ಪಾಕಿಸ್ತಾನದಲ್ಲಿ ೧೭೧ ಹಿಂದೂಗಳ ಸಾಮೂಹಿಕ ಮತಾಂತರ !

ಪಾಕಿಸ್ತಾನದ ಮಾನವಹಕ್ಕುಗಳ ಕಾರ್ಯಕರ್ತ ರಹತ್ ಆಸ್ಟಿನ್ ಇವರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಅಹಸಾನ್-ಉಲ್-ತಾಲೀಮ್ ಈ ಮದರಸಾವು ಕರಾಚಿ ನಗರದಲ್ಲಿ ನಡೆದ ಒಂದು ಸಾಮೂಹಿಕ ಮತಾಂತರ ಕಾರ್ಯಕ್ರಮದಲ್ಲಿ ೧೭೧ ಹಿಂದೂಗಳನ್ನು ಮತಾಂತರಗೊಳಿಸಲಾಗಿದೆ, ಎಂದು ಮಾಹಿತಿ ನೀಡಿದ್ದಾರೆ.

ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಭಾಜಪದ ನಾಯಕನ ಹತ್ಯೆ

ಬಡಗಾಮ್ ಜಿಲ್ಲೆಯ ಖಗ್ ಗ್ರಾಮದ ಭಾಜಪದ ಮುಖ್ಯಸ್ಥ ಭೂಪೇಂದ್ರ ಸಿಂಗ್ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಪೊಲೀಸರಿಂದ ಅವರಿಗೆ ಭದ್ರತೆ ಒದಗಿಸಲಾಗಿತ್ತು; ಆದರೆ ಅವರು ಮನೆಗೆ ಹೋಗುವಾಗ ಭದ್ರತಾ ಸಿಬ್ಬಂದಿಯನ್ನು ಪೊಲೀಸ್ ಠಾಣೆಗೆ ಕಳುಹಿಸಿ ಏಕಾಂಗಿಯಾಗಿ ಮನೆಗೆ ಹೋಗಿದ್ದರು. ಭಯೋತ್ಪಾದಕರು ಮನೆಯೊಳಗೆ ನುಗ್ಗಿ ಅವರ ಮೇಲೆ ಗುಂಡು ಹಾರಿಸಿದರು.

ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಹಿಂದೂಯೇತರರು ಪ್ರವೇಶಿಸುವ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ ! – ತಿರುಮಲ ತಿರುಪತಿ ದೇವಸ್ಥಾನಮ್

‘ತಿರುಮಲ ತಿರುಪತಿ ದೇವಸ್ಥಾನಮ್’ನ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿಯವರು ‘ಜಗತ್ತಿನಾದ್ಯಂತದ ಸಾವಿರಾರು ಭಕ್ತರು ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ದರ್ಶನಕ್ಕಾಗಿ ಬರುತ್ತಾರೆ. ಈ ಭಕ್ತರಲ್ಲಿ ಇತರ ಧರ್ಮದವರೂ ಇರುತ್ತಾರೆ. ಆದ್ದರಿಂದ ಪ್ರತಿಯೊಬ್ಬರ ‘ಡಿಕ್ಲೆರೇಶನ್ ಆಫ್ ಫೇಥ್ ಅಂಡ್ ಬಿಲೀಫ್’ ಬರೆಯಲು ಸಾಧ್ಯವಿಲ್ಲ ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಿರುವಾಗ ಹೇಳಿಕೆ ನೀಡಿದರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ನನ್ನ ಭಕ್ತರ ನಾಶವಾಗುವುದಿಲ್ಲ. ಭಕ್ತರ ಅಂದರೆ ಸಾಧನೆ ಮಾಡುವವರನ್ನೇ ದೇವರು ರಕ್ಷಿಸುತ್ತಾನೆ. ಇದನ್ನು ಗಮನದಲ್ಲಿಟ್ಟು ಇಂದಿನಿಂದ ತೀವ್ರ ಸಾಧನೆ ಮಾಡಿ, ಆಗಲೇ ದೇವರು ಮೂರನೇ ಮಹಾಯುದ್ಧದಲ್ಲಿ ಬದುಕಿಸುವನು.

ದೇವಸ್ಥಾನಗಳ ಭೂಮಿಯ ‘ಮತಾಂತರ !

ಭಾರತ ದೇಶವು ಜಗತ್ತಿನ ‘ಆಧ್ಯಾತ್ಮಿಕ ರಾಜಧಾನಿಯಾಗಿದೆ. ಸನಾತನ ಹಿಂದೂ ಧರ್ಮ ಮತ್ತು ದೇವಸ್ಥಾನ ಸಂಸ್ಕೃತಿ ಈ ಆಧ್ಯಾತ್ಮಿಕತೆಯ ಸಾರವಾಗಿದೆ. ಹಿಂದಿನ ಕಾಲದಲ್ಲಿ ಪರಕೀಯ ಆಕ್ರಮಣಕಾರರು ದೇವಸ್ಥಾನಗಳನ್ನು ಧ್ವಂಸಗೊಳಿಸಿ ದೇವತೆಗಳ ಮೂರ್ತಿಗಳನ್ನು ವಿದ್ರೂಪಗೊಳಿಸುತ್ತಿದ್ದರೆ, ಇಂದು ‘ಸೆಕ್ಯುಲರ್ ವಾದದ ಮುಖವಾಡ ತೊಟ್ಟ ಸರಕಾರಗಳು ದೇವಸ್ಥಾನಗಳ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿವೆ. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ತಮಿಳುನಾಡಿನಲ್ಲಿ ತೆರೆಮರೆಯಲ್ಲಿ ನಡೆಯುತ್ತಿರುವ ದೇವಸ್ಥಾನಗಳ ಸಂಪತ್ತಿನ ಕೊಳ್ಳೆ ಹೊಡೆಯುವಿಕೆಯು ಚಿಂತೆಯ ವಿಷಯವಾಗಿದೆ.

ಮೈಸರ್ಖಾನ (ಪಂಜಾಬ್) ನಲ್ಲಿರುವ ಪ್ರಾಚೀನ ಮಾತಾ ದೇವಸ್ಥಾನದಲ್ಲಿ ಮತಾಂಧರಿಂದ ನಮಾಜು ಪಠಣ

ಮೈಸರ್ಖಾನಾದಲ್ಲಿನ ಪ್ರಾಚೀನ ಮಾತಾ ದೇವಸ್ಥಾನ (ಮಾಲ್ವ ಪ್ರಾಂತ್ ಸಭಾ ಮತ್ತು ಸಂಸ್ಕೃತ ಕಾಲೇಜು ಒಳಾಂಗಣ)ದಲ್ಲಿ ಕೆಲವು ದಿನಗಳ ಹಿಂದೆ ಗ್ರಾಮದ ೨೫೦ ರಿಂದ ೩೦೦ ಮತಾಂಧರು ದೊಡ್ಡ ಸಮಾರಂಭವನ್ನು ಆಯೋಜಿಸುತ್ತಾ ನಮಾಜು ಪಠಣ ಮಾಡಿದರು.

ಡೆಮಾಕ್ರಟಿಕ್ ಪಕ್ಷವು ೧೪ ಭಾರತೀಯ ಭಾಷೆಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡಿದೆ

ಅಮೆರಿಕಾದ ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕಾಗಿ ಡೆಮಾಕ್ರಟಿಕ್ ಪಕ್ಷವು ೧೪ ಭಾರತೀಯ ಭಾಷೆಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡಿದೆ. ಈ ಎಲ್ಲಾ ಜಾಹೀರಾತುಗಳು ಡಿಜಿಟಲ್ ರೂಪದಲ್ಲಿವೆ. ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯು ನವೆಂಬರ್ ೩ ರಂದು ನಡೆಯಲಿದ್ದು ಜೊ ಬಾಯಡೆನ್ ಇವರು ಡೆಮಾಕ್ರಟಿಕ್ ಪಕ್ಷದ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ಆಂಧ್ರಪ್ರದೇಶದಲ್ಲಿ ದೇವಸ್ಥಾನಗಳ ಮೇಲೆ ಹೆಚ್ಚುತ್ತಿರುವ ದಾಳಿ, ಟ್ವಿಟರ್‌ನಲ್ಲಿ ಧರ್ಮಾಭಿಮಾನಿಗಳಿಂದ `#AndhraTemplesInDanger’ ಟ್ರೆಂಡ್

ಕಳೆದ ಕೆಲವು ದಿನಗಳಲ್ಲಿ ಆಂಧ್ರಪ್ರದೇಶದ ದೇವಸ್ಥಾನಗಳ ಮೇಲಾಗುವ ದಾಳಿಯ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ವಿಜಯವಾಡಾದ ಶ್ರೀ ಕನಕದುರ್ಗ ದೇವಸ್ಥಾನದಿಂದ ಬೆಳ್ಳಿಯ ೩ ಸಿಂಹಗಳ ವಿಗ್ರಹಗಳನ್ನು ಕಳವು ಮಾಡಲಾಗಿದ್ದು, ಗೋದಾವರಿ ಜಿಲ್ಲೆಯ ಅಂತರ್ವೇದಿಯಲ್ಲಿರುವ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಪ್ರಾಚೀನ ರಥವನ್ನು ಸುಡಲಾಯಿತು.

ನೇಪಾಳದ ಹಿತಕ್ಕಾಗಿ ನೇಪಾಳವನ್ನು ಮತ್ತೊಮ್ಮೆ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ ! – ಕಮಲ ಥಾಪಾ, ಮಾಜಿ ಉಪ ಪ್ರಧಾನಿ

ನೇಪಾಳದ ಹಿತದೃಷ್ಟಿಯಿಂದ ನೇಪಾಳವನ್ನು ಮತ್ತೊಮ್ಮೆ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು, ಎಂದು ನೇಪಾಳದ ‘ರಾಷ್ಟ್ರೀಯ ಪ್ರಜಾತಂತ್ರ ಪಕ್ಷ’ ದ ನಾಯಕ ಮತ್ತು ನೇಪಾಳದ ಮಾಜಿ ಉಪ ಪ್ರಧಾನಿ ಕಮಲ್ ಥಾಪಾ ಇವರು ಸೆಪ್ಟೆಂಬರ್ ೧೯ ರಂದು ನಡೆದ ‘ಸಂವಿಧಾನ ದಿನಾಚರಣೆಯ’ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ಕೊರೋನಾದ ಎರಡನೇ ಅಲೆಯ ಸಂಕೇತದಿಂದ ಬ್ರಿಟನ್‌ನಲ್ಲಿ ಮತ್ತೆ ಸಂಚಾರ ನಿಷೇಧ ಜಾರಿಗೊಳಿಸಲಾಗಿದೆ

ಕೊರೋನಾ ಸೋಂಕು ತಡೆಗಟ್ಟದಿದ್ದರೆ, ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು. ನಾವು ದೊಡ್ಡ ಪ್ರಮಾಣದ ನಿರ್ಬಂಧಗಳನ್ನು ವಿಧಿಸುವ ಹಕ್ಕನ್ನು ಕಾಯ್ದಿರಿಸಿದ್ದೇವೆ. ಜೀವನಶೈಲಿಯ ಬದಲಾವಣೆ ಮತ್ತು ಹೊಸ ಕ್ರಮಗಳನ್ನು ಜಾರಿಗೊಳಿಸಿದರೆ, ಕಟ್ಟುನಿಟ್ಟಾದ ನಿರ್ಬಂಧ ಹೇರುವ ಸನ್ನಿವೇ? ಬರುವುದಿಲ್ಲ. ಇದನ್ನು ‘ಅಸೋಸಿಯೇಟೆಡ್ ಪ್ರೆಸ್’ ವರದಿ ಮಾಡಿದೆ.