ಆಂಧ್ರಪ್ರದೇಶದಲ್ಲಿ ದೇವಸ್ಥಾನಗಳ ಮೇಲೆ ಹೆಚ್ಚುತ್ತಿರುವ ದಾಳಿ, ಟ್ವಿಟರ್‌ನಲ್ಲಿ ಧರ್ಮಾಭಿಮಾನಿಗಳಿಂದ `#AndhraTemplesInDanger’ ಟ್ರೆಂಡ್

ರಾಷ್ಟ್ರೀಯ ಟ್ರೆಂಡ್‌ನಲ್ಲಿ ಮೂರನೇ ಸ್ಥಾನ

ಹಿಂದೂ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಯನ್ನು ಶಾಶ್ವತವಾಗಿ ತಡೆಯಲು ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ !

ಮುಂಬಯಿ – ಕಳೆದ ಕೆಲವು ದಿನಗಳಲ್ಲಿ ಆಂಧ್ರಪ್ರದೇಶದ ದೇವಸ್ಥಾನಗಳ ಮೇಲಾಗುವ ದಾಳಿಯ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ವಿಜಯವಾಡಾದ ಶ್ರೀ ಕನಕದುರ್ಗ ದೇವಸ್ಥಾನದಿಂದ ಬೆಳ್ಳಿಯ ೩ ಸಿಂಹಗಳ ವಿಗ್ರಹಗಳನ್ನು ಕಳವು ಮಾಡಲಾಗಿದ್ದು, ಗೋದಾವರಿ ಜಿಲ್ಲೆಯ ಅಂತರ್ವೇದಿಯಲ್ಲಿರುವ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಪ್ರಾಚೀನ ರಥವನ್ನು ಸುಡಲಾಯಿತು. ಇದಲ್ಲದೆ ಕೃಷ್ಣ ಜಿಲ್ಲೆಯ ೧೨ ನೇ ಶತಮಾನದ ಪ್ರಾಚೀನ ಶಿವನ ದೇವಸ್ಥಾನದಲ್ಲಿರುವ ನಂದಿಯ ವಿಗ್ರಹವನ್ನು ಒಡೆಯಲಾಗಿದೆ. ಇಂತಹ ಘಟನೆಗಳಿಂದ ಆಕ್ರೋಶಗೊಂಡಿದ್ದ ಧರ್ಮಪ್ರೇಮಿಗಳು ಇದನ್ನು ವಿರೋಧಿಸಲು ಸೆಪ್ಟೆಂಬರ್ ೨೩ ರ ಬೆಳಗ್ಗೆ `#AndhraTemplesInDanger’ ಈ ‘ಹ್ಯಾಶಟ್ಯಾಗ್’ ಉಪಯೋಗಿಸಿ ತಮ್ಮ ಆಕ್ರೋ?ವನ್ನು ವ್ಯಕ್ತಪಡಿಸಿದರ‍್ತು. ಅಲ್ಪಾವಧಿಯಲ್ಲಿಯೇ ಇದು ಟ್ರೆಂಡ ಆಗಿ ರಾಷ್ಟ್ರಮಟ್ಟದಲ್ಲಿ ಮೂರನೇ ಸ್ಥಾನವನ್ನು ತಲುಪಿತು. ಇದರಲ್ಲಿ ಮಧ್ಯಾಹ್ನದವರೆಗೆ ೫೦ ಸಾವಿರಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಗಿತ್ತು.

೧. ಈ ಟ್ರೆಂಡ್‌ನಲ್ಲಿ ಅನೇಕರು ರಾಜ್ಯದ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಇವರ ಸರಕಾರವನ್ನು ವಿರೋಧಿಸಿದರು. ‘ರೆಡ್ಡಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ದೇವಸ್ಥಾನಗಳ ಮೇಲೆ ದಾಳಿ ಹೆಚ್ಚಾಗಿದ್ದು ಅದನ್ನು ತಡೆಯಲು ಸರಕಾರ ವಿಫಲವಾಗಿದೆ’ ಎಂದು ಹೇಳಿದರು.

೨. ಒಂದು ಟ್ವೀಟ್‌ನಲ್ಲಿ, ದೇವಸ್ಥಾನಗಳ ಸರಕಾರೀಕರಣದಿಂದಾಗಿ ಇಂತಹ ಘಟನೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಇದು ದೇವಸ್ಥಾನಗಳ ಮೇಲೆ ದಾಳಿ, ದರೋಡೆ ಮತ್ತು ಭ್ರಷ್ಟಾಚಾರ ಹೆಚ್ಚಳಕ್ಕೆ ಕಾರಣವಾಗಿದೆ. ಆದುದರಿಂದ ದೇವಸ್ಥಾನಗಳನ್ನು ಸರಕಾರದಿಂದ ಮುಕ್ತಗೊಳಿಸಿ ಭಕ್ತರಿಗೆ ಒಪ್ಪಿಸಬೇಕು ಎಂದು ಹೇಳಿದರು.

೩. ಇನ್ನೊಬ್ಬರು, ಶ್ರೀಶೈಲಂನ ದೇವಸ್ಥಾನದ ಹೊರಗೆ ಕ್ರೈಸ್ತ ಮಿಶನರಿಗಳು ಬಹಿರಂಗವಾಗಿ ಬೈಬಲ್‌ಗಳನ್ನು ವಿತರಿಸುತ್ತಿದ್ದಾರೆ ಎಂದು ಹೇಳಿದರು. ಆಂಧ್ರಪ್ರದೇಶದಲ್ಲಿ ಮತಾಂತರದ ಘಟನೆಗಳು ಹೆಚ್ಚುತ್ತಿವೆ. ರಾಜ್ಯದ ಕ್ರೈಸ್ತೀಕರಣಗೊಳಿಸಲಾಗುತ್ತಿದೆ. ಇದನ್ನು ಹಿಂದೂಗಳು ಸಂಘಟಿತರಾಗಿ ವಿರೋಧಿಸಬೇಕು ಎಂದು ಹೇಳಿದ್ದಾರೆ.