ರಶಿಯಾ ಸರಕಾರದಿಂದ ಕೊರೋನಾ ವಿರುದ್ಧದ ಲಸಿಕೆಗೆ ಮಾನ್ಯತೆ ರಾಷ್ಟ್ರಾಧ್ಯಕ್ಷ ಪುತಿನ್‌ನ ಮಗಳಿಗೂ ನೀಡಲಾಯಿತು ಲಸಿಕೆ!

ರಶಿಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮೀರ್ ಪುತಿನ್

ಮಾಸ್ಕೊ (ರಶಿಯಾ)- ರಶಿಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮೀರ್ ಪುತಿನ್ ಇವರು ಕೊರೋನಾ ರೋಗಾಣುವಿನ ವಿರುದ್ಧ ಲಸಿಕೆಗೆ ಮಾನ್ಯತೆ ನೀಡಿದ್ದಾರೆ. ಆದ್ದರಿಂದ ಲಸಿಕೆಗೆ ಮಾನ್ಯತೆಯನ್ನು ನೀಡುವ ರಶಿಯಾ ಜಗತ್ತಿನ ಮೊದಲನೇಯ ದೇಶವಾಗಿದೆ. ‘ನನ್ನ ಇಬ್ಬರು ಮಗಳಿಗೂ ಇದರ ಲಸಿಕೆಯನ್ನು ನೀಡಲಾಗಿದೆ’, ಎಂದು ಪುತಿನ ಹೇಳಿದ್ದಾರೆ. ರಶಿಯಾದ ‘ಗಾಮಾಲಿಯಾ ಇನ್‌ಸ್ಟಿಟ್ಯುಟ್ ಆಫ್ ಆಪಿಡೆಮಿಯೊಲಾಜಿ’ ಹಾಗೂ ‘ಮೈಕ್ರೊಬಯೋಲಾಜಿ’ ಇವು ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ. ೨ ತಿಂಗಳಿಗಿಂತಲೂ ಕಡಿಮೆ ಕಾಲಾವಧಿಯಲ್ಲಿ ಈ ಲಸಿಕೆಯು ಮನುಷ್ಯರ ಮೇಲೆ ಪರೀಕ್ಷಣೆಯಾಗಿದೆ. ಲಸಿಕೆಯ ಸುರಕ್ಷಿತತೆ ಹಾಗೂ ಪರಿಣಾಮದ ಬಗ್ಗೆ ಪರೀಕ್ಷಿಸಲು ಕೊನೇಯ ಹಂತವಾಗಿರುವ ವೈದ್ಯಕೀಯ ಪರೀಕ್ಷೆ ಮುಂದುವರೆಯಲಿದೆ. ಸಪ್ಟೆಂಬರ ಅಥವಾ ಅಕ್ಟೋಬರ ತಿಂಗಳಿಂದ ಈ ಲಸಿಕೆಯ ಉತ್ಪಾದನೆ ಮಾಡುವ ಬಗ್ಗೆ ವಿಚಾರ ಮಾಡುತ್ತಿದೆ, ಅದೇರೀತಿ ಸರಕಾರದಿಂದ ಈ ಲಸಿಕೆ ಉಚಿತವಾಗಿ ನೀಡಲಿದೆ.

ಪುತಿನ್ ಇವರ ಅಧ್ಯಕ್ಷತೆಯಲ್ಲಿ ಈ ಲಸಿಕೆಯ ನಿರ್ಮಿತಿಯ ಬಗ್ಗೆ ಒಂದು ಸಭೆ ನಡೆದಿತ್ತು. ಆ ಸಭೆಯಲ್ಲಿ ಪುತಿನ್‌ರವರು, ‘ಕೊರೋನಾಕ್ಕಾಗಿ ನಾವು ತಯಾರಿಸಿದ ಲಸಿಕೆಯ ಬಗ್ಗೆ ನಮಗೆ ಸಂಪೂರ್ಣ ಖಚಿತವಾಗಿರಬೇಕು, ಅದೇರೀತಿ ಕಾಳಜಿಪೂರ್ವಕವಾಗಿ ಹಾಗೂ ಸಮತೋಲನವನ್ನಿಟ್ಟು ನಮಗೆ ಈ ಲಸಿಕೆಯನ್ನು ನಿರ್ಮಿಸಬೇಕಿದೆ’ ಎಂದು ಹೇಳಿದ್ದರು.