ರಶಿಯಾ ಸರಕಾರದಿಂದ ಕೊರೋನಾ ವಿರುದ್ಧದ ಲಸಿಕೆಗೆ ಮಾನ್ಯತೆ ರಾಷ್ಟ್ರಾಧ್ಯಕ್ಷ ಪುತಿನ್‌ನ ಮಗಳಿಗೂ ನೀಡಲಾಯಿತು ಲಸಿಕೆ!

ರಶಿಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮೀರ್ ಪುತಿನ್ ಇವರು ಕೊರೋನಾ ರೋಗಾಣುವಿನ ವಿರುದ್ಧ ಲಸಿಕೆಗೆ ಮಾನ್ಯತೆ ನೀಡಿದ್ದಾರೆ. ಆದ್ದರಿಂದ ಲಸಿಕೆಗೆ ಮಾನ್ಯತೆಯನ್ನು ನೀಡುವ ರಶಿಯಾ ಜಗತ್ತಿನ ಮೊದಲನೇಯ ದೇಶವಾಗಿದೆ. ‘ನನ್ನ ಇಬ್ಬರು ಮಗಳಿಗೂ ಇದರ ಲಸಿಕೆಯನ್ನು ನೀಡಲಾಗಿದೆ’, ಎಂದು ಪುತಿನ ಹೇಳಿದ್ದಾರೆ. ರಶಿಯಾದ ‘ಗಾಮಾಲಿಯಾ ಇನ್‌ಸ್ಟಿಟ್ಯುಟ್ ಆಫ್ ಆಪಿಡೆಮಿಯೊಲಾಜಿ’ ಹಾಗೂ ‘ಮೈಕ್ರೊಬಯೋಲಾಜಿ’ ಇವು ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಶ್ರೀರಾಮಮಂದಿರದ ಪುನರ್ ಸ್ಥಾಪನೆಯಾದ ನಂತರ ಬುದ್ಧಿಜೀವಿಗಳು ಹಾಗೂ ಪ್ರಗತಿಪರರ ಒತ್ತಡದಿಂದಾಗಿ ದೇವಸ್ಥಾನದ ಪೂಜೆ-ಅರ್ಚನೆ, ಧಾರ್ಮಿಕ ವಿಧಿ ಇತ್ಯಾದಿ ಅಂಶಗಳನ್ನು ಹಾಗೂ ಧರ್ಮನಿಯಮಗಳನ್ನು ಪಾಲಿಸದಿದ್ದರೆ ಹಿಂದೂಗಳು ಪುನಃ ವೈಯಕ್ತಿಕವಾಗಿ ಹಾಗೂ ರಾಷ್ಟ್ರೀಯವಾಗಿ ದುಃಖದಿಂದ ಬಳಲುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹೀಗಾದರೆ, ಶ್ರೀರಾಮ ಹಾಗೂ ದೇವತೆಗಳು ಅವರತ್ತ ಗಮನ ನೀಡುವರೇ ?

ಅಸಂಖ್ಯಾತ ಭಕ್ತರ ತ್ಯಾಗ, ಬಲಿದಾನ ಮತ್ತು ಸಂಘರ್ಷದಿಂದಲೇ ರಾಮ ಮಂದಿರದ ಕನಸು ನನಸಾಗುತ್ತಿದೆ ! – ಪ್ರಧಾನಮಂತ್ರಿ

ದೇಶದ ಹಲವು ತಲೆಮಾರುಗಳು ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನು ಅರ್ಪಿಸಿವೆ. ಆಗಸ್ಟ್ ೧೫ ಲಕ್ಷಾಂತರ ದೇಶಭಕ್ತರ ಬಲಿದಾನದ ಸಂಕೇತವಾಗಿದೆ. ಅದೇ ರೀತಿಯಲ್ಲಿ, ರಾಮಮಂದಿರಕ್ಕಾಗಿ ಅನೇಕ ದಶಕಗಳ ಕಾಲ ನಿರಂತರವಾಗಿ ಮತ್ತು ಏಕನಿಷ್ಠೆಯಿಂದ ಹೋರಡಿದ ಅನೇಕ ತಲೆಮರುಗಳ ತಪಸ್ಸು, ತ್ಯಾಗ ಮತ್ತು ಸಂಕಲ್ಪಗಳ ಪ್ರತೀಕವೆಂದರೆ ಇಂದಿನ ಈ ರಾಮಮಂದಿರದ ಭೂಮಿಪೂಜೆಯ ದಿನವಾಗಿದೆ.

ವಿಶೇಷ ಸಂಪಾದಕೀಯ

ಬಾಬರನು ೧೫೨೮ ರಲ್ಲಿ ಅಯೋಧ್ಯೆಯಲ್ಲಿನ ರಾಮಮಂದಿರವನ್ನು ಧ್ವಂಸ ಮಾಡಿ ಅಲ್ಲಿ ಮಸೀದಿಯನ್ನು ಕಟ್ಟಿದನು. ಆ ಸಂದರ್ಭದಲ್ಲಿ ಹಿಂದೂಗಳು ನಿರಂತರ ೧೦ ದಿನಗಳವರೆಗೆ ಹೋರಾಟ ನಡೆಸಿದ್ದರು. ಬಾಬರನ ತೋಪುಗಳ ಕೈಮೇಲಾಯಿತು. ಗುರುಗೋವಿಂದಸಿಂಹರು ಸಹ ಇದಕ್ಕಾಗಿ ಹೋರಾಡಿದ್ದಾರೆ. ಮೊಗಲರ ಆಡಳಿತದಲ್ಲಿಯೂ ಹಿಂದೂಗಳು ಮಂದಿರಕ್ಕಾಗಿ ಹೋರಾಡುತ್ತಿದ್ದರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಧರ್ಮಶಿಕ್ಷಣ ಮತ್ತು ಸಾಧನೆ ಇವುಗಳ ಅಭಾವದಿಂದ ಕೃತಘ್ನರಾಗಿರುವ ಈಗಿನ ಪೀಳಿಗೆಗೆ ತಂದೆ-ತಾಯಿಯರ ಆಸ್ತಿ ಮಾತ್ರ ಬೇಕಾಗಿರುತ್ತದೆ; ಆದರೆ ಅವರು ವೃದ್ಧ ತಂದೆ-ತಾಯಿಯರ ಸೇವೆ ಮಾಡಲು ಸಿದ್ಧರಿರುವುದಿಲ್ಲ. ವೈಜ್ಞಾನಿಕ ಸಂಶೋಧನೆಯ ಧ್ಯೇಯವು ಮನುಷ್ಯನಿಗೆ ಈಶ್ವರಪ್ರಾಪ್ತಿ ಮಾಡಿಸುವುದ ಅಲ್ಲ ಬದಲಾಗಿ ಕೇವಲ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಸುಖಪ್ರಾಪ್ತಿ ಮಾಡಿಸಿಕೊಡುವುದು ಆಗಿದೆ  !

ಗೋಕುಲಾಷ್ಟಮಿಯ ಶುಭದಿನದಂದು ನೇಪಾಳಿ ಭಾಷೆಯಲ್ಲಿ ‘ಸನಾತನ ಸಂಸ್ಥೆ’ಯ ಜಾಲತಾಣದ ಲೋಕಾರ್ಪಣೆ !

ಸನಾತನ ಸಂಸ್ಥೆ ಹಿಂದೂ ಧರ್ಮಪ್ರಸಾರದ ವ್ರತವನ್ನು ಕೈಗೆತ್ತಿಕೊಂಡು ಕಾರ್ಯನಿರತವಾಗಿದ್ದರಿಂದ ನಾವು ಈ ಬೇಡಿಕೆಯನ್ನು ಪೂರ್ಣ ಮಾಡುತ್ತಿದ್ದೇವೆ. ಜಗತ್ತಿನಾದ್ಯಂತ ನೇಪಾಳಿ ಭಾಷೆಯವರಿಗೆ ಧರ್ಮಶಿಕ್ಷಣ ಸಿಗಲು ನಾವು ನೇಪಾಳಿ ಜಾಲತಾಣವನ್ನು ಆರಂಭಿಸುತ್ತಿದ್ದೇವೆ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ್ ಇವರು ಹೇಳಿದ್ದಾರೆ.

ಧಾರವಾಡದಲ್ಲಿ ಮತಾಂಧರಿಂದ ಬಾಲಕಿ ಮೇಲೆ ಅತ್ಯಾಚಾರ

ಇಲ್ಲಿ ಓರ್ವ ಹಿಂದೂ ಬಾಲಕಿಯ ಮೇಲೆ ಬಶೀರನು ಅತ್ಯಾಚಾರ ಮಾಡಿದ್ದರಿಂದ ಸಂತ್ರಸ್ತೆಯು ಕ್ರಿಮಿನಾಶಕ ಸೇವಿಸಿದಳು. ಆಸ್ಪತ್ರೆಯಲ್ಲಿ ಆಕೆಯ ಮೇಲೆ ಚಿಕಿತ್ಸೆ ನಡೆಯುತ್ತಿರುವಾಗಲೇ ಆಕೆಯ ಮೃತಪಟ್ಟಳು. ಪೊಲೀಸರು ಬಶೀರನನ್ನು ಹುಡುಕುತ್ತಿದ್ದಾರೆ. ಬಶೀರನಿಗೆ ಆಕೆಯ ಕುಟುಂಬದವರ ಪರಿಚಯವಿತ್ತು. ಆತ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ. ಆತ ಹುಡುಗಿಯ ಮನೆಗೂ ಹೋಗುತ್ತಿದ್ದ.

ರಕ್ಷಣಾ ವಿಷಯದ ೧೦೧ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದರ ಮೇಲೆ ನಿರ್ಬಂಧ ‘ಆತ್ಮನಿರ್ಭರ ಭಾರತ’ಕ್ಕೆ ಕೇಂದ್ರ ಸರಕಾರದ ನಿರ್ಣಯ

ಭಾರತೀಯ ರಕ್ಷಣಾ ಸಚಿವಾಲಯದಿಂದ ‘ಆತ್ಮನಿರ್ಭರ ಭಾರತ’ ಆಯೋಜನೆಯ ಅಡಿಯಲ್ಲಿ ೧೦೧ ರಕ್ಷಣಾ ಸಾಮಗ್ರಿಗಳ ಒಂದು ಪಟ್ಟಿ ಮಾಡಿ ಅವುಗಳನ್ನು ಆಮದು ಮಾಡಿಕೊಳ್ಳುವುದರ ಮೇಲೆ ನಿರ್ಬಂಧ ಹೇರಿದೆ. ರಕ್ಷಣಾ ಸಚಿವ ರಾಜನಾಥ ಸಿಂಹ ಇವರು ಟ್ವೀಟ್ ಮಾಡಿ ಈ ಮಾಹಿತಿಯನ್ನು ನೀಡಿದರು.

ಮಾಜಿ ರಾಷ್ಟ್ರಪತಿ ಪ್ರಣವ ಮುಖರ್ಜಿಯವರಿಗೆ ಕೊರೋನಾದ ಸೋಂಕು

ಭಾರತದ ಮಾಜಿ ರಾಷ್ಟ್ರಪತಿ ಪ್ರಣವ ಮುಖರ್ಜಿಯವರಿಗೆ ಕೊರೋನಾದ ಸೋಂಕು ತಗಲಿದೆ. ಅವರು ಸ್ವತಃ ಟ್ವೀಟ್ ಮಾಡಿ ಈ ಮಾಹಿತಿಯನ್ನು ನೀಡಿದ್ದಾರೆ. ಅವರು, ‘ಒಂದು ತೊಂದರೆಯ ಬಗ್ಗೆ ಚಿಕಿತ್ಸಾಲಯಕ್ಕೆ ಹೋದಾಗ ಆ ಸಮಯದಲ್ಲಿ ಮಾಡಲಾಗಿದ್ದ ಪರೀಕ್ಷಣೆಯಲ್ಲಿ ನನಗೆ ಕೊರೋನಾದ ಸೋಂಕು ತಗಲಿರುವ ಬಗ್ಗೆ ತಿಳಿಯಿತು.

ಪ್ರಸಿದ್ಧ ತಿರುಪತಿ ದೇವಸ್ಥಾನದ ಒಟ್ಟು ೭೪೩ ಸಿಬ್ಬಂದಿಗಳಿಗೆ ಕೊರೋನಾದ ಸೋಂಕು

ಇಲ್ಲಿಯ ಪ್ರಸಿದ್ಧ ಭಗವಾನ ಶ್ರೀ ವೆಂಕಟೇಶ ದೇವಸ್ಥಾನದಲ್ಲಿಯ ೭೪೩ ಸಿಬ್ಬಂದಿಗಳಿಗೆ ಕೊರೋನಾದ ಸೋಂಕು ತಗಲಿದ್ದು ಅದರಲ್ಲಿ ೩ ಜನರು ಮೃತಪಟ್ಟಿದ್ದಾರೆ. ಅದೇರೀತಿ ಇದರಲ್ಲಿ ೪೦೨ ಜನರು ಗುಣಮುಖರಾಗಿದ್ದು, ೩೩೮ ಜನರ ಮೇಲೆ ಚಿಕಿತ್ಸೆ ನಡೆಯುತ್ತಿದೆ.