|
ಮಹಾರಾಜಗಂಜ (ನೇಪಾಳ) – ನೇಪಾಳದ ಹಿತದೃಷ್ಟಿಯಿಂದ ನೇಪಾಳವನ್ನು ಮತ್ತೊಮ್ಮೆ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು, ಎಂದು ನೇಪಾಳದ ‘ರಾಷ್ಟ್ರೀಯ ಪ್ರಜಾತಂತ್ರ ಪಕ್ಷ’ ದ ನಾಯಕ ಮತ್ತು ನೇಪಾಳದ ಮಾಜಿ ಉಪ ಪ್ರಧಾನಿ ಕಮಲ್ ಥಾಪಾ ಇವರು ಸೆಪ್ಟೆಂಬರ್ ೧೯ ರಂದು ನಡೆದ ‘ಸಂವಿಧಾನ ದಿನಾಚರಣೆಯ’ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ. ನೇಪಾಳವನ್ನು ಮತ್ತೊಮ್ಮೆ ಹಿಂದೂ ರಾಷ್ಟ್ರ ಘೋಷಿಸುವಂತೆ ಆಗ್ರಹಿಸಲು ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ಕಾರ್ಯಕರ್ತರು ಸಹಿ ಅಭಿಯಾನ ನಡೆಸುತ್ತಿದ್ದಾರೆ. ನೇಪಾಳದ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಜಿತೇಂದ್ರ ಕುಮಾರ ಮಾತನಾಡಿ, ‘ನೇಪಾಳದಲ್ಲಿ ಶೇ. ೮೧.೩ ರಷ್ಟು ಹಿಂದೂಗಳಿದ್ದಾರೆ. ನೇಪಾಳಕ್ಕೆ ಇದ್ದ ‘ಹಿಂದೂ ರಾಷ್ಟ್ರ’ದ ಸ್ಥಾನಮಾನವನ್ನು ತೆಗೆದುಹಾಕುವ ಮೂಲಕ ನೇಪಾಳದ ಮೂಲ ಸ್ವರೂಪವನ್ನು ಬದಲಾಯಿಸಲಾಗಿದೆ. ನೇಪಾಳಕ್ಕೆ ಮತ್ತೊಮ್ಮೆ ಹಿಂದೂ ರಾಷ್ಟ್ರದ ಸ್ಥಾನಮಾನ ನೀಡಲು ಇದೇ ಯೋಗ್ಯ ಸಮಯವಾಗಿದೆ’ ಎಂದು ಹೇಳಿದರು.
Kamal Thapa said that Nepal should be declared a Hindu republic in view of the larger interests of the nation. His party workers are also raising this demand by running a signature campaignhttps://t.co/QAjqFsOYl0
— OpIndia.com (@OpIndia_com) September 22, 2020
೨೦೦೮ ರಲ್ಲಿ ನೇಪಾಳವನ್ನು ‘ಜಾತ್ಯತೀತ ರಾಷ್ಟ್ರ’ ಎಂದು ಘೋಷಿಸಲಾಯಿತು.
೨೦೦೬ ರಲ್ಲಿ ಮಾವೋವಾದಿ ಆಂದೋಲನದ ನಂತರ ನೇಪಾಳದಲ್ಲಿ ವ್ಯವಸ್ಥೆಯನ್ನು ಬದಲಾಯಿಸುವ ಪ್ರಕ್ರಿಯೆಯು ವೇಗವನ್ನು ಪಡೆಯಿತು ಮತ್ತು ‘ಹಿಂದೂ ರಾಷ್ಟ್ರ’ವಾಗಿರುವ ನೇಪಾಳವನ್ನು ೨೦೦೮ ರಲ್ಲಿ ‘ಜಾತ್ಯತೀತ ರಾಷ್ಟ್ರ’ ಎಂದು ಘೋಷಿಸಲಾಯಿತು.
ನೇಪಾಳದ ಜನಸಂಖ್ಯೆ
ನೇಪಾಳದಲ್ಲಿ ಹಿಂದೂಗಳ ಜನಸಂಖ್ಯೆ ಶೇ. ೮೧.೩, ಬೌದ್ಧರು ಶೇ. ೯.೯ ಮತ್ತು ಮುಸ್ಲಿಮರು ಶೇ. ೪.೪ ರಷ್ಟಿದ್ದಾರೆ. ಕಿರಾಟಿಸ್ಟ್ (ಸ್ಥಳೀಯ ಧರ್ಮ) ಶೇ. ೩.೩, ಕ್ರೈಸ್ತರು ಶೇ. ೧.೪ ಮತ್ತು ಸಿಖ ಶೇ. ೦.೨ ರಷ್ಟಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇಪಾಳದ ಜನರಿಗೆ ಸಹಾಯ ಮಾಡುವ ನಿರೀಕ್ಷೆಯಿದೆ ! – ವಿಶ್ವ ಹಿಂದೂ ಪರಿಷತ್, ನೇಪಾಳ
ವಿಶ್ವ ಹಿಂದೂ ಪರಿಷತ್ತಿನ ನೇಪಾಳದ ಕಾರ್ಯದರ್ಶಿ ಜಿತೇಂದರ ಕುಮಾರ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ನೇಪಾಳವನ್ನು ಮತ್ತೊಮ್ಮೆ ಹಿಂದೂ ರಾಷ್ಟ್ರವೆಂದು ಘೋಷಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ನೇಪಾಳಕ್ಕೆ ಸಹಾಯ ಮಾಡಬೇಕು, ಎಂದು ನೇಪಾಳದ ಜನರು ಅಪೇಕ್ಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ.