ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಹಿಂದೂಯೇತರರು ಪ್ರವೇಶಿಸುವ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ ! – ತಿರುಮಲ ತಿರುಪತಿ ದೇವಸ್ಥಾನಮ್

‘ಡಿಕ್ಲೆರೇಶನ್ ಆಫ್ ಫೇಥ್ ಅಂಡ್ ಬಿಲೀಫ್’ ನಿಯಮದ ಪ್ರಕಾರ ಪ್ರತಿಯೊಬ್ಬರಿಗೂ ಶ್ರೀ ಬಾಲಾಜಿಯ ಮೇಲೆ ಶ್ರದ್ಧೆ ಇರುವ ಬಗ್ಗೆ ಬರೆಯಲು ಸಾಧ್ಯವಿಲ್ಲ ಎಂದು ದೇವಸ್ಥಾನಮ್ ಅಧ್ಯಕ್ಷರ ಅಭಿಪ್ರಾಯ

ಹಾಗಿದ್ದರೆ, ಈ ನಿಯಮಕ್ಕೆ ಅರ್ಥವೇನಿದೆ ? ಅವರಲ್ಲಿ ಎಷ್ಟು ಮಂದಿ ಇತರ ಧರ್ಮದವರು ದೇವಸ್ಥಾನಕ್ಕೆ ಬರುತ್ತಾರೆ ? ಆಂಧ್ರಪ್ರದೇಶದಲ್ಲಿ ಕ್ರೈಸ್ತ ಮುಖ್ಯಮಂತ್ರಿ ಜಗನಮೋಹನ್ ರೆಡ್ಡಿಯ ಸರಕಾರ ಇರುವುದರಿಂದ ಹಾಗೂ ವೈ.ವಿ. ಸುಬ್ಬಾ ರೆಡ್ಡಿ ಅವರ ಚಿಕ್ಕಪ್ಪ ಇರುವುದರಿಂದ ಅವರು ಉದ್ದೇಶಪೂರ್ವಕವಾಗಿ ಈ ರೀತಿ ಬರೆಯುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆಂದು ಯಾರಾದರೂ ಹೇಳಿದರೆ ಅದರಲ್ಲಿ ತಪ್ಪೇನಿದೆ !

ಭಾಗ್ಯನಗರ – ಪ್ರಸಿದ್ಧ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಹಿಂದೂಯೇತರ ಪ್ರವೇಶದ ನಿಯಮಗಳನ್ನು ಬದಲಾಯಿಸಲಾಗಿಲ್ಲ ಎಂದು ‘ತಿರುಮಲ ತಿರುಪತಿ ದೇವಸ್ತಾನಮ್’ನ ಸಂಚಾಲಕರು ತಿಳಿಸಿದ್ದಾರೆ.

ತಿರುಮಲ ತಿರುಪತಿ ದೇವಸ್ಥಾನಮ್’ನ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ

೧. ‘ತಿರುಮಲ ತಿರುಪತಿ ದೇವಸ್ಥಾನಮ್’ನ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿಯವರು ‘ಜಗತ್ತಿನಾದ್ಯಂತದ ಸಾವಿರಾರು ಭಕ್ತರು ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ದರ್ಶನಕ್ಕಾಗಿ ಬರುತ್ತಾರೆ. ಈ ಭಕ್ತರಲ್ಲಿ ಇತರ ಧರ್ಮದವರೂ ಇರುತ್ತಾರೆ. ಆದ್ದರಿಂದ ಪ್ರತಿಯೊಬ್ಬರ ‘ಡಿಕ್ಲೆರೇಶನ್ ಆಫ್ ಫೇಥ್ ಅಂಡ್ ಬಿಲೀಫ್’ (ತಿರುಪತಿ ದೇವಸ್ಥಾನದಲ್ಲಿ ಹಿಂದೂಯೇತರರಿಗಾಗಿ ತಮ್ಮ ಧರ್ಮವನ್ನು ಲಿಖಿತ ರೂಪದಲ್ಲಿ ನಮೂದಿಸಿ ಮತ್ತು ಶ್ರೀ ಬಾಲಾಜಿಯ ಮೇಲೆ ಶ್ರದ್ಧೆ ಇದೆ ಎಂಬುದನ್ನು ಬರೆದುಕೊಳ್ಳುವ ನಿಯಮವಿದೆ) ಬರೆಯಲು ಸಾಧ್ಯವಿಲ್ಲ ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಿರುವಾಗ ಹೇಳಿಕೆ ನೀಡಿದರು. ಇದರಿಂದ ಹಿಂದೂಯೇತರರಿಗೆ ಪ್ರವೇಶಿಸಲು ನಿಯಮಗಳನ್ನು ಬದಲಾಯಿಸುವ ಬಗ್ಗೆ ಸಾಕಷ್ಟು ಊಹಾಪೋಹಗಳು ನಡೆಯುತ್ತಿತ್ತು. ಈ ಬಗ್ಗೆ ರೆಡ್ಡಿ ಮೇಲಿನ ಸ್ಪಷ್ಟೀಕರಣ ನೀಡಿದ್ದಾರೆ.

೨. ರೆಡ್ಡಿ ತಮ್ಮ ಮಾತನ್ನು ಮುಂದುವರಿಸುತ್ತಾ, ‘ನಾನು ಮೇಲಿನ ಹೇಳಿಕೆಯನ್ನು ನೀಡಿದ್ದರೂ, ‘ಡಿಕ್ಲೆರೇಶನ್ ಆಫ್ ಫೇಥ್ ಅಂಡ್ ಬಿಲೀಫ್’ ನಿಯಮಗಳಲ್ಲಿ ನಾನು ಯಾವುದೇ ಬದಲಾವಣೆಯನ್ನು ಉಲ್ಲೇಖಿಸಿಲ್ಲ. ಆದ್ದರಿಂದ ಈ ಆರೋಪಗಳು ಸಂಪೂರ್ಣವಾಗಿ ಸುಳ್ಳಾಗಿದೆ’ ಎಂದು ಹೇಳಿದ್ದಾರೆ. ತಿರುಪತಿ ದೇವಸ್ಥಾನದಲ್ಲಿ ವಾರ್ಷಿಕ ಬ್ರಹ್ಮೋತ್ಸವವು ಸೆಪ್ಟೆಂಬರ್ ೨೦ ರಿಂದ ಪ್ರಾರಂಭವಾಗಿದೆ.