|
ಬಡಗಾಮ್ (ಜಮ್ಮು-ಕಾಶ್ಮೀರ) – ಬಡಗಾಮ್ ಜಿಲ್ಲೆಯ ಖಗ್ ಗ್ರಾಮದ ಭಾಜಪದ ಮುಖ್ಯಸ್ಥ ಭೂಪೇಂದ್ರ ಸಿಂಗ್ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಪೊಲೀಸರಿಂದ ಅವರಿಗೆ ಭದ್ರತೆ ಒದಗಿಸಲಾಗಿತ್ತು; ಆದರೆ ಅವರು ಮನೆಗೆ ಹೋಗುವಾಗ ಭದ್ರತಾ ಸಿಬ್ಬಂದಿಯನ್ನು ಪೊಲೀಸ್ ಠಾಣೆಗೆ ಕಳುಹಿಸಿ ಏಕಾಂಗಿಯಾಗಿ ಮನೆಗೆ ಹೋಗಿದ್ದರು. ಭಯೋತ್ಪಾದಕರು ಮನೆಯೊಳಗೆ ನುಗ್ಗಿ ಅವರ ಮೇಲೆ ಗುಂಡು ಹಾರಿಸಿದರು.
BDC chairman shot dead in Budgam https://t.co/cMKn03iJwB
— Kashmir Reader (@Kashmir_Reader) September 23, 2020