ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥ ಮಹಂತ ನೃತ್ಯಗೋಪಾಲ ದಾಸ ಇವರಿಗೆ ಕೊರೋನಾದ ಸೋಂಕು

ಅಯೋಧ್ಯೆಯಲ್ಲಿಯ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥ ಮಹಂತ ನೃತ್ಯಗೋಪಾಲ ದಾಸ ಇವರಿಗೆ ಕೊರೋನಾದ ಸೋಂಕು ತಗಲಿದೆ. ಆಗಸ್ಟ್ ೫ ರಂದು ನೆರವೇರಿದ್ದ ಶ್ರೀರಾಮಮಂದಿರದ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಮಹಂತ ನೃತ್ಯಗೋಪಾಲ ದಾಸ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

೧೩೦ ಕೋಟಿಗಳ ಪೈಕಿ ಕೇವಲ ಒಂದುವರೆ ಕೋಟಿ ಭಾರತೀಯರು ತೆರಿಗೆಯನ್ನು ಕಟ್ಟುತ್ತಾರೆ !

ಭಾರತದಲ್ಲಿ ಸದ್ಯ ೧೩೦ ಕೋಟಿ ಜನಸಂಖ್ಯೆಯಲ್ಲಿ ಕೇವಲ ಒಂದೂವರೆ ಕೋಟಿ ಜನರು ತೆರಿಗೆಯನ್ನು ಕಟ್ಟುತ್ತಾರೆ. ಕಳೆದ ೬-೭ ವರ್ಷಗಳಲ್ಲಿ ‘ಟ್ಯಾಕ್ಸ್ ರಿಟರ್ನ್’ ತುಂಬಿಸುವ ಸಂಖ್ಯೆ ಎರಡುವರೆ ಕೋಟಿಗೆ ಹೆಚ್ಚಾಗಿದೆ; ಆದರೆ ೧೩೦ ಕೋಟಿ ಜನಸಂಖ್ಯೆಯ ತುಲನೆಯಲ್ಲಿ ಈ ಏರಿಕೆ ತುಂಬಾನೇ ಕಡಿಮೆ ಇದೆ. ಇದರ ಬಗ್ಗೆ ಎಲ್ಲರೂ ಚಿಂತನೆ ಮಾಡುವುದು ಆವಶ್ಯಕವಾಗಿದೆ.

ಪ್ರಯಾಗರಾಜ(ಉತ್ತರಪ್ರದೇಶ) ಇಲ್ಲಿ ಮತಾಂಧ ಯುವಕನಿಂದ ಶ್ರೀ ಹನುಮಂತನ ಮೂರ್ತಿಯ ಧ್ವಂಸ

ಇಲ್ಲಿಯ ಸೊರಾವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಶ್ರೀ ಹನುಮಂತನ ದೇವಸ್ಥಾನದಲ್ಲಿನ ಮೂರ್ತಿಯನ್ನು ಮತಾಂಧನು ಆಗಸ್ಟ್ ೧೨ ರಂದು ಧ್ವಂಸ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಮಹಮ್ಮದ ಗುಲಫಾಮನನ್ನು ಬಂಧಿಸಿದ್ದಾರೆ ಹಾಗೂ ಆತ ಮೂರ್ತಿಯನ್ನು ಧ್ವಂಸ ಮಾಡಿದನೆಂದು ಒಪ್ಪಿಕೊಂಡಿದ್ದಾನೆ.

ಬೆಂಗಳೂರಿನಲ್ಲಿ ಮತಾಂಧರ ಹಿಂಸಾಚಾರ; ೬೦ ಪೊಲೀಸರಿಗೆಗಾಯ; ಪೊಲೀಸರ ಗುಂಡಿಗೆ ಮೂವರು ಗಲಭೆಕೋರರ ಸಾವು

‘ಫೇಸ್‌ಬುಕ್ನಲ್ಲಿ ಮಹಮ್ಮದ ಪೈಗಂಬರ ಬಗ್ಗೆ ಅಕ್ಷೇಪಾರ್ಹ ಪೋಸ್ಟ್ ಮಾಡ ಲಾಗಿದೆ ಎಂದು ಆರೋಪಿಸಿ ಮತಾಂಧರು ಆಗಸ್ಟ್ ೧೧ ರ ರಾತ್ರಿ ಹಿಂಸಾಚಾರ ಮಾಡಿದರು. ಕಾಂಗ್ರೆಸ್ ಶಾಸಕ ಶ್ರೀನಿವಾಸ ಮೂರ್ತಿಯವರ ಮನೆಯ ಮೇಲೆ ಹಲ್ಲೆ ಮಾಡಿ ಬೆಂಕಿ ಹಚ್ಚಿದರು. ಅದೇರೀತಿ ೨೦೦ ಕ್ಕೂ ಹೆಚ್ಚು ವಾಹನಗಳನ್ನು ಸುಟ್ಟರು. ಹಿಂಸಾಚಾರವನ್ನು ತಡೆಯಲು ಪ್ರಯತ್ನಿಸಿದ ಪೊಲೀಸರ ಮೇಲೆಯೇ ಮತಾಂಧರು ಹಲ್ಲೆ ನಡೆಸಿದರು.

ಆಗಸ್ಟ್ ೧೩ ರಂದು ಇರುವ ಮೇಡಮ್ ಭಿಕಾಯಿಜಿ ರುಸ್ತುಮ ಕಾಮಾ ಇವರ ಪುಣ್ಯಸ್ಮರಣೆ ನಿಮಿತ್ತ… ಶ್ರಾವಣ ಶುಕ್ಲ ಪಕ್ಷ ನವಮಿ (೧೩.೮.೨೦೨೦)

ಮೇಡಮ್ ಕಾಮಾ ಇವರ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಯೋಗದಾನವು ನಿಬ್ಬೆರಗಾಗುವಂತಿದೆ. ಮದನಲಾಲ ಧಿಂಗ್ರಾ ಇವರು ಕರ್ಝನ ವಾಯಲಿಯನ್ನು ಕೊಂದ ನಂತರ ಮೇಡಮ್ ಕಾಮಾ ಇವರು ೧೯೦೯ ರಲ್ಲಿ ಮದನಲಾಲ ಇವರ ಸ್ಮರಣಾರ್ಥ ‘ಮದನ ತಲವಾರ’ ಹೆಸರಿನ ಒಂದು ನಿಯತಕಾಲಿಕೆ ಆರಂಭಿಸಿದರು.

ಪುಲವಾಮಾದಲ್ಲಿ ಓರ್ವ ಉಗ್ರನ ಸಾವು, ಒಬ್ಬ ಸೈನಿಕ ಹುತಾತ್ಮ

ಇಲ್ಲಿಯ ಕಾಮರಾಜಿಪೊರಾದಲ್ಲಿ ಬೆಳಗಿನ ಜಾವ ನಡೆದ ಚಕಮಕಿಯಲ್ಲಿ ರಕ್ಷಣಾ ಪಡೆಗಳು ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿದ್ದಾರೆ ಹಾಗೂ ಇದರಲ್ಲಿ ಓರ್ವ ಸೈನಿಕ ಹುತಾತ್ಮನಾಗಿದ್ದಾನೆ. ಇಲ್ಲಿ ಇಬ್ಬರು ಉಗ್ರರು ಇರುವ ಮಾಹಿತಿ ಸಿಕ್ಕಿದಾಕ್ಷಣ ಈ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು.

ಮತಾಂಧರ ಹಲ್ಲೆಯಿಂದ ಹನುಮಂತನ ದೇವಸ್ಥಾನವನ್ನು ರಕ್ಷಿಸಿದ ಮುಸಲ್ಮಾನರು !

ಮತಾಂಧರು ನಡೆಸಿದ ಹಿಂಸಾಚಾರದ ಸಮಯದಲ್ಲಿ ಹನುಮಂತನ ದೇವಸ್ಥಾನವನ್ನು ಗುರಿ ಮಾಡಲು ಪ್ರಯತ್ನಿಸುತ್ತಿದ್ದಾಗ ಕೆಲವು ಮುಸಲ್ಮಾನ ಯುವಕರು ಮಾನವ ಸರಪಳಿ ಮಾಡಿ ಮತಾಂಧರನ್ನು ತಡೆದ ವಾರ್ತೆಯು ಪ್ರಸಾರವಾಯಿತು. ಕಾಂಗ್ರೆಸ್‌ನ ಶಾಸಕರಾದ ಶ್ರೀನಿವಾಸ ಮೂರ್ತಿ ಇವರ ಮನೆಯ ಎದುರು ಹನುಮಂತನ ದೇವಸ್ಥಾನ ಇದೆ. ಈ ಘಟನೆಯಿಂದ ಮಾಧ್ಯಮಗಳು ಅವರನ್ನು ಪ್ರಶಂಸಿಸಿದರು.

ಇದೇ ಪ್ರಥಮ ಬಾರಿಗೆ ನ್ಯೂಯಾರ್ಕ್ಸ್‌ನ ‘ಟೈಮ್ಸ್ ಸ್ಕ್ವೇರ್’ನಲ್ಲಿ ಭಾರತದ ಸ್ವಾತಂತ್ರ್ಯ ದಿನ ನಿಮಿತ್ತ ಧ್ವಜಾರೋಹಣ

ಇಲ್ಲಿಯ ಪ್ರಸಿದ್ಧ ‘ಟೈಮ್ಸ್ ಸ್ಕ್ವೇರ್’ನಲ್ಲಿ ಭಾರತದ ೭೪ ನೇ ಸ್ವಾತಂತ್ರ್ಯದಿನ ಧ್ವಜಾರೋಹಣ ನೆರವೇರಲಿದೆ. ಇದೇ ಮೊದಲ ಬಾರಿ ಈ ರೀತಿಯಲ್ಲಿ ನಡೆಯಲಿದೆ. ಈ ಹಿಂದೆ ಆಗಸ್ಟ್ ೫ ರಂದು ಆಯೋಜಿಸಲಾಗಿದ್ದ ಶ್ರೀರಾಮಜನ್ಮಭೂಮಿಯ ಮೇಲಿನ ಶ್ರೀರಾಮಮಂದಿರದ ಭೂಮಿಪೂಜೆಯ ದಿನದಂದೂ ಕೂಡ ‘ಟೈಮ್ಸ್ ಸ್ಕ್ವೇರ್’ನಲ್ಲಿ ಶ್ರೀರಾಮಮಂದಿರದ ಚಿತ್ರವನ್ನು ಪ್ರದರ್ಶಿಸಲಾಗಿತ್ತು.

ಇಡೀ ದೇಶದಲ್ಲಿ ರಾಷ್ಟ್ರೀಯ ಪೌರತ್ವ ನೊಂದಣಿ ಜಾರಿಗೆ ತನ್ನಿ ! – ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಇಡೀ ದೇಶದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ.) ಜಾರಿಗೊಳಿಸಬೇಕು, ಎಂಬ ಬೇಡಿಕೆಯನ್ನು ಮಾಡುವ ಅರ್ಜಿಯೊಂದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ. ಈ ಅರ್ಜಿಯ ಮೂಲಕ ಕೇಂದ್ರ ಸರಕಾರಕ್ಕೆ ಅಕ್ರಮವಾಗಿ ಭಾರತದಲ್ಲಿ ವಾಸಿಸುವ ವಿದೇಶಿ ನಾಗರಿಕರ ಮೇಲೆ ಕ್ರಮ ಕೈಗೊಳ್ಳುವಂತೆ ಆದೇಶವನ್ನೂ ನೀಡಿ ಎಂದು ಬೇಡಿಕೆ ಮಾಡಿದೆ.

ಬಾಗಪತ (ಉತ್ತರ ಪ್ರದೇಶ) ಇಲ್ಲಿಯ ಭಾಜಪದ ಮಾಜಿ ಜಿಲ್ಲಾಧ್ಯಕ್ಷನ ಗುಂಡಿಕ್ಕಿ ಹತ್ಯೆ

ಇಲ್ಲಿ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಭಾಜಪದ ಮಾಜಿ ಜಿಲ್ಲಾಧ್ಯಕ್ಷ ಸಂಜಯ ಖೋಖರ ಇವರಿಗೆ ಅಜ್ಞಾತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೂವರು ಮಂದಿ ದಾಳಿ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮೂವರು ಮಂದಿ ದಾಳಿ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಖೋಖರ ಹತ್ಯೆಯ ಬಗ್ಗೆ ಖೇದವನ್ನು ವ್ಯಕ್ತಪಡಿಸುತ್ತಾ ಈ ಘಟನೆಯ ತನಿಖೆಯನ್ನು ನಡೆಸಿ ಆರೋಪಿಗಳ ಮೇಲೆ ೨೪ ಗಂಟೆಗಳಲ್ಲಿ ಕ್ರಮ ಕೈಗೊಳ್ಳುವಂತೆ ಆದೇಶವನ್ನು ನೀಡಿದ್ದಾರೆ.