ಡೆಮಾಕ್ರಟಿಕ್ ಪಕ್ಷವು ೧೪ ಭಾರತೀಯ ಭಾಷೆಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡಿದೆ

ಅಮೇರಿಕಾ ಅಧ್ಯಕ್ಷ ಸ್ಥಾನದ ಚುನಾವಣೆ

ಕಾಶ್ಮೀರದ ಬಗ್ಗೆ ಬಾಯಡೆನ್‌ನ ಹಿಂದೂ ವಿರೋಧಿ ಮತ್ತು ಭಾರತ ವಿರೋಧಿ ನಿಲುವು ಜಗತ್ತಿನೆದುರಿಗೆ ಬಂದಿದೆ. ಆದ್ದರಿಂದ ಅಮೆರಿಕಾದ ರಾಜಕೀಯ ಪಕ್ಷಗಳು ದಾರಿ ತಪ್ಪಿಸಲು ಎಷ್ಟೇ ಪ್ರಯತ್ನಿಸಿದರೂ, ಅಲ್ಲಿನ ಹಿಂದೂಗಳು ಹಿಂದೂ ಹಿತಾಸಕ್ತಿಗಳನ್ನು ಮತ್ತು ಭಾರತದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸುವುದು ಅಪೇಕ್ಷಿತವಿದೆ !

ವಾಷಿಂಗ್ಟನ್ – ಅಮೆರಿಕಾದ ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕಾಗಿ ಡೆಮಾಕ್ರಟಿಕ್ ಪಕ್ಷವು ೧೪ ಭಾರತೀಯ ಭಾಷೆಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡಿದೆ. ಈ ಎಲ್ಲಾ ಜಾಹೀರಾತುಗಳು ಡಿಜಿಟಲ್ ರೂಪದಲ್ಲಿವೆ. ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯು ನವೆಂಬರ್ ೩ ರಂದು ನಡೆಯಲಿದ್ದು ಜೊ ಬಾಯಡೆನ್ ಇವರು ಡೆಮಾಕ್ರಟಿಕ್ ಪಕ್ಷದ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

‘ಅಮೇರಿಕಾ ಕಾ ನೇತಾ ಕೈಸಾ ಹೊ, ಜೊ ಬಾಯಡೆನ್ ಜೈಸಾ ಹೋ’, ‘ಚಲೆ ಚಲೋ ಬಾಯಡೆನ್ ಕೊ ವೋಟ್ ದೊ’, ‘ಜಾಗೋ ಅಮೆರಿಕಾ ಜಾಗೋ, ಭೂಲ್ ನಾ ಜಾನಾ ಬಾಯಡೆನ್-ಹ್ಯಾರಿಸ್ ಕೊ ವೋಟ್ ದೆನಾ’ ಮುಂತಾದ ಜಾಹೀರಾತುಗಳನ್ನು ಸಂಗೀತಮಯ ವೀಡಿಯೋಗಳಲ್ಲಿ ನಿರ್ಮಿಸಲಾಗಿದೆ. ಆದ್ದರಿಂದ ಅವು ಜನಪ್ರಿಯವಾಗುತ್ತಿವೆ. ಜನರು ಸಂಗೀತ, ಆಹಾರ, ಭಾಷೆ ಮತ್ತು ಸಂಸ್ಕೃತಿಯಿಂದ ಬದ್ಧರಾಗಿದ್ದಾರೆ, ಎಂದು ‘ಏಷ್ಯನ್ ಅಮೇರಿಕನ್ ಪೆಸಿಫಿಕ್ ಐಲ್ಯಾಂಡ್ ಲೀಡರಶಿಪ್ ಕೌನ್ಸೀಲ್ ಆಂಡ್ ನ್ಯಾಶನಲ್ ಫೈನಾನ್ಸ್’ ಸಮಿತಿಯ ಸದಸ್ಯ ಅಜಯ್ ಜೈನ್ ಭುಟೋರಿಯಾರವರು ಹೇಳಿದರು. ಡೆಮಾಕ್ರೆಟಿಕ್ ಪಕ್ಷವು, ‘ಭಾರತೀಯ ಅಮೆರಿಕನ್ನರು ಮತ್ತು ದಕ್ಷಿಣ ಏಷ್ಯನ್ನರನ್ನು ಮತ ಚಲಾಯಿಸಲು ಹೊರ ಬರಬೇಕು, ಅದಕ್ಕಾಗಿ ಪ್ರಯತ್ನಗಳು ನಡೆಯುತ್ತಿವೆ’ ಎಂದು ಹೇಳಿದೆ.

ಅಮೆರಿಕಾದ ಹಿಂದೂಗಳ ಮತಗಳು ನಮಗೆ ಮಹತ್ವದ್ದಾಗಿದೆ ! – ಡೆಮಾಕ್ರಟಿಕ್ ಪಕ್ಷ

ಅಮೆರಿಕದಲ್ಲಿ ನೆಲೆಸಿರುವ ಹಿಂದೂಗಳ ಮತಗಳು ಮತ್ತು ಅವರ ಗುರುತು ನಮಗೆ ಮಹತ್ವದ್ದಾಗಿದೆ. ಬಾಯಡೆನ್ ಆಡಳಿತವು ಭಾರತದೊಂದಿಗಿನ ವಿಶ್ವಾಸದ ಸಂಬಂಧಕ್ಕಾಗಿ ನಿರಂತರವಾಗಿ ಪ್ರಯತ್ನಿಸುವುದು, ಎಂದು ಡೆಮಾಕ್ರಟಿಕ್ ಪಕ್ಷ ಹೇಳಿದೆ. ಬಾಯಡೆನ್ ಅವರ ಪರವಾಗಿ ಪ್ರಸಾರದಲ್ಲಿ ಅಮೇರಿಕಾದ ಅನೇಕ ಪ್ರಸಿದ್ಧ ಹಿಂದೂ ನಾಯಕರನ್ನು ಸೇರಿಸಿಕೊಂಡಿದೆ.