‘ಸನಾತನ ಶಾಪ್ ಈ ‘ಅಂಡ್ರೈಡ್ ಆಪ್ ಸದ್ಗುರು ನಂದಕುಮಾರ ಜಾಧವ ಇವರ ಶುಭಹಸ್ತದಿಂದ ಲೋಕಾರ್ಪಣೆ

ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಸದ್ಗುರು ನಂದಕುಮಾರ ಜಾಧವರವರು ಶುಭಹಸ್ತದಿಂದ ಈ ಆಪ್ ಲೋಕಾರ್ಪಣೆ

ಮುಂಬಯಿ – ಸನಾತನ ಸಂಸ್ಥೆಯ ಗ್ರಂಥ ಹಾಗೂ ಇತರ ಸಾತ್ತ್ವಿಕ ಉತ್ಪಾದನೆಗಳನ್ನು ಭಾರತದಾದ್ಯಂತ ಮನೆಮನೆ ತಲುಪಿಸುವ ಪೂರೈಸುವ SanatanShop.com ಈ ಜಾಲತಾಣಕ್ಕೆ ಲಭಿಸಿದ ಒಳ್ಳೆಯ ಪ್ರತಿಕ್ರಿಯೆಯ ನಂತರ ಈಗ ‘ಸನಾತನ ಶಾಪ್ ಈ ‘ಅಂಡ್ರೈಡ್ ಆಪನ್ನು ವಾಚಕರಿಗಾಗಿ ಲಭ್ಯಮಾಡಿಕೊಟ್ಟಿದೆ. ೧೮ ಸಪ್ಟೆಂಬರ್ ೨೦೨೦ ರಂದು ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಸದ್ಗುರು ನಂದಕುಮಾರ ಜಾಧವರವರು ಶುಭಹಸ್ತದಿಂದ ಈ ಆಪ್ ಲೋಕಾರ್ಪಣೆ ಮಾಡಲಾಯಿತು.

೧. ಸನಾತನ ಸಂಸ್ಥೆಯ ವತಿಯಿಂದ ಪ್ರಕಾಶಿಸಲಾದ ‘ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ, ‘ಆಧ್ಯಾತ್ಮಿಕ ಉನ್ನತಿಗಾಗಿ ಸಾಧನೆ, ‘ಧರ್ಮಶಾಸ್ತ್ರ, ‘ಬಾಲಸಂಸ್ಕಾರ, ‘ಹಿಂದೂ ರಾಷ್ಟ್ರ, ‘ಆಯುರ್ವೇದ ಅದೇರೀತಿ ಇತರ ವಿಷಯಗಳ ಮೇಲಿನ ವಿವಿಧ ಗ್ರಂಥಗಳು ಈ ಆಪ್‌ನ ಮಾಧ್ಯಮದಿಂದ ಖರೀದಿಸಬಹುದಾಗಿದೆ.

೨. ಆಗಸ್ಟ್ ೨೦೨೦ ತನಕ ೧೭ ಭಾಷೆಗಳಲ್ಲಿನ ೩೨೫ ಗ್ರಂಥಗಳ ೮೦ ಲಕ್ಷ ೧೮ ಸಾವಿರ ಪ್ರತಿಗಳನ್ನು ಪ್ರಕಾಶಿಸಲಾಗಿದೆ. ವಿವಿಧ ವಿಷಯಗಳ ಈ ಗ್ರಂಥಗಳು ಆಪ್ ನಲ್ಲಿ ಕನ್ನಡ, ಹಿಂದಿ, ಮರಾಠಿ, ಆಂಗ್ಲ, ಗುಜರಾತಿ, ಮಲಯಾಳಮ್, ಓಡಿಯಾ, ತಮಿಳು ಅದೇರೀತಿ ತೆಲುಗು ಈ ೯ ಭಾಷೆಗಳಲ್ಲಿ ಮಾರಾಟಕ್ಕಾಗಿ ಲಭ್ಯವಿದೆ. SanatanShop.com ಅಥವಾ ‘ಸನಾತನ ಶಾಪ್ ಈ ‘ಆಂಡ್ರಾಯ್ಡ್ ಆಪ್ನಲ್ಲಿ ಗ್ರಂಥಗಳು ಹಾಗೂ ಉತ್ಪಾದನೆಗಳು ರಿಯಾಯತಿ ದರಗಳಲ್ಲಿ ಲಭ್ಯವಿದೆ. ‘ವಾಚಕರು ಈ ರಿಯಾಯತಿಯ ಲಾಭವನ್ನು ಪಡೆದುಕೊಳ್ಳಬೇಕು. ಜೊತೆಗೆ ದೇವತೆಗಳ ಸಾತ್ತ್ವಿಕ ನಾಮಪಟ್ಟಿಗಳು, ಜಪಮಾಲೆ, ದೇವತೆಗಳ ಲಾಕೇಟ್ಸ್, ದೇವತೆಗಳ ಸಾತ್ತ್ವಿಕ ಚಿತ್ರಗಳು ಹಾಗೂ ಇತರ ಸಾತ್ತ್ವಿಕ ಉತ್ಪಾದನೆಗಳೂ ಖರೀದಿಗಾಗಿ ಲಭ್ಯವಿದೆ ಎಲ್ಲರೂ ಈ ಆಪ್‌ಅನ್ನು ಡೌನ್‌ಲೋಡ್ ಮಾಡಿರಿ, ಅದೇರೀತಿ ಈ ಬಗ್ಗೆ ಸಂಬಂಧಿಕರಿಗೆ ಹಾಗೂ ಪರಿಚಿತರಿಗೂ ತಿಳಿಸಿರಿ, ಎಂದು ಸಂಸ್ಥೆಯ ವತಿಯಿಂದ ಕರೆ ನೀಡಲಾಗಿದೆ.

‘ಸನಾತನ ಪಂಚಾಂಗ ೨೦೨೧ ಮನೆಗೆ ತಲುಪಿಸಲಾಗುವುದು

ಸನಾತನ ಸಂಸ್ಥೆಯ ವತಿಯಿಂದ ಪ್ರಕಾಶಿಸಲಾಗಿರುವ ‘ಸನಾತನ ಪಂಚಾಂಗ ೨೦೨೧ ಶೀಘ್ರದಲ್ಲೇ ‘ಸನಾತನ ಶಾಪ್ ನಲ್ಲಿ ಲಭ್ಯವಾಗಲಿದೆ. ವಾಚಕರಿಗೂ ಪಂಚಾಂಗವು ಮನೆಯಲ್ಲೇ ಸಿಗಲಿದೆ.

‘ಸನಾತನ ಶ್ಯಾಪ್ ‘ಅಂಡ್ರೈಡ್ ಆಪ್ ಡೌನ್‌ಲೋಡ್ ಮಾಡಲು ಲಿಂಕ್

https://sanatanshop.com//app