ದೇಶದ ಹಲವು ತಲೆಮಾರುಗಳು ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನು ಅರ್ಪಿಸಿವೆ. ಆಗಸ್ಟ್ ೧೫ ಲಕ್ಷಾಂತರ ದೇಶಭಕ್ತರ ಬಲಿದಾನದ ಸಂಕೇತವಾಗಿದೆ. ಅದೇ ರೀತಿಯಲ್ಲಿ, ರಾಮಮಂದಿರಕ್ಕಾಗಿ ಅನೇಕ ದಶಕಗಳ ಕಾಲ ನಿರಂತರವಾಗಿ ಮತ್ತು ಏಕನಿಷ್ಠೆಯಿಂದ ಹೋರಡಿದ ಅನೇಕ ತಲೆಮರುಗಳ ತಪಸ್ಸು, ತ್ಯಾಗ ಮತ್ತು ಸಂಕಲ್ಪಗಳ ಪ್ರತೀಕವೆಂದರೆ ಇಂದಿನ ಈ ರಾಮಮಂದಿರದ ಭೂಮಿಪೂಜೆಯ ದಿನವಾಗಿದೆ. ಅಸಂಖ್ಯಾತ ರಾಮ ಭಕ್ತರ ತ್ಯಾಗ, ಬಲಿದಾನ ಮತ್ತು ಸಂಘರ್ಷದಿಂದಾಗಿ ರಾಮಮಂದಿರದ ಈ ಕನಸು ನನಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ರಾಮಮಂದಿರದ ಐತಿಹಾಸಿಕ ಭೂಮಿ ಪೂಜೆಯ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಪ್ರಧಾನಿ ಮೋದಿ ಅವರು ಹೀಗೆ ಹೇಳಿದರು,
೧. ಇಂದು, ರಾಮ ಜನ್ಮಭೂಮಿಯು ‘ಮುರಿಯುವುದು ಮತ್ತು ಪುನರ್ ನಿರ್ಮಾಣ ಎಂಬ ಜಾಲದಿಂದ ಮುಕ್ತವಾಗಿದೆ. ಇಂದಿನವರೆಗೂ ಒಂದು ಟೆಂಟ್‌ನಲ್ಲಿ ಇದ್ದ ರಾಮಲಲ್ಲಾ ಈಗ ಭವ್ಯವಾದ ದೇವಸ್ಥಾನದಲ್ಲಿ ವಿರಾಜಮಾನವಾಗಲಿದ್ದಾನೆ. ಅದಕ್ಕಾಗಿಯೇ ಈ ಕ್ಷಣ ನಮ್ಮೆಲ್ಲರಿಗೂ ಬಹಳ ಭಾವನಾತ್ಮಕವಾಗಿದೆ.
೨. ಇಲ್ಲಿಯವರೆಗೆ, ಅನೇಕ ಕಟ್ಟಡಗಳು ನಾಶವಾಗಿವೆ ಮತ್ತು ರಾಮನ ಅಸ್ತಿತ್ವವನ್ನು ನಿರ್ನಾಮ ಮಾಡಲು ಎಲ್ಲ ರೀತಿಯ ಮತ್ತು ಆದಷ್ಟು ಪ್ರಯತ್ನಗಳಾದವು; ಆದರೆ ಪ್ರಭು ಶ್ರೀರಾಮ ಇಂದಿಗೂ ನಮ್ಮ ಮನಸ್ಸಿನಲ್ಲಿ ಇದ್ದ ಹಾಗೆ ಇದ್ದಾನೆ. ಇದು ಪ್ರಭು ಶ್ರೀರಾಮಚಂದ್ರನ ಶಕ್ತಿಯಾಗಿದೆ.
೩. ಇಂದು, ಇಡೀ ಭಾರತವು ರಾಮಮಯ, ಪ್ರತಿಯೊಂದು ಮನೆ ದೀಪಮಯವಾಗಿದೆ. ಇಂದಿನ ಕ್ಷಣ ಅತ್ಯಂತ ಭಕ್ತಿಭಾವ ಮತ್ತು ‘ನ ಭೂತೋ ಭವಿಷ್ಯತಿ ಎಂಬಂತಿದೆ. ಭಾಸ್ಕರನ ಸಾಕ್ಷಿಯೊಂದಿಗೆ ಶರಯೂ ನದಿಯ ದಡದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವುದು ನನ್ನ ಭಗ್ಯವಾಗಿದೆ. ಈ ರಾಮಮಂದಿರವು ಶಾಶ್ವತ ಶ್ರದ್ಧೆ, ರಾಷ್ಟ್ರೀಯ ಭಾವನೆ ಮತ್ತು ಸಾಮೂಹಿಕ ಸಂಕಲ್ಪಶಕ್ತಿಯ ಸಂಕೇತವಾಗಲಿದೆ ಮತ್ತು ಅನಂತಕಾಲ ಮನುಷ್ಯನಿಗೆ ಪ್ರೇರೇಪಿಸುತ್ತಿರುವುದು.
ಪ್ರಭು ಶ್ರೀರಾಮನು ಪರಿಪೂರ್ಣನಿದ್ದಾನೆ !
‘ಪ್ರಭು ಶ್ರೀ ರಾಮಚಂದ್ರನ ತೇಜ ಸೂರ್ಯನಂತಿದೆ, ಅವರಲ್ಲಿನ ಕ್ಷಮೆ ಭೂಮಿಯಂತಿದೆ, ಅವರ ಬುದ್ಧಿ ಬೃಹಸ್ಪತಿಯಂತಿದೆ ಮತ್ತು ಯಶಸ್ಸು ಇಂದ್ರನಂತಿದೆ ಎಂದು ನಂಬಲಾಗಿದೆ. ‘ಸತ್ಯ ಎಂಬುದು ಶ್ರೀ ರಾಮನ ಚರಿತ್ರೆಯ ಕೇಂದ್ರ ಬಿಂದುವಗಿದೆ; ಅದಕ್ಕಾಗಿಯೇ ಪ್ರಭು ಶ್ರೀರಾಮನು ಪರಿಪೂರ್ಣನಿದ್ದಾನೆ.