ದೆಹಲಿ ಗಲಭೆ ಮತ್ತು ಸಿಎಎ ವಿರೋಧಿ ಆಂದೋಲನದಲ್ಲಿ ಐ.ಎಸ್.ಐ ಕೈವಾಡ ! – ದೆಹಲಿ ಪೊಲೀಸ

ದೆಹಲಿ ಗಲಭೆಗಳು, ಹಾಗೆಯೇ ಸಿಎಎ ಮತ್ತು ಎನ್.ಆರ್.ಸಿ.ಯ ವಿರುದ್ಧದ ಆಂದೋಲನಗಳ ಹಿಂದೆ ಪಾಕಿಸ್ತಾನದ ಗೂಢಚಾರ ಸಂಸ್ಥೆ ಐ.ಎಸ್.ಐನ ಕೈವಾಡ ಇರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಐ.ಎಸ್.ಐ.ನ ಆದೇಶದ ಮೇರೆಗೆ ಖಲಿಸ್ತಾನ್ ಪರ ಬೆಂಬಲಿಗರು ಕೂಡ ಆಂದೋಲನಕ್ಕೆ ಸೇರಿಕೊಂಡಿದ್ದರು ಎಂದು ತಿಳಿದುಬಂದಿದೆ.

ಮಾಲ್ಡೀವ್ಸ್ ಒಪ್ಪಿಗೆ ಇಲ್ಲದ ಕಾರಣ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ೧೯ ನೇ ಸಾರ್ಕ್ ಶೃಂಗಸಭೆ ರದ್ದು

೧೯ ನೇ ಸಾರ್ಕ್ ಶೃಂಗಸಭೆಯನ್ನು ಪಾಕಿಸ್ತಾನದಲ್ಲಿ ನಡೆಸಲು ಪ್ರಸ್ತಾಪಿಸಲಾಗಿತ್ತು; ಆದರೆ ಈ ಪ್ರಸ್ತಾಪವನ್ನು ತಡೆಯುವಲ್ಲಿ ಮಾಲ್ಡೀವ್ಸ್ ಭಾರತದ ಪರವಾಗಿ ನಿಂತಿತು. ಇದಕ್ಕೂ ಮುನ್ನ ೨೦೧೬ ರಲ್ಲಿ ಸಾರ್ಕ್ ಶೃಂಗಸಭೆಯನ್ನು ಮುಂದೂಡಲಾಗಿತ್ತು. ಆ ವರ್ಷ ಪಾಕಿಸ್ತಾನದಲ್ಲಿ ಸಮ್ಮೇಳನದ ಆಯೋಜಕವಾಗಿತ್ತು; ಆದರೆ ಪಾಕಿಸ್ತಾನ ಪ್ರಾಯೋಜಿತ ಉಗ್ರರು ಭಾರತೀಯ ಸೈನ್ಯದ ಮೇಲೆ ‘ಉರಿ ದಾಳಿ’ ನಡೆಸಿದರು.

ನಿಷೇಧಿಸಲಾಗಿದ್ದ ಚೀನಾದ ಆಪ್‌ಗಳು ಭಾರತದಲ್ಲಿ ಹೊಸ ರೂಪದಲ್ಲಿ ಪುನಃ ಸಕ್ರಿಯಗೊಂಡಿವೆ

ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ನಂತರ ಭಾರತವು ಚೀನಾದ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ರದ್ದುಗೊಳಿಸಲು ಪ್ರಾರಂಭಿಸಿತು, ಜೊತೆಗೆ ಚೀನಾದ ಆಪ್‌ಗಳನ್ನು ನಿಷೇಧಿಸಿತು; ಆದರೆ ಈಗ ಅದೇ ಆಪ್ ಗಳು ಹೊಸ ಹೆಸರು ಮತ್ತು ಕೆಲವು ಬದಲಾವಣೆಗಳೊಂದಿಗೆ ಭಾರತಕ್ಕೆ ಮರಳಿದ್ದೂ ಅವು ಕೋಟಿಗಟ್ಟಲೆ ಸಂಚಾರವಾಣಿಗಳಲ್ಲಿ ಡೌನ್‌ಲೋಡ್ ಆಗಿವೆ, ಎಂಬ ಮಾಹಿತಿಯು ಬೆಳಕಿಗೆ ಬಂದಿದೆ.

ಶ್ರೀಕೃಷ್ಣ ಜನ್ಮಭೂಮಿಯ ಮೇಲಿನ ಶಾಹಿ ಈದ್ಗಾ ಮಸೀದಿಯ ಅತಿಕ್ರಮಣವನ್ನು ತೆರವುಗೊಳಿಸಬೇಕೆಂದು ಕೋರಿ ಮಥುರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಮಥುರಾದ ಶ್ರೀಕೃಷ್ಣ ಜನ್ಮಭೂಮಿಯ ೧೩.೩೭ ಎಕರೆ ಜಮೀನಿನ ಮಾಲೀಕತ್ವ ಮತ್ತು ಈ ಭೂಮಿಯಲ್ಲಿ ಶಾಹಿ ಇದ್ಗಾ ಮಸೀದಿಯ ಅತಿಕ್ರಮಣವನ್ನು ತೆರವುಗೊಳಿಸುವಂತೆ ಕೋರಿ ಅರ್ಜಿಯನ್ನು ಭಗವಾನ್ ಕೃಷ್ಣ ವಿರಾಜ್ ಮಾನ್, ಕಟರಾ ಕೇಶವ್ ದೇವ್ ಕೆವಾಟ್ ಮತ್ತು ರಂಜನಾ ಅಗ್ನಿಹೋತ್ರಿಯೊಂದಿಗೆ ಒಟ್ಟು ೬ ಜನರು ಸಲ್ಲಿಸಿದ್ದಾರೆ.

ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ನಂತರ ಆಡಳಿತವು ಚಿಕ್ಕಬಳ್ಳಾಪುರದ ಬೆಟ್ಟದ ಮೇಲಿನ ಸರ್ಕಾರಿ ಭೂಮಿಯಲ್ಲಿ ಹಾಕಲಾಗಿದ್ದ ಅಕ್ರಮ ಶಿಲುಬೆ ಮತ್ತು ಯೇಸುವಿನ ಮೂರ್ತಿಯನ್ನು ತೆಗೆದುಹಾಕಿತು !

ಇಲ್ಲಿನ ಸೊಸೇಪಾಳ್ಯ ಬೆಟ್ಟದಲ್ಲಿಯ ಸರಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದ್ದ ಶಿಲುಬೆ ಮತ್ತು ಯೇಸುವಿನ ಬೃಹತ್ ಮೂರ್ತಿಯನ್ನು ಜಿಲ್ಲಾಡಳಿತ ತೆಗೆದುಹಾಕಿದೆ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಕುರಿತು ಕರ್ನಾಟಕ ಉಚ್ಚನ್ಯಾಯಾಲಯವು ತೀರ್ಪು ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

‘ಸನಾತನ ಶಾಪ್ ಈ ‘ಅಂಡ್ರೈಡ್ ಆಪ್ ಸದ್ಗುರು ನಂದಕುಮಾರ ಜಾಧವ ಇವರ ಶುಭಹಸ್ತದಿಂದ ಲೋಕಾರ್ಪಣೆ

‘ವಾಚಕರು ಈ ರಿಯಾಯತಿಯ ಲಾಭವನ್ನು ಪಡೆದುಕೊಳ್ಳಬೇಕು. ಜೊತೆಗೆ ದೇವತೆಗಳ ಸಾತ್ತ್ವಿಕ ನಾಮಪಟ್ಟಿಗಳು, ಜಪಮಾಲೆ, ದೇವತೆಗಳ ಲಾಕೇಟ್ಸ್, ದೇವತೆಗಳ ಸಾತ್ತ್ವಿಕ ಚಿತ್ರಗಳು ಹಾಗೂ ಇತರ ಸಾತ್ತ್ವಿಕ ಉತ್ಪಾದನೆಗಳೂ ಖರೀದಿಗಾಗಿ ಲಭ್ಯವಿದೆ ಎಲ್ಲರೂ ಈ ಆಪ್‌ಅನ್ನು ಡೌನ್‌ಲೋಡ್ ಮಾಡಿರಿ, ಅದೇರೀತಿ ಈ ಬಗ್ಗೆ ಸಂಬಂಧಿಕರಿಗೆ ಹಾಗೂ ಪರಿಚಿತರಿಗೂ ತಿಳಿಸಿರಿ, ಎಂದು ಸಂಸ್ಥೆಯ ವತಿಯಿಂದ ಕರೆ ನೀಡಲಾಗಿದೆ.

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

‘ಸಮಾಜಕ್ಕೆ ನಾಮಜಪ ಮುಂತಾದ ಸಾಧನೆಯ ಮಹತ್ವವು ತಿಳಿಯಬೇಕು ಹಾಗೂ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯದ ಪ್ರಸಾರವಾಗಬೇಕು’, ಎಂಬ ದೃಷ್ಟಿಯಿಂದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಆನ್‌ಲೈನ್ ಸತ್ಸಂಗ ಮಾಲಿಕೆ’ಯನ್ನು ಪ್ರಸಾರ ಮಾಡಲಾಗುತ್ತಿದೆ. ದೇಶದಾದ್ಯಂತ ಸಂಚಾರಸಾರಿಗೆ ನಿರ್ಬಂಧವು ಜಾರಿಗೆ ಬಂದ ಕಾರಣ ಮನೆಮನೆಗೆ ಹೋಗಿ ಅಧ್ಯಾತ್ಮ ಪ್ರಸಾರ ಮಾಡಲು ಸಾಧ್ಯವಾಗುತ್ತಿಲ್ಲ.

ಎಲ್ಲ ಸಾಧಕರಿಗಾಗಿ ಸೂಚನೆ 

‘ಕೊರೋನಾ’ ವೈರಾಣುವಿನ ಸೋಂಕಿನಿಂದಾಗುವ ರೋಗಗಳಿಂದ ನಮ್ಮ ರಕ್ಷಣೆಯಾಗಬೇಕು ಅಥವಾ ಅದನ್ನು ತಡೆಗಟ್ಟಬೇಕು’, ಎಂದು ಆಯುಷ ಸಚಿವಾಲಯವು ಪ್ರಕಟಿಸಿದ ಸುತ್ತೋಲೆಯಲ್ಲಿ ಹೋಮಿಯೋಪಥಿಯ ‘ಅರ್ಸೆನಿಕ್ ಆಲ್ಬ್ ೩೦’ ಈ ಔಷಧಿಯನ್ನು ಸೂಚಿಸಲಾಗಿತ್ತು. ಈ ರೋಗನಿರೋಧಕ ಔಷಧಿಯನ್ನು ಎಲ್ಲೆಡೆಯ ಸಾಧಕರು ಕಡ್ಡಾಯವಾಗಿ ತೆಗೆದುಕೊಳ್ಳಬೇಕು.

ಸಾಧಕರಿಗೆ ಮಹತ್ವದ ಸೂಚನೆ !

ಧರ್ಮಪ್ರಸಾರದ ಕಾರ್ಯಕ್ಕಾಗಿ ನಾವು ಸ್ಥಳೀಯ ಅವಶ್ಯಕತೆಯಂತೆ ಏನೆಲ್ಲ ಸಂಹಿತೆಯನ್ನು ಬರೆಯುತ್ತೇವೆಯೋ ಅಥವಾ ಹೊಸ ವಿಷಯವನ್ನು ಮಂಡಿಸುತ್ತೇವೆಯೋ, ಅದನ್ನೂ ಬರೆದು ಕಳುಹಿಸಿದರೆ ಭಾರತದಾದ್ಯಂತ ಕಾರ್ಯ ಮಾಡುತ್ತಿರುವ ಇತರರಿಗೂ ಅಂತಹ ವಿಷಯಗಳ ಭಾಷಣಕ್ಕೆ ಉಪಯೋಗಿಸಬಹುದು. ಇದರಿಂದ ಆಯಾ ಸ್ಥಳಗಳ ಸಾಧಕರ ಸಂಹಿತೆ ಬರೆಯುವ ಸಮಯವು ಉಳಿತಾಯವಾಗುತ್ತದೆ. ಬೇರೆ ಕಡೆಗಳಲ್ಲಿ ಸಾಧಕರಿಗೆ ಸಂಹಿತೆ ಉಪಲಬ್ಧವಾಗುವುದರಿಂದ ತಮ್ಮ ಭಾಗದಲ್ಲಿ ವಿಷಯವನ್ನು ಮಂಡಿಸಲು ಸಾಧ್ಯವಾಗುತ್ತದೆ.

ಸಾಧಕರಿಗೆ ಸೂಚನೆ ಮತ್ತು ಓದುಗರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಿಗೆ ನಮ್ರ ವಿನಂತಿ !

ಸದ್ಯ ಸಾಮಾಜಿಕ ಪ್ರಸಾರ ಮಾಧ್ಯಮಗಳ ಮುಖಾಂತರ ಆರ್ಥಿಕ ಲಾಭವನ್ನು ಪಡೆಯುವ ಯೋಜನೆಯ (ಸ್ಕೀಮ್) ಸಂದರ್ಭದಲ್ಲಿ ಒಂದು ವಿಡಿಯೋ ಪ್ರಸಾರವಾಗುತ್ತಿದೆ. ಅದರಲ್ಲಿ ಕೆಲವು ಆಪ್‌ಗಳು ಮತ್ತು ಅವುಗಳನ್ನು ಅಭಿವೃದ್ಧಿ ಪಡಿಸಿರುವ ಹೆಸರಾಂತ ಕಂಪನಿಗಳ ಉಲ್ಲೇಖವಿದ್ದು, ಒಂದು ಆಪ್ ‘ಡೌನಲೋಡ್ ಮಾಡಿಕೊಳ್ಳುವಂತೆ ಕರೆ ನೀಡಲಾಗಿದೆ. ಇದರಿಂದ ನಾಗರಿಕರು ಮೋಸ ಹೋಗುವ ಸಾಧ್ಯತೆಯಿದೆ.