ಪಾಕಿಸ್ತಾನದಲ್ಲಿ ೧೭೧ ಹಿಂದೂಗಳ ಸಾಮೂಹಿಕ ಮತಾಂತರ !

ಪಾಕಿಸ್ತಾನದಲ್ಲಿ ಹಿಂದೂಗಳ ಅಸ್ತಿತ್ವವವನ್ನು ವಿವಿಧ ರೀತಿಯಲ್ಲಿ ನಾಶ ಮಾಡುತ್ತಿರುವಾಗ ಜಗತ್ತಿನಾದ್ಯಂತ ಹಿಂದೂಗಳು ನಿಷ್ಕ್ರಿಯರಾಗಿದ್ದಾರೆ, ಇದು ಹಿಂದೂಗಳಿಗೆ ನಾಚಿಕೆಯ ವಿಷಯವಾಗಿದೆ !

ನವ ದೆಹಲಿ – ಪಾಕಿಸ್ತಾನದ ಮಾನವಹಕ್ಕುಗಳ ಕಾರ್ಯಕರ್ತ ರಹತ್ ಆಸ್ಟಿನ್ ಇವರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಅಹಸಾನ್-ಉಲ್-ತಾಲೀಮ್ ಈ ಮದರಸಾವು ಕರಾಚಿ ನಗರದಲ್ಲಿ ನಡೆದ ಒಂದು ಸಾಮೂಹಿಕ ಮತಾಂತರ ಕಾರ್ಯಕ್ರಮದಲ್ಲಿ ೧೭೧ ಹಿಂದೂಗಳನ್ನು ಮತಾಂತರಗೊಳಿಸಲಾಗಿದೆ, ಎಂದು ಮಾಹಿತಿ ನೀಡಿದ್ದಾರೆ. ಇದರಲ್ಲಿ ಮಹಿಳೆಯರು, ಪುರುಷರು ಮತ್ತು ಮಕ್ಕಳು ಸೇರಿದ್ದಾರೆ. ‘ಇಸ್ಲಾಮಿಕ್ ಐಡಿಯಾಲಾಜಿ ಕೌನ್ಸಿಲ್’ನ ಮಾಜಿ ಸದಸ್ಯ ನೂರ್ ಅಹಮದ್ ತಶರ್ ಇದರಲ್ಲಿ ಭಾಗವಹಿಸಿದ್ದರು. ಮತಾಂತರಗೊಂಡ ಎಲ್ಲ ಹಿಂದೂಗಳು ಭಿಲ್ ಸಮುದಾಯಕ್ಕೆ ಸೇರಿದವರಾಗಿದ್ದು, ಅವರನ್ನು ವಿವಿಧ ರೀತಿಯ ಆಮಿಷಗಳನ್ನು ತೋರಿಸುವ ಮೂಲಕ ಮತಾಂತರಗೊಳಿಸಲಾಯಿತು. ಈ ಮೊದಲು ಜೂನ್ ತಿಂಗಳಲ್ಲಿ ಸಿಂಧ್ ಪ್ರಾಂತ್ಯದ ಬಾಡಿನ್ ಜಿಲ್ಲೆಯಲ್ಲಿ ೧೦೦ ಕ್ಕೂ ಹೆಚ್ಚು ಹಿಂದೂಗಳನ್ನು ಮತಾಂತರಗೊಳಿಸಲಾಯಿತು. ಆಗಸ್ಟ್‌ನಲ್ಲಿ ೨೦೪ ಹಿಂದೂಗಳನ್ನು ಮತಾಂತರಗೊಳಿಸಲಾಗಿತ್ತು.