ಮೈಸರ್ಖಾನ (ಪಂಜಾಬ್) ನಲ್ಲಿರುವ ಪ್ರಾಚೀನ ಮಾತಾ ದೇವಸ್ಥಾನದಲ್ಲಿ ಮತಾಂಧರಿಂದ ನಮಾಜು ಪಠಣ

  • ಭೋಗ(ಪ್ರಸಾದವೆಂದು)ಯಜ್ಞಸ್ಥಳದ ಮುಂದೆ ಮಾಂಸವನ್ನು ಎಸೆದ ಮತಾಂಧರು

  • ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ‘ಶಿವಸೇನೆ (ಹಿಂದೂಸ್ಥಾನ್)’ಯ ಒತ್ತಾಯ

  • ಮತಾಂಧರು ಎಂದಾದರೂ ಹಿಂದೂಗಳಿಗೆ ಮಸೀದಿಗಳಲ್ಲಿ ಪೂಜೆ-ಆರತಿ ಮಾಡಲು ಅವಕಾಶ ನೀಡುತ್ತಾರೆಯೇ ? ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ ಅವರಿಂದ ದೇವಸ್ಥಾನದಲ್ಲಿ ನಮಾಜು ಪಠಣಗಾಗಿ ಅನುಮತಿಯನ್ನು ನೀಡಿ ಧರ್ಮಹಾನಿಯಾಗುತ್ತದೆ !

  • ಪ್ರಸಾದವೆಂದು ಮಾಂಸವನ್ನು ಎಸೆಯುವ ಮೂಲಕ ಹಿಂದೂ ದೇವಸ್ಥಾನವನ್ನು ಅಪವಿತ್ರಗೊಳಿಸುವ ಮತಾಂಧರ ಪರಾಕಾಷ್ಟೆಯ ಹಿಂದೂದ್ವೇಷ ಅರಿಯಿರಿ ! ಹಿಂದೂಗಳೇ, ಇಂತಹವರಿಗೆ ತಕ್ಕ ಶಿಕ್ಷೆಯಾಗಲು ಸರಕಾರಕ್ಕೆ ಒತ್ತಾಯಿಸಿ !
ಪ್ರಾತಿನಿಧಿಕ ಚಿತ್ರ

ಬಠಿಂಡಾ (ಪಂಜಾಬ್) – ಮೈಸರ್ಖಾನಾದಲ್ಲಿನ ಪ್ರಾಚೀನ ಮಾತಾ ದೇವಸ್ಥಾನ (ಮಾಲ್ವ ಪ್ರಾಂತ್ ಸಭಾ ಮತ್ತು ಸಂಸ್ಕೃತ ಕಾಲೇಜು ಒಳಾಂಗಣ)ದಲ್ಲಿ ಕೆಲವು ದಿನಗಳ ಹಿಂದೆ ಗ್ರಾಮದ ೨೫೦ ರಿಂದ ೩೦೦ ಮತಾಂಧರು ದೊಡ್ಡ ಸಮಾರಂಭವನ್ನು ಆಯೋಜಿಸುತ್ತಾ ನಮಾಜು ಪಠಣ ಮಾಡಿದರು. ‘ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’, ಎಂದು ‘ಶಿವಸೇನೆ (ಹಿಂದೂಸ್ತಾನ್)’ಯು ಪೊಲೀಸ್ ಆಯುಕ್ತರಲ್ಲಿ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಪ್ರದೇಶ ಸಂಘಟನ ಸಚಿವ ಸುಶಿಲ್‌ಕುಮಾರ ಜಿಂದಾಲ್, ಜಿಲ್ಲಾ ಕಾರ್ಯದರ್ಶಿ ಗುರವಿಂದರ್ ಬರಾಡ ಹಾಗೂ ಜಿಲ್ಲಾ ಉಪಾಧ್ಯಕ್ಷ ಕಾಕಾ ಬಾಬು ಉಪಸ್ಥಿತರಿದ್ದರು. ದೇವಸ್ಥಾನದ ಕೆಲವು ಅಧಿಕಾರಿಗಳೇ ನಮಾಜು ಪಠಣಗೆ ಅವಕಾಶ ನೀಡಿರುವುದು ಬೆಳಕಿಗೆ ಬಂದಿದೆ.

ಈ ಮನವಿಯಲ್ಲಿ, ಸನಾತನ ಧರ್ಮದ ಪರಂಪರೆಯನುಸಾರ, ಪ್ರತಿಯೊಂದು ಸಮಾಜಕ್ಕೂ ದೇವಸ್ಥಾನಕ್ಕೆ ಭೇಟಿ ನೀಡಲು ಹಾಗೂ ಪ್ರಸಾದವನ್ನು ಸ್ವೀಕರಿಸಲು ಅವಕಾಶವಿದೆ; ಆದರೆ ದೇವಸ್ಥಾನದ ಒಳಗೆ ಇತರ ಯಾವುದೇ ಪಂಥದವರು ತಮ್ಮ ಪರಂಪರೆಯನುಸಾರ ಯಾವುದೇ ರೀತಿಯ ಸಮಾರಂಭ ಮಾಡಲು ಅನುಮತಿಸುವುದಿಲ್ಲ. ಆದರೂ ದೇವಸ್ಥಾನದ ಆಡಳಿತ ಮಂಡಳಿಯು ಅನೇಕ ಮಾಜಿ ಪದಾಧಿಕಾರಿಗಳ ಸಮ್ಮುಖದಲ್ಲಿ ಮತಾಂಧರು ದೇವಸ್ಥಾನದಲ್ಲಿ ಸಮಾರಂಭಗಳನ್ನು ನಡೆಸಿದರು ಮತ್ತು ಯಜ್ಞಸ್ಥಳದ ಮುಂದೆ ಭೋಗ(ಪ್ರಸಾದ)ವೆಂದು ಮಾಂಸವನ್ನು ಎಸೆದರು. (ಧರ್ಮಹಾನಿ ಮಾಡುವ ಇಂತಹ ಹಿಂದೂಗಳು ಹಿಂದೂ ಧರ್ಮದ ನಿಜವಾದ ಶತ್ರುಗಳಾಗಿದ್ದಾರೆ ! – ಸಂಪಾದಕರು) ಈ ಭೋಗ(ಪ್ರಸಾದ)ವನ್ನು ತೋರಿಸುವಾಗ ಮತಾಂಧರು ದೊಡ್ಡ ಧ್ವನಿಯಲ್ಲಿ ನಮಾಜು ಪಠಣ ಮಾಡಿದರು. ಈ ಘಟನೆಯ ಆಡಿಯೋ ರೆಕಾರ್ಡಿಂಗ್ ಪ್ರಸಾರವಾದ ನಂತರ, ದೇವಸ್ಥಾನ ಸಮಿತಿಯ ಮಾಜಿ ಸದಸ್ಯರು ಮರುದಿನ ಗಂಗಾಜಲವನ್ನು ಸಿಂಪಡಿಸಿ ಪೂಜಾ-ಅರ್ಚನೆಯನ್ನು ಮಾಡುವ ನಾಟಕವನ್ನೂ ಮಾಡಿದರು. ಈ ಘಟನೆಯಿಂದಾಗಿ ದೇವಸ್ಥಾನಕ್ಕೆ ಬರುವ ಎಲ್ಲ ಭಕ್ತರ ಭಾವನೆಗಳಿಗೆ ನೋವುಂಟು ಮಾಡಿದೆ. ಆದ್ದರಿಂದ ಸಂಬಂಧಪಟ್ಟ ಆರೋಪಿಗಳ ವಿರುದ್ಧ ಕಠಿಣ ಕಲಂ ಅಡಿಯಲ್ಲಿ ಅಪರಾಧವನ್ನು ದಾಖಲಿಸಬೇಕೆಂದು ಅವರು ಒತ್ತಾಯಿಸಿದರು.