ಕೋಟಿಗಟ್ಟಲೆ ಡೌನ್‌ಲೋಡ್
ನವ ದೆಹಲಿ – ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ನಂತರ ಭಾರತವು ಚೀನಾದ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ರದ್ದುಗೊಳಿಸಲು ಪ್ರಾರಂಭಿಸಿತು, ಜೊತೆಗೆ ಚೀನಾದ ಆಪ್‌ಗಳನ್ನು ನಿಷೇಧಿಸಿತು; ಆದರೆ ಈಗ ಅದೇ ಆಪ್ ಗಳು ಹೊಸ ಹೆಸರು ಮತ್ತು ಕೆಲವು ಬದಲಾವಣೆಗಳೊಂದಿಗೆ ಭಾರತಕ್ಕೆ ಮರಳಿದ್ದೂ ಅವು ಕೋಟಿಗಟ್ಟಲೆ ಸಂಚಾರವಾಣಿಗಳಲ್ಲಿ ಡೌನ್‌ಲೋಡ್ ಆಗಿವೆ, ಎಂಬ ಮಾಹಿತಿಯು ಬೆಳಕಿಗೆ ಬಂದಿದೆ.
೧. ಚೀನಾದ ಕಂಪನಿಯೊಂದು ‘ಸ್ನ್ಯಾಕ್ ವಿಡಿಯೋ’ ಎಂಬ ಆಪ್ ರಚಿಸಿದೆ. ನಿಷೇಧಿಸಿದ್ದ ಹಳೆಯ ‘ಕ್ವಾಯಿ’ ಆಪ್‌ನಂತೆ ಕಾಣಿಸುತ್ತದೆ. ‘ಸ್ನ್ಯಾಕ್ ವಿಡಿಯೋ’ಅನ್ನು ‘ಗೂಗಲ್ ಪ್ಲೇ ಸ್ಟೋರ್’ನಲ್ಲಿ ೧೦ ಕೋಟಿಗೂ ಹೆಚ್ಚು ಡೌನ್‌ಲೋಡ್ ಮಾಡಲಾಗಿದೆ. ಈ ಆಪ್‌ನಲ್ಲಿ ಟಿಕ್ ಟಾಕ್ ನಂತಹ ಸೌಲಭ್ಯವನ್ನೂ ಸಹ ನೀಡಲಾಗಿದೆ.
೨. ಚೀನಾದ ಮತ್ತೊಂದು ಅಪ್ಲಿಕೇಶನ್ ‘ಹ್ಯಾಂಗೊ’ವನ್ನು ಮುಚ್ಚಲಾಯಿತು. ಅದರಿಂದ ಅಪರಿಚಿತ ವ್ಯಕ್ತಿಗಳೊಂದಿಗೆ ‘ಚಾಟ್ ರೂಮ್’ಗಳನ್ನು ನಿರ್ಮಿಸುವುದು ಹಾಗೂ ಆಟವಾಡುವ ಅವಕಾಶ ಮಾಡಿಕೊಟ್ಟಿತ್ತು. ಆ ಆಪ್ ನ ಸ್ಥಾನವನ್ನು ಈಗ ಚೀನಾದ ‘ಓಲಾ ಪಾರ್ಟಿ’ ಎಂಬ ಆಪ್ ತುಂಬಿಸಿದೆ.
ಸರ್ಕಾರಿ ವ್ಯವಸ್ಥೆಯ ಅಜಾಗರೂಕತೆ !
ಇದರ ಬಗ್ಗೆ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, ಒಂದು ವೇಳೆ ಹೀಗೇನಾದರೂ ಆಗುತ್ತಿದ್ದರೇ, ನಾವು ಖಂಡಿತವಾಗಿಯೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು. (ಮಾಧ್ಯಮಗಳಿಗೆ ಅಂತಹ ಮಾಹಿತಿ ದೊರೆತರೂ, ಎಲ್ಲಾ ವ್ಯವಸ್ಥೆಗಳು ಕೈಯಲ್ಲಿರು ಸರಕಾರಿ ಅಧಿಕಾರಿಗಳಿಗೆ ಇದರ ಬಗ್ಗೆ ತಿಳಿದಿಲ್ಲ ಮತ್ತು ಅವರು ‘ಹಾಗೆ – ಹೀಗೆ’ ಹೇಳುವುದು ಗಂಭೀರವಾಗಿದೆ. – ಸಂಪಾದಕರು) ಇಲೆಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮಾರ್ಗಸೂಚಿಯನುಸಾರ ಯಾವುದೇ ನಿಷಷೇಧಿಸಿದ ಚೀನಾದ ಆಪ್ ಹೊಸ ರೂಪದಲ್ಲಿ ಲಭ್ಯವಾಗಲು ಬಿಡುವುದಿಲ್ಲ. (ಇದು ದೇಶದಲ್ಲಿ ಲಭ್ಯವಾಗಿದ್ದರೂ, ‘ಅದು ಲಭ್ಯವಾಗಲು ಬಿಡುವುದಿಲ್ಲ’ ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ ! – ಸಂಪಾದಕರು)