ಮುಂದಿನಂತಿದೆ.

೧. ಶಾರೀರಿಕ : ಧರ್ಮಸಂಸ್ಥಾಪನೆಗಾಗಿ ಪ್ರತ್ಯಕ್ಷ ದೇಹದಿಂದ ಕೃತಿ ಮಾಡುವುದು, ಉದಾ. ಧರ್ಮಹಾನಿಯನ್ನು ಪ್ರತ್ಯಕ್ಷ ತಡೆಗಟ್ಟುವುದು, ಧರ್ಮಹಾನಿಯ ವಿರುದ್ಧ ಆಂದೋಲನಗಳನ್ನು ಮಾಡುವುದು, ಅಂದರೆ ದೇಹದಿಂದ ಪ್ರತ್ಯಕ್ಷ ಕೃತಿಗಳನ್ನು ಮಾಡುವುದಾಗಿದೆ. ಇದಕ್ಕೆ ಕಾಲಾನುಸಾರ ಶೇ. ೧೦ ರಷ್ಟು ಮಹತ್ವವಿದೆ.

೨. ಮಾನಸಿಕ : ‘ರಾಷ್ಟ್ರಭಾವನೆ ಮತ್ತು ಧರ್ಮಭಾವನೆ ಜಾಗೃತವಾಗದೇ ಕೃತಿಯಾಗಲಾರದು’ ಎಂಬ ತತ್ತ್ವಕ್ಕನುಸಾರ ಧರ್ಮಸಂಸ್ಥಾಪನೆಗಾಗಿ ಹಿಂದೂಗಳಿಗೆ ಪ್ರಬೋಧನೆ ಮಾಡಿ ಅವರನ್ನು ಕೃತಿ ಮಾಡಲು ಪ್ರವೃತ್ತಗೊಳಿಸುವುದು, ಉದಾ.ದಿನಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಬೋಧನಾತ್ಮಕ ಲೇಖನಗಳನ್ನು ಬರೆಯುವುದು, ವ್ಯಾಖ್ಯಾನ ನೀಡುವುದು ಇತ್ಯಾದಿ. ಇದಕ್ಕೂ ಕಾಲಾನುಸಾರ ಶೇ. ೧೦ ರಷ್ಟು ಮಹತ್ವವಿದೆ.

೩. ಬೌದ್ಧಿಕ : ಧರ್ಮಸಂಸ್ಥಾಪನೆಗಾಗಿ ಹಿಂದೂ ಸಮಾಜಕ್ಕೆ ದಿಶೆ ನೀಡುವುದು, ಉದಾ. ಹಿಂದೂಗಳ ಮೇಲಿನ ಸಂಕಟಗಳನ್ನು ಅಧ್ಯಯನ ಪೂರ್ವಕವಾಗಿ ವಿಶ್ಲೇಷಣೆ ಮಾಡುವುದು, ಸಂಘಟನೆಗಳಿಗೆ ವೈಚಾರಿಕ ಬಲ ನೀಡುವುದು ಇತ್ಯಾದಿ. ಇದಕ್ಕೂ ಕಾಲಾನುಸಾರ ಶೇ. ೧೦ ರಷ್ಟು ಮಹತ್ವವಿದೆ.

೪. ಆಧ್ಯಾತ್ಮಿಕ : ಧರ್ಮಸಂಸ್ಥಾಪನೆಯ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಕಾರ್ಯಕ್ಕೆ ಆಧ್ಯಾತ್ಮಿಕ ಬಲ ಸಿಗಬೇಕೆಂದು ಉಪಾಸನೆ ಮಾಡುವುದು, ಉದಾ. ಯಾವುದಾದರೊಂದು ಕಾರ್ಯವು ಪೂರ್ಣವಾಗಲು ನಾಮಜಪ, ಯಜ್ಞಯಾಗಾದಿ ಉಪಾಸನೆ ಮಾಡುವುದು. ಇದಕ್ಕೆ ಕಾಲಾನುಸಾರ ಶೇ. ೭೦ ರಷ್ಟು ಮಹತ್ವವಿದೆ, ಅಂದರೆ ಎಲ್ಲಕ್ಕಿಂತ ಹೆಚ್ಚು ಮಹತ್ವವಿದೆ. ಕಾಲಾನುಸಾರ ಎಲ್ಲ ಹಿಂದೂಗಳು ಧರ್ಮಸಂಸ್ಥಾಪನೆಗಾಗಿ ತಮ್ಮ ಕ್ಷಮತೆ ಮತ್ತು ಸಾಧನೆಗನುಸಾರ ಕ್ಷಾತ್ರತೇಜದ ಮತ್ತು ಬ್ರಾಹ್ಮತೇಜದ ಕಾರ್ಯವನ್ನು ಮಾಡುವುದೆಂದರೆ, ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿ ಪ್ರತ್ಯಕ್ಷ ಸಹಭಾಗಿಯಾಗುವುದು !

(ಆಧಾರ : ಸನಾತನದ ಗ್ರಂಥ ‘ಹಿಂದೂ ರಾಷ್ಟ್ರ ಏಕೆ ಬೇಕು ?’)

ಹಿಂದೂ ಸಮಾಜಕ್ಕೆ ತನ್ನದೇ ಆದ ಹಿಂದೂ ರಾಷ್ಟ್ರವು ಏಕೆ ಬೇಕು ?

೧೫ ಆಗಸ್ಟ್ ೧೯೪೭ ರಂದು ಮುಸಲ್ಮಾನರಿಗೆ ಪಾಕಿಸ್ತಾನ ಮತ್ತು ಹಿಂದೂಗಳಿಗೆ ಹಿಂದೂಸ್ಥಾನವು ಜನಿಸಿತು; ಆದರೆ ಅನಂತರ ೨೬ ಜನವರಿ ೧೯೫೦ ರಂದು ಹಿಂದೂಸ್ಥಾನವನ್ನು ಜಾತ್ಯತೀತ ದೇಶವೆಂದು ಘೋಷಿಸಲಾಯಿತು.

ಎಲ್ಲ ಸ್ವತಂತ್ರ ಜಾತಿಗಳು ತಮ್ಮದೇ ಆದ ರಾಷ್ಟ್ರವನ್ನು ಹೊಂದಿವೆ. ಉದಾ : ಆಂಗ್ಲರು, ಫ್ರೆಂಚ್, ಜರ್ಮನ್, ಚೀನಿ, ಜಪಾನಿ, ಇವರಿಗೆ ತಮ್ಮದೇ ಆದ ರಾಷ್ಟ್ರ ಇದೆ, ಹಾಗಿದ್ದರೆ ಹಿಂದೂಗಳಿಗೆ ಹಿಂದೂ ರಾಷ್ಟ್ರ ಏಕೆ ಬೇಡ ?

ಪ್ರಸ್ತುತ ಪ್ರತಿಯೊಬ್ಬ ಭಾರತೀಯ ‘ಹಿಂದೂ ಅಲ್ಲದ ಕಾರಣ ಭಾರತ ಸರಕಾರವು ಹಿಂದೂ ಸರಕಾರ ಅಲ್ಲ : ‘ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಿದ್ದಾರೆ; ಆದ್ದರಿಂದ ಭಾರತ ಸರಕಾರ ಹಿಂದೂ ಸರಕಾರವಾಗಿದೆ ಈ ಯುಕ್ತಿವಾದ ತಪ್ಪಾಗಿದೆ. ಪ್ರತಿಯೊಬ್ಬ ಭಾರತೀಯನು ಹಿಂದೂ ಅಲ್ಲ, ಅದರಂತೆ ಭಾರತದ ಪ್ರತಿಯೊಂದು ಸರಕಾರವು ಹಿಂದೂ ಸರಕಾರ ಅಲ್ಲ.

ಔರಂಗಜೇಬನ ರಾಜ್ಯದಲ್ಲಿ ಹಿಂದೂಗಳು ಬಹುಸಂಖ್ಯೆ ಯಲ್ಲಿದ್ದರೂ, ಅದು ಹಿಂದೂ ರಾಜ್ಯವಾಗಿರಲಿಲ್ಲ. ಆಂಗ್ಲರ ಆಳ್ವಿಕೆಯಲ್ಲಿ ಭಾರತದ ಸರಕಾರವನ್ನು ‘ಇಂಡಿಯನ್ ಗವರ್ನಮೆಂಟ್ ಎನ್ನುತ್ತಿದ್ದರು; ಆದರೆ ಆಗಲೂ ಅದು ಹಿಂದೂ ರಾಷ್ಟ್ರವಾಗಿರಲಿಲ್ಲ.

ಭಾರತದ ಸ್ವಾತಂತ್ರ್ಯವು ಹಿಂದೂಗಳ ಸತತ ಸಂಘರ್ಷ ಮತ್ತು ಬಲಿದಾನದ ಒಟ್ಟು ಫಲವಾಗಿದೆ.

(ಮಾಸಿಕ ಅಭಯ ಭಾರತ,  ೧೫ ಅಕ್ಟೋಬರ್ ರಿಂದ ೧೪ ನವೆಂಬರ್ ೨೦೧೦)