ರಾಮಾಯ ತಸ್ಮೈ ನಮಃ |
‘ರಾಮೋ ರಾಜಮಣಿಃ ಸದಾ ವಿಜಯತೆ, ರಾಮಮ್ ರಮೇಶಮ್ ಭಜೆ |
ರಾಮೇಣಾಭಿಹತಾ ನಿಶಾಚರಚಮೂ, ರಾಮಾಯ ತಸ್ಮೈ ನಮಃ |,
ಅಂದರೆ ‘ರಾಜಶ್ರೇಷ್ಠನಾದ ರಾಮನು ಸದಾ ವಿಜಯಿಯಾಗುತ್ತಾನೆ. ಆ ರಾಮಪತಿ (ಸೀತಾಪತಿ) ರಾಮನನ್ನು ನಾನು ಭಜಿಸುತ್ತೇನೆ. ರಾಕ್ಷಸರ ಸೈನ್ಯವನ್ನು ನಾಶಗೊಳಿಸಿದ ಆ ರಾಮನಿಗೆ ನನ್ನ ನಮಸ್ಕಾರಗಳು. ಇಂತಹ ಪ್ರಭು ಶ್ರೀರಾಮಚಂದ್ರನ ಅಯೋಧ್ಯಾನಗರದಲ್ಲಿ ರಾಮ ಮಂದಿರದ ಪುನರ್‌ನಿರ್ಮಾಣದ ಭೂಮಿ ಪೂಜೆಯು ೫ ಆಗಸ್ಟ್ ೨೦೨೦ ರಂದು, ಅಂದರೆ ಶ್ರಾವಣ ಕೃಷ್ಣ ಪಕ್ಷ ಬಿದಿಗೆ, ಕಲಿಯುಗ ವರ್ಷ ೫೧೨೨ ರಂದು ನೆರವೇರಿತು. ಇದೊಂದು ದೊಡ್ಡ ಸೌಭಾಗ್ಯದ ಕ್ಷಣವಾಗಿದೆ. ಭಾರತದ ಅನಂತ ವರ್ಷಗಳ ಇತಿಹಾಸದ ಹಿನ್ನೆಲೆಯಲ್ಲಿ ಮತ್ತು ಮುಂದಿನ ಹೊಸ ಪೀಳಿಗೆಗಳ ದೃಷ್ಟಿಯಲ್ಲಿಯೂ ಈ ಮಹತ್ವಪೂರ್ಣ ಘಟನೆಗೆ ಸಾಕ್ಷೀದಾರರಾಗುವ ಭಾಗ್ಯ ನಮಗೆ ಲಭಿಸಿತು, ಇದರ ಸಂವೇದನಾಶೀಲತೆಯನ್ನು ಹಿಂದೂಗಳು ತಮ್ಮ ಅಂತರ್ಮನಸ್ಸಿನಲ್ಲಿ ಜಾಗೃತವಾಗಿಟ್ಟುಕೊಳ್ಳಬೇಕು !
ರಾಮಮಂದಿರದ ಹೋರಾಟದ ೫೦೦ ವರ್ಷಗಳ ಸುದೀರ್ಘ ಇತಿಹಾಸವು ಹಿಂದೂಗಳ ಅಸ್ತಿತ್ವದ ಹೋರಾಟದ ಇತಿಹಾಸವಾಗಿದೆ. ರಾಮಮಂದಿರದ ಭೂಮಿಪೂಜೆಯ ಮುಹೂರ್ತವನ್ನು ಕೇವಲ ರಾಜಕೀಯ ಅಥವಾ ಕೇವಲ ಧಾರ್ಮಿಕ ದೃಷ್ಟಿಯಿಂದ ನೋಡದೆ ಅದಕ್ಕೂ ಆಚೆಗಿರುವ ಕಾಲದ ಪ್ರವಾಹದಲ್ಲಿ ಅದರ ವ್ಯಾಪಕ ಆಧ್ಯಾತ್ಮಿಕ ಅರ್ಥವನ್ನು ಗಮನಿಸಿದರೆ, ಹಿಂದೂಗಳು ಈ ಕ್ಷಣದ ಚೈತನ್ಯದ ಸ್ತರದಲ್ಲಿ ಲಾಭ ಪಡೆಯಬಹುದು.
‘ಈಶ್ವರಪ್ರಾಪ್ತಿಯು ಮನುಷ್ಯಜನ್ಮದ ಏಕೈಕ ಉದ್ದೇಶವಾಗಿದೆ. ಧರ್ಮಪಾಲನೆಯೆಂದರೆ, ವ್ಯಷ್ಟಿ ಹಾಗೂ ಸಮಷ್ಟಿ ಜೀವನದಲ್ಲಿನ ಎಲ್ಲ ಕರ್ತವ್ಯಗಳನ್ನು ನಿರ್ವಹಿಸುತ್ತಾ ಅದನ್ನು ಯಶಸ್ವಿಗೊಳಿಸಲು ಅವನು ಪ್ರಯತ್ನಿಸುವುದು ಮತ್ತು ‘ಯಾವಾಗ ಧರ್ಮಕ್ಕೆ ಗ್ಲಾನಿ ಬಂದು ಅಧರ್ಮ ಹೆಚ್ಚಾಗುತ್ತದೋ, ಆಗ ಭಗವಂತನು ಪ್ರತ್ಯಕ್ಷ ಅವತಾರವನ್ನು ತಾಳಿ ಆ ಗ್ಲಾನಿಯನ್ನು ದೂರ ಮಾಡಿ ಧರ್ಮವನ್ನು, ಅಂದರೆ ರಾಮರಾಜ್ಯವನ್ನು ಸ್ಥಾಪಿಸುತ್ತಾನೆ. ಇದು ಯುಗಯುಗಾಂತರಗಳಿಂದ ನಡೆದು ಬಂದಿರುವ ಸತ್ಯ ವಚನವಾಗಿದೆ. ‘ಶ್ರೀರಾಮನು ಇವೆರಡಕ್ಕೂ ಪರಮೋಚ್ಚ ಆದರ್ಶನಾಗಿದ್ದಾನೆ.
ರಾಮಮಂದಿರದ ಅಸ್ತಿತ್ವದ ಸುದೀರ್ಘ ಹೋರಾಟ !
ಬಾಬರನು ೧೫೨೮ ರಲ್ಲಿ ಅಯೋಧ್ಯೆಯಲ್ಲಿನ ರಾಮಮಂದಿರವನ್ನು ಧ್ವಂಸ ಮಾಡಿ ಅಲ್ಲಿ ಮಸೀದಿಯನ್ನು ಕಟ್ಟಿದನು. ಆ ಸಂದರ್ಭದಲ್ಲಿ ಹಿಂದೂಗಳು ನಿರಂತರ ೧೦ ದಿನಗಳವರೆಗೆ ಹೋರಾಟ ನಡೆಸಿದ್ದರು. ಬಾಬರನ ತೋಪುಗಳ ಕೈಮೇಲಾಯಿತು. ಗುರುಗೋವಿಂದಸಿಂಹರು ಸಹ ಇದಕ್ಕಾಗಿ ಹೋರಾಡಿದ್ದಾರೆ. ಮೊಗಲರ ಆಡಳಿತದಲ್ಲಿಯೂ ಹಿಂದೂಗಳು ಮಂದಿರಕ್ಕಾಗಿ ಹೋರಾಡುತ್ತಿದ್ದರು. ಅನಂತರ ಆಂಗ್ಲರ ಆಡಳಿತದಲ್ಲಿಯೂ ಈ ಹೋರಾಟ ಮುಂದುವರಿಯಿತು. ೧೫ ನೇ ಶತಮಾನದಿಂದ ೧೯೪೮ ರವರೆಗೆ ಸುಮಾರು ೨ ಲಕ್ಷ ಹಿಂದೂಗಳು ಮಂದಿರದ ಹೋರಾಟದಲ್ಲಿ ಆಗಾಗ ಹೋರಾಡುತ್ತಾ ಪ್ರಾಣವನ್ನು ತ್ಯಜಿಸಿದ್ದಾರೆ. ಇವರಲ್ಲಿ ೧ ಲಕ್ಷದ ೭೪ ಸಾವಿರ ಹಿಂದೂಗಳು ಬಾಬರನನ್ನು ವಿರೋಧಿಸುತ್ತಿರುವಾಗ ಯುದ್ಧದಲ್ಲಿ ಮೃತಪಟ್ಟರು. ನಮ್ಮದೇ ದೇಶದಲ್ಲಿ ನಮ್ಮದೇ ಅಸ್ಮಿತೆಗಾಗಿ ಹೋರಾಡುವ ಈ ನೂರಾರು ಹುತಾತ್ಮ ದೇಶಭಕ್ತರ ಕುಟುಂಬದವರ ಮನೆಯ ಸ್ಥಿತಿ ಹೇಗಾಗಿರಬಹುದು ? ಸ್ವಾತಂತ್ರ್ಯದ ನಂತರ ಹಿಂದೂಬಹುಸಂಖ್ಯಾತ ಭಾರತದಲ್ಲಿ ಸಮಾಜವಾದಿ, ಕಾಂಗ್ರೆಸ್ ಹಾಗೂ ಸಾಮ್ಯವಾದಿ ಎಡಪಂಥೀಯರು ತಮ್ಮ ಪ್ರಚಂಡ ಹಿಂದೂದ್ವೇಷಿ ಮಾನಸಿಕತೆಯಿಂದ ಮಂದಿರ ನಿರ್ಮಾಣದ ಕಾರ್ಯದಲ್ಲಿ ಅಡ್ಡಿಪಡಿಸಿದ್ದನ್ನು ನೆನೆದರೆ ಆಕ್ರೋಶ ನೆತ್ತಿಗೇರುತ್ತದೆ. ಹಿಂದೂಗಳು ಸಹಿಷ್ಣುಗಳಾಗಿರುವುದರಿಂದ ಅವರು ಸುದೀರ್ಘ ಕಾಲ ನ್ಯಾಯಾಂಗದ ತೀರ್ಪಿಗಾಗಿ ದಾರಿ ಕಾಯುತ್ತಿದ್ದರು. ೬ ಡಿಸೆಂಬರ್ ೧೯೯೨ ರಂದು ಈ ಹೋರಾಟದ ನಿರ್ಣಾಯಕವಾಯಿತು. ಉತ್ತರಪ್ರದೇಶದ ರಾಜ್ಯಸರಕಾರವು ನಿರ್ಬಂಧ ಹೇರಿದ್ದರೂ ‘ಮಂದಿರಕ್ಕಾಗಿ ದೇಶದಾದ್ಯಂತದಿಂದ ಲಕ್ಷಗಟ್ಟಲೆ ಕರಸೇವಕರು ಇಟ್ಟಿಗೆಗಳೊಂದಿಗೆ ಅತ್ಯಂತ ಆಯೋಜನಾಬದ್ಧವಾಗಿ ಗುಪ್ತವಾಗಿ ಅಲ್ಲಿ ಸೇರುವುದು, ಇದು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ವೈಶಿಷ್ಟ್ಯಪೂರ್ಣ ಘಟನೆಯಾಗಿತ್ತು. ಕರಸೇವಕರು ಬಾಬರಿ ಮಸೀದಿಯ ಗುಮ್ಮಟವನ್ನು ಧ್ವಂಸ ಮಾಡಿ ಮೊಗಲ ಆಕ್ರಮಕರ ಸೇಡು ತೀರಿಸಿದರು. ಅನಂತರ ಮುಂಬಯಿಯಲ್ಲಿ ಗಲಭೆಯಾಯಿತು. ಹಿಂದೂಬಹುಸಂಖ್ಯಾತ ದೇಶದಲ್ಲಿ ಅವರ ಶ್ರದ್ಧಾಸ್ಥಾನಕ್ಕಾಗಿ ಹೋರಾಡುವ ಹಿಂದೂಗಳ ಮೇಲೆ ಎಷ್ಟು ಘೋರ ಅನ್ಯಾಯ ! ವಿದೇಶಿ ಮಹಿಳೆ ಅಧ್ಯಕ್ಷೆಯಾಗಿದ್ದ ಕಾಂಗ್ರೆಸ್ ಪಕ್ಷ ರಾಮಾಯಣ ಮತ್ತು ರಾಮಸೇತುವೆ ಕೂಡ ಕಾಲ್ಪನಿಕವೆಂದು ನಿರ್ಣಯಿಸಿತು ! ಅವರ ವಕೀಲ ಕಪಿಲ ಸಿಬ್ಬಲ ಮಂದಿರದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಿದರು. ಬಾಬರಿ ಮಸೀದಿ ಆಕ್ಶನ್ ಸಮಿತಿಯ ವತಿಯಿಂದಲೇ ಭಾರತದ ಎಡಪಂಥೀಯ ವಿಚಾರದ ಪತ್ರಕರ್ತರು ರಾಮಮಂದಿರದ ವಿರುದ್ಧ ಸುಳ್ಳು ಇತಿಹಾಸವನ್ನು ಹಬ್ಬಿಸುವ ದೊಡ್ಡ ಆಂದೋಲನವನ್ನು ಅಖಂಡವಾಗಿ ನಡೆಸಿದರು. ರೋಮಿಲಾ ಥಾಪರ ಇವರಂತಹ ಅನೇಕ ಕಟ್ಟರ್ ಸಾಮ್ಯವಾದಿ ಇತಿಹಾಸಕಾರರು ಮತ್ತು ಅನೇಕ ಸಾಮ್ಯವಾದಿ ಪತ್ರಕರ್ತರು ಸ್ವತಃ ತಾವೇ ಸಂಶೋಧಕರಾಗಿರುವಂತೆ ವಿವಿಧ ಆಶ್ಚರ್ಯಕರವಾದ ವಿಷಯಗಳನ್ನು ಮಂಡಿಸಿ ಅನೇಕ ವರ್ಷಗಳ ವರೆಗೆ ರಾಮಮಂದಿರದ ಪುರಾವೆಗಳನ್ನು ದ್ವೇಷಪೂರ್ಣವಾಗಿ ವಿರೋಧಿಸಿದರು. ‘ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್(ICHR) ನ ಅಧ್ಯಕ್ಷ ಮತ್ತು ಜೆಎನ್‌ಯುನಲ್ಲಿ ಸಾಮ್ಯವಾದದ ಅಡ್ಡೆ ನಿರ್ಮಾಣ ಮಾಡಿರುವ ಇರ್ಫಾನ್ ಹಬೀಬನು ಮುಸಲ್ಮಾನ ಬುದ್ಧಿಜೀವಿಗಳನ್ನು ಉದ್ರೇಕಿಸಿದನು. ‘ಮಸೀದಿ ನಿರ್ಮಾಣ ಮಾಡಿರುವ ಸಂಕೇತವೇ ಇರಲಿಲ್ಲ, ಆದರೆ ಬೌದ್ಧ ಹಾಗೂ ಜೈನ ತೀರ್ಥಕ್ಷೇತ್ರಗಳಿದ್ದವು, ಎಂಬ ವಾದವನ್ನು ಮುಂದಿಟ್ಟಿದ್ದರು; ಆದರೆ ಕೊನೆಗೆ ಪದ್ಮಶ್ರೀ ಕೆ.ಕೆ ಮಹಮ್ಮದ ಇವರು ಸಂಶೋಧನೆ ಮಾಡಿರುವ ರಾಮಮಂದಿರದ ಪುರಾವೆಯನ್ನು ಎಲ್ಲಕ್ಕಿಂತ ಮಹತ್ವದ ಪುರಾವೆಯೆಂದು ನಿರ್ಧರಿಸಲಾಯಿತು; ಆದರೂ ಒಂದೇ ಒಂದು ಆಂಗ್ಲ ದಿನನಪತ್ರಿಕೆಯೂ ಅವರ ಪುರಾವೆಯನ್ನು ಪ್ರಕಟಿಸಲಿಲ್ಲ. ಕೊನೆಗೆ ೯ ನವೆಂಬರ ೨೦೧೯ ರಂದು ನ್ಯಾಯಾಲಯದ ನಿರ್ಣಯದಲ್ಲಿ ರಾಮಮಂದಿರ ನಿರ್ಮಾಣದ ಮಾರ್ಗವು ಸುಗಮವಾಯಿತು. ವಾಸ್ತವದಲ್ಲಿ ಎಲ್ಲವೂ ಸೂರ್ಯ ಪ್ರಕಾಶದಷ್ಟು ಸ್ಪಷ್ಟವಾಗಿರುವಾಗ ಬೇರೆ ಯಾವುದೇ ಪುರಾವೆಯ ಅವಶ್ಯಕತೆಯಿರಲಿಲ್ಲ. ೫ ಸಾವಿರ ವರ್ಷಗಳ ಹಿಂದಿನ ರಾಮಾಯಣದಲ್ಲಿನ ಅಯೋಧ್ಯಾನಗರವು ಇಂದಿಗೂ ಅದೇ ಹೆಸರಿನಲ್ಲಿ ಅಸ್ತಿತ್ವದಲ್ಲಿದೆ, ಇದೊಂದು ದೊಡ್ಡ ಪುರಾವೆಯಾಗಿದೆ ! ಆದರೂ ಹಿಂದೂಗಳು ಇಷ್ಟು ವರ್ಷ ನ್ಯಾಯಾಲಯದ ನಿರ್ಣಯ ಕ್ಕಾಗಿ ಕಾಯುವುದು, ಇದು ಅವರ ಸಹಿಷ್ಣುತೆಯ ಸರ್ವೋಚ್ಚ ಉದಾಹರಣೆಯಾಗಿದೆ !
…ಇದೊಂದು ಆರಂಭ ಮಾತ್ರ
ಈ ಹೋರಾಟ ಈಗ ಮುಗಿದು ಹಿಂದೂಗಳ ಮಂದಿರ ನಿರ್ಮಾಣದ ಕನಸು ನನಸಾಯಿತು, ಎನ್ನುವಷ್ಟಕ್ಕೇ ಸೀಮಿತವಲ್ಲ. ಇದು ಕಲಿಯುಗಾಂತರ್ಗತ ಆರನೇ ಕಲಿಯುಗ ನಡೆಯುತ್ತಿದ್ದು ಅದರಲ್ಲಿನ ಮುಂದಿನ ಸಾವಿರ ವರ್ಷಗಳವರೆಗೆ ನಡೆಯುವ ಸತ್ಯಯುಗದ ಉದಯವಾಗುವ ಸಮಯ ಸಮೀಪಿಸುತ್ತಿದೆ. ಮೊಗಲ ಆಕ್ರಮಕರು ಕೇವಲ ರಾಮಮಂದಿರವಷ್ಟೇ ಅಲ್ಲ, ಕಾಶಿ ಮತ್ತು ಮಥುರಾ ಸಹಿತ ಭಾರತದ ಪ್ರತಿಯೊಂದು ಊರಿನ ಲಕ್ಷಗಟ್ಟಲೆ ಚಿಕ್ಕಪುಟ್ಟ ಮಂದಿರಗಳನ್ನು ಕೆಡವಿ ಅಥವಾ ಅದರ ಪಕ್ಕದಲ್ಲಿಯೇ ಮಸೀದಿಗಳನ್ನು ನಿರ್ಮಿಸಿದರು. ಇಷ್ಟು ಮಾತ್ರವಲ್ಲ, ತಾಜಮಹಲ ‘ತೇಜೋಮಹಾಲಯ (ಶಿವನ ಸ್ಥಾನ) ಆಗಿದೆಯೆಂದು ಇತಿಹಾಸತಜ್ಞ ಪು.ನಾ. ಓಕ್ ಇವರು ಸ್ಪಷ್ಟವಾದ ಪುರಾವೆಸಹಿತ ತೋರಿಸಿದ್ದಾರೆ. ಆದ್ದರಿಂದ ಇನ್ನು ಮುಂದೆ ಹಿಂದೂಗಳು ತಮ್ಮ ಧ್ಯೇಯವನ್ನು ಸ್ಪಷ್ಟವಾಗಿ ನಿರ್ಧರಿಸುವುದು ಆವಶ್ಯಕವಾಗಿದೆ. ಹಿಂದೂಗಳ ಅವತಾರಿ ರಾಜಾ ಶ್ರೀರಾಮನು ೧೪ ವರ್ಷಗಳು ವನವಾಸವನ್ನು ಭೋಗಿಸಬೇಕಾಯಿತು. ರಾವಣನ ವಧೆಯ ನಂತರ ಅಯೋಧ್ಯೆಯ ಪ್ರಜೆಗಳಿಗೆ ರಾಮರಾಜ್ಯವನ್ನು ಅನುಭವಿಸಲು ಸಿಕ್ಕಿತ್ತು. ಇಂದಿನ ಯುಗದಲ್ಲಿ ಶ್ರೀರಾಮನು ಡೇರೆಯಲ್ಲಿ ಉಳಿಯಬೇಕಾಯಿತು, ಏಕೆಂದರು ಅದು ಈ ಯುಗದಲ್ಲಿನ ರಾವಣವೃತ್ತಿಯನ್ನು ನಾಶಗೊಳಿಸಿ ಮುಂಬರುವ ಕಾಲದಲ್ಲಿ ರಾಮರಾಜ್ಯದ ಉದಯವನ್ನು ನಿರ್ಮಾಣ ಮಾಡಲಿಕ್ಕಾಗಿಯೆ ಇತ್ತು ! ಶ್ರೀರಾಮನು ಅಶ್ವಮೇಧ ಯಜ್ಞವನ್ನು ಮಾಡಿ ಪೃಥ್ವಿಯ ಮೇಲೆ ರಾಜ್ಯವನ್ನು ಸ್ಥಾಪಿಸಿದರು. ಅವನ ತತ್ತ್ವ ಮತ್ತು ಆಶೀರ್ವಾದದಿಂದ ಮುಂಬರುವ ಕಾಲದಲ್ಲಿ ಹಿಂದೂಗಳ ಸಂಘಟನೆಯು ಪ್ರಚಂಡವಾಗಿ ಬೆಳೆದು ಹಿಂದೂ ರಾಷ್ಟ್ರ ಅಂದರೆ ರಾಮರಾಜ್ಯದ ಬುನಾದಿಯನ್ನು ಕಟ್ಟಿ ಮುಂದೆ ಅದು ಇಡೀ ವಿಶ್ವದಲ್ಲಿ ನಿರ್ಮಾಣವಾಗುವುದು ! ಆದ್ದರಿಂದ ಭೂಮಿಪೂಜೆಯು ಅದರ ಪ್ರಾರಂಭದ ಒಂದು ಮಹತ್ವದ ಘಟನೆಯಾಗಿದೆ.