ರಕ್ಷಣಾ ವಿಷಯದ ೧೦೧ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದರ ಮೇಲೆ ನಿರ್ಬಂಧ ‘ಆತ್ಮನಿರ್ಭರ ಭಾರತ’ಕ್ಕೆ ಕೇಂದ್ರ ಸರಕಾರದ ನಿರ್ಣಯ

ರಕ್ಷಣಾ ಸಚಿವ ರಾಜನಾಥ ಸಿಂಹ

ನವ ದೆಹಲಿ – ಭಾರತೀಯ ರಕ್ಷಣಾ ಸಚಿವಾಲಯದಿಂದ ‘ಆತ್ಮನಿರ್ಭರ ಭಾರತ’ ಆಯೋಜನೆಯ ಅಡಿಯಲ್ಲಿ ೧೦೧ ರಕ್ಷಣಾ ಸಾಮಗ್ರಿಗಳ ಒಂದು ಪಟ್ಟಿ ಮಾಡಿ ಅವುಗಳನ್ನು ಆಮದು ಮಾಡಿಕೊಳ್ಳುವುದರ ಮೇಲೆ ನಿರ್ಬಂಧ ಹೇರಿದೆ. ರಕ್ಷಣಾ ಸಚಿವ ರಾಜನಾಥ ಸಿಂಹ ಇವರು ಟ್ವೀಟ್ ಮಾಡಿ ಈ ಮಾಹಿತಿಯನ್ನು ನೀಡಿದರು. ಈ ಪಟ್ಟಿಯಲ್ಲಿ ಸಾಮಾನ್ಯ ‘ಪಾರ್ಟಸ್’ಜೊತೆಗೆ ‘ಅಸಾಲ್ಟ ರೈಫಲ್’, ‘ಸೋಲಾರ್ ಸಿಸ್ಟಮ್’, ‘ಟ್ರಾನ್ಸಪೋರ್ಟ್ ಏರಕ್ರಾಫ್ಟ’, ‘ರಡಾರ್’ ಇತ್ಯಾದಿ ಉನ್ನತ ತಂತ್ರಜ್ಞಾನಗಳ ಶಸ್ತ್ರಗಳು ಸೇರ್ಪಡೆ ಇದೆ.

‘ರಕ್ಷಣೆಗಾಗಿ ಬೇಕಾಗುವ ಉತ್ಪಾದನೆಗಳು ಭಾರತದ್ದೇ ಆಗಿರಬೇಕು’, ಎಂದು ಈ ನಿರ್ಣಯದ ಹಿಂದಿನ ಉದ್ದೇಶವಾಗಿದೆ. ‘ಖಾಸಗಿ ಹಾಗೂ ಸರಕಾರಿ ಸಂಸ್ಥೆಗಳೊಂದಿಗೆ ಚರ್ಚಿಸಿ ಈ ಪಟ್ಟಿಯನ್ನು ನಿರ್ಮಿಸಲಾಗಿದೆ. ಇಲ್ಲಿಯವರೆಗೆ ೨೬೦ ಯೋಜನೆಗಳಿಗಾಗಿ ಭಾರತದ ಸೈನ್ಯ, ವಾಯು ಹಾಗೂ ನೌಕಾದಳದವರು ಏಪ್ರಿಲ್ ೨೦೧೫ ರಿಂದ ೨೦೨೦ ರ ಈ ಕಾಲಾವಧಿಯಲ್ಲಿ ಮೂರುವರೆ ಲಕ್ಷ ಕೋಟಿ ರೂಪಾಯಿಯ ಗುತ್ತಿಗೆಯನ್ನು ವಿದೇಶಿ ಸಂಸ್ಥೆಗಳಿಗೆ ನೀಡಿತ್ತು; ಈಗ ಮಾತ್ರ ಈ ಗುತ್ತಿಗೆಯನ್ನು ದೇಶದ ಸಂಸ್ಥೆಗಳಿಗೆ ಸಿಕ್ಕಿದರೆ, ಮುಂದಿನ ೬-೭ ವರ್ಷಗಳಲ್ಲಿ ಭಾರತದಲ್ಲಿಯ ಉತ್ಪಾದಕರಿಗೆ ೪ ಲಕ್ಷ ರೂಪಾಯಿಯ ಗುತ್ತಿಗೆ ನೀಡಲಾಗುವುದು’, ಎಂದು ರಾಜನಾಥ ಸಿಂಹರವರು ಹೇಳಿದ್ದಾರೆ.