ದೆಹಲಿ ಗಲಭೆ ಮತ್ತು ಸಿಎಎ ವಿರೋಧಿ ಆಂದೋಲನದಲ್ಲಿ ಐ.ಎಸ್.ಐ ಕೈವಾಡ ! – ದೆಹಲಿ ಪೊಲೀಸ

ಭಾರತಕ್ಕೆ ಇಂತಹ ಪುರಾವೆಗಳು ಸಿಗುತ್ತಿದ್ದರೆ, ಭಾರತವು ಏಕೆ ಪಾಕಿಸ್ತಾನದ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ ? ಪಾಕಿಸ್ತಾನವು ಭಯೋತ್ಪಾದನೆ ಮತ್ತು ಜಿಹಾದಿಗಳ ಮೂಲಕ ಭಾರತದಲ್ಲಿ ಕಾರ್ಯಾಚರಣೆ ಮಾಡುತ್ತದೆ ಮತ್ತು ಭಾರತವು ಪುರಾವೆ ನೀಡಿವುದನ್ನು ಬಿಟ್ಟು ಬೇರೆ ಏನನ್ನೂ ಮಾಡುವುದಿಲ್ಲ. ಪಾಕಿಸ್ತಾನದ ಅಸ್ತಿತ್ವವೇ ಅಳಿಸಿ ಹೋಗುವಂತಹ ಕಾರ್ಯಾಚರಣೆ ಭಾರತ ಏಕೆ ಮಾಡುತ್ತಿಲ್ಲ ?

ನವ ದೆಹಲಿ – ದೆಹಲಿ ಗಲಭೆಗಳು, ಹಾಗೆಯೇ ಸಿಎಎ ಮತ್ತು ಎನ್.ಆರ್.ಸಿ.ಯ ವಿರುದ್ಧದ ಆಂದೋಲನಗಳ ಹಿಂದೆ ಪಾಕಿಸ್ತಾನದ ಗೂಢಚಾರ ಸಂಸ್ಥೆ ಐ.ಎಸ್.ಐನ ಕೈವಾಡ ಇರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಐ.ಎಸ್.ಐ.ನ ಆದೇಶದ ಮೇರೆಗೆ ಖಲಿಸ್ತಾನ್ ಪರ ಬೆಂಬಲಿಗರು ಕೂಡ ಆಂದೋಲನಕ್ಕೆ ಸೇರಿಕೊಂಡಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ನ್ಯಾಯಾಲಯದಲ್ಲಿ ಸಲ್ಲಿಸಿದ ಆರೋಪಪತ್ರದಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಆರೋಪಿ ಅತರ್ ಖಾನ್ ನ ತಪ್ಪೊಪ್ಪಿಗೆಯನ್ನು ಅದರಲ್ಲಿ ದಾಖಲಿಸಲಾಗಿದೆ. ಅದರಲ್ಲಿ, ಈ ಆಂದೋಲನಗಳಲ್ಲಿ ಭಾಗವಹಿಸಿದ ಮಹಿಳೆಯರಿಗೆ ಪ್ರತಿದಿನ ಹಣ ನೀಡಲಾಗುತ್ತಿತ್ತು ಎಂದು ಹೇಳಿದ್ದಾರೆ. ಕೆಲವು ಹುಡುಗಿಯರಿಗೆ ಹಣವನ್ನು ವಿತರಿಸುವ ಜವಾಬ್ದಾರಿಯನ್ನು ನೀಡಲಾಗಿತ್ತು ಎಂದು ಹೇಳಿದ್ದಾರೆ.