ಪ್ರಸ್ತುತ ಎಲ್ಲೆಡೆ ಕೊರೋನಾ ವೈರಾಣುಗಳು ಹರಡಿದ್ದರಿಂದ ಪ್ರತಿ ತಿಂಗಳ ನಿಗದಿತ ೩ ದಿನ ಸತತವಾಗಿ ‘ಅರ್ಸೆನಿಕ್ ಆಲ್ಬ್ ೩೦’ನ ೩ ಮಾತ್ರೆಗಳನ್ನು ತೆಗೆದುಕೊಳ್ಳಿರಿ !
‘ಕೊರೋನಾ’ ವೈರಾಣುವಿನ ಸೋಂಕಿನಿಂದಾಗುವ ರೋಗಗಳಿಂದ ನಮ್ಮ ರಕ್ಷಣೆಯಾಗಬೇಕು ಅಥವಾ ಅದನ್ನು ತಡೆಗಟ್ಟಬೇಕು’, ಎಂದು ಆಯುಷ ಸಚಿವಾಲಯವು ಪ್ರಕಟಿಸಿದ ಸುತ್ತೋಲೆಯಲ್ಲಿ ಹೋಮಿಯೋಪಥಿಯ ‘ಅರ್ಸೆನಿಕ್ ಆಲ್ಬ್ ೩೦’ ಈ ಔಷಧಿಯನ್ನು ಸೂಚಿಸಲಾಗಿತ್ತು. ಈ ರೋಗನಿರೋಧಕ ಔಷಧಿಯನ್ನು ಎಲ್ಲೆಡೆಯ ಸಾಧಕರು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಹೆಚ್ಚಿನ ಸಾಧಕರು ಈ ಔಷಧಿಯ ೩ ಕೋರ್ಸ್ ಪೂರ್ತಿ ಮಾಡಿದ್ದಾರೆ. ಈಗಲೂ ಎಲ್ಲೆಡೆ ಕೊರೋನಾ ವೈರಾಣುವಿನ ಹರಡುವಿಕೆ ಇರುವುದರಿಂದ ಎಲ್ಲ ಸಾಧಕರು ಪ್ರತಿ ತಿಂಗಳು ಸತತವಾಗಿ ೩ ದಿನಗಳ ಕಾಲ ಪ್ರತಿದಿನ ೩ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಕೊರೋನಾ ವೈರಾಣುವಿನ ಹರಡುವಿಕೆ ಕಡಿಮೆಯಾಗುವವರೆಗೆ ಪ್ರತಿ ತಿಂಗಳು ಈ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರಬೇಕು.’ – ಆಧುನಿಕ ವೈದ್ಯ (ಡಾ.) ಪ್ರವೀಣ ಮೆಹತಾ, ಪುಣೆ