ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ
‘ಶ್ರೀರಾಮಮಂದಿರದ ಪುನರ್ ಸ್ಥಾಪನೆಯಾದ ನಂತರ ಬುದ್ಧಿಜೀವಿಗಳು ಹಾಗೂ ಪ್ರಗತಿಪರರ ಒತ್ತಡದಿಂದಾಗಿ ದೇವಸ್ಥಾನದ ಪೂಜೆ-ಅರ್ಚನೆ, ಧಾರ್ಮಿಕ ವಿಧಿ ಇತ್ಯಾದಿ ಅಂಶಗಳನ್ನು ಹಾಗೂ ಧರ್ಮನಿಯಮಗಳನ್ನು ಪಾಲಿಸದಿದ್ದರೆ ಹಿಂದೂಗಳು ಪುನಃ ವೈಯಕ್ತಿಕವಾಗಿ ಹಾಗೂ ರಾಷ್ಟ್ರೀಯವಾಗಿ ದುಃಖದಿಂದ ಬಳಲುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹೀಗಾದರೆ, ಶ್ರೀರಾಮ ಹಾಗೂ ದೇವತೆಗಳು ಅವರತ್ತ ಗಮನ ನೀಡುವರೇ ?
ಮೊಗಲ ಆಕ್ರಮಣಕಾರ ಬಾಬರನು ೧೫೨೮ ರಲ್ಲಿ ಧ್ವಂಸ ಮಾಡಿದ್ದ ಶ್ರೀರಾಮ ಮಂದಿರದ ಸ್ಥಾಪನೆಗಾಗಿ ಕೆಲವು ಕರ್ಮಹಿಂದೂಗಳು ೪೯೨ ವರ್ಷಗಳ ಕಾಲ ಪ್ರಯತ್ನಿಸಿದ್ದರು, ಆದರೆ ಅದರತ್ತ ದುರ್ಲಕ್ಷಿಸಿದ್ದ ಹೆಚ್ಚಿನ ಜನ್ಮಹಿಂದೂಗಳತ್ತ ಶ್ರೀರಾಮ ಹಾಗೂ ದೇವತೆಗಳು ಸಹ ಏಕೆ ಗಮನವಿಡಬೇಕು ?
‘ಹಿಂದೆ ಜನರಿಗೆ ‘ಹಿಂದೂ ರಾಷ್ಟ್ರ ಇದು ಕನಸಾಗಿದೆ, ‘ಹಿಂದೂ ರಾಷ್ಟ್ರ ಎಂದಿಗೂ ಸ್ಥಾಪನೆ ಆಗುವುದಿಲ್ಲ, ಎಂದು ಅನಿಸುತ್ತಿತ್ತು; ಆದರೆ ಇಂದು, ‘ಹಿಂದೂ ರಾಷ್ಟ್ರದ ಸ್ಥಾಪನೆ ಖಂಡಿತವಾಗಿಯೂ ಆಗಲಿದೆ ಎಂದು ಹಲವಾರು ಜನರಿಗೆ ಅನಿಸುತ್ತಿದೆ. – ಪರಾತ್ಪರ ಗುರು (ಡಾ.) ಆಠವಲೆ