ಸಾಧಕರಿಗೆ ಮಹತ್ವದ ಸೂಚನೆ !

‘ಧರ್ಮಪ್ರಸಾರ ಮಾಡುವಾಗ ಬರುವ ಒಳ್ಳೆಯ-ಕೆಟ್ಟ-ವಿಶೇಷ ಅನುಭವಗಳನ್ನು ಬರೆದು ಕಳುಹಿಸುವುದು ಪ್ರಸಾರ ಸಾಧಕರ ಸಮಷ್ಟಿ ಸಾಧನೆಯ ಮಹತ್ವದ ಭಾಗವಾಗಿದೆ, ಎಂಬುದನ್ನು ಗಮನದಲ್ಲಿಟ್ಟು ಅಂತಹ ಅನುಭವಗಳನ್ನು ಆಯಾ ಸಮಯಕ್ಕೆ ಕಳುಹಿಸಿರಿ !

೧. ಧರ್ಮಪ್ರಸಾರದಲ್ಲಿ ಬರುವ ಒಳ್ಳೆಯ-ಕೆಟ್ಟ-ವಿಶೇಷ ಅನುಭವಗಳನ್ನು ಕಳುಹಿಸುವುದರ ಮಹತ್ವ

ಧರ್ಮಪ್ರಸಾರ ಮಾಡುವಾಗ ಬಂದಿರುವ ಒಳ್ಳೆಯ-ಕೆಟ್ಟ-ವಿಶೇಷ ಅನುಭವಗಳನ್ನು ಬರೆದು ಕಳುಹಿಸುವುದು, ಪ್ರಸಾರ ಸಾಧಕರ ಸಮಷ್ಟಿ ಸಾಧನೆಯ ಮಹತ್ವದ ಭಾಗವಾಗಿದೆ. ಇದರ ಕಾರಣಗಳನ್ನು ಮುಂದೆ ನೀಡಲಾಗಿದೆ.

ಅ. ನೀವು ಬರೆದು ಕಳುಹಿಸಿದ ಅನುಭವವನ್ನು ‘ಸನಾತನ ಪ್ರಭಾತ ನಿಯತಕಾಲಿಕೆಗಳಲ್ಲಿ ಪ್ರಕಟಿಸಬಹುದು. ಈ ನಿಯತಕಾಲಿಕೆಗಳ ಮಾಧ್ಯಮದಿಂದ ಭಾರತದಾದ್ಯಂತ ಪ್ರಸಾರದಲ್ಲಿರುವ ಸಾಧಕರಿಗೆ ಮತ್ತು ದೊಡ್ಡ ಪ್ರಮಾಣದಲ್ಲಿ ಸಮಾಜದ ಜನರಿಗೆ ವಿಷಯವನ್ನು ತಲುಪಿಸಬಹುದು.

ಆ. ಧರ್ಮಪ್ರಸಾರದ ಕಾರ್ಯವನ್ನು ಮಾಡುವಾಗ ಅಥವಾ ಯಾವುದಾದರೂ ಒಂದು ಹೊಸ ಉಪಕ್ರಮವನ್ನು ನಡೆಸಿದಾಗ ಸಮಾಜದಿಂದ ಒಳ್ಳೆಯ ಬೆಂಬಲ ಸಿಗುತ್ತದೆ. ಈ ಬೆಂಬಲವನ್ನು ಇತರರು ಓದಿದಾಗ ಅವರಿಗೂ ಈ ಕಾರ್ಯ ಮಾಡಲು ಅಥವಾ ಆ ರೀತಿ ಬೆಂಬಲಿಸುವ ಪ್ರೇರಣೆ ದೊರಕುತ್ತದೆ.

ಇ. ಏನಾದರೂ ಪೂರಕವಾದ ವಿಶೇಷ ಘಟನೆ ನಡೆದರೆ ಅದನ್ನು ಓದಿದಾಗ ಇತರ ಸ್ಥಳಗಳಲ್ಲಿ ಧರ್ಮಪ್ರಸಾರದ ಕಾರ್ಯ ಮಾಡುವವರಲ್ಲಿಯೂ ಉತ್ಸಾಹ ಹೆಚ್ಚಾಗುತ್ತದೆ.

ಈ. ಧರ್ಮಪ್ರಸಾರದ ಕಾರ್ಯ ಮಾಡುವಾಗ ಯಾವುದಾದರೂ ವಿರೋಧದ ಅಥವಾ ಕೆಟ್ಟ ಅನುಭವದ ಘಟನೆ ನಡೆದಿದ್ದರೆ ಅದನ್ನು ‘ಸನಾತನ ಪ್ರಭಾತದಲ್ಲಿ ಮುದ್ರಿಸಿ ಸಮಾಜವನ್ನು ಜಾಗೃತಗೊಳಿಸಬಹುದು.

ಉ. ಕಲಿಯಲು ಸಿಕ್ಕಿದ ಪ್ರಾಯೋಗಿಕ ಅಂಶಗಳನ್ನು ಓದಿ ಬೇರೆ ಕಡೆಗಳಲ್ಲಿ ಪ್ರಸಾರದ ಕಾರ್ಯ ಮಾಡುವವರಿಗೂ ಪ್ರಾಯೋಗಿಕ ಸ್ತರದಲ್ಲಿ ಪ್ರಯೋಜನವಾಗುತ್ತದೆ. ‘ಕಾರ್ಯವನ್ನು ಹೇಗೆ ಮಾಡಬೇಕು ?, ಎಂದು ಅವರಿಗೆ ಮಾರ್ಗದರ್ಶನ ದೊರಕುತ್ತದೆ ಹಾಗೂ ಅವರ ಸಂದೇಹಗಳೂ ನಿವಾರಣೆಯಾಗುತ್ತದೆ.

ಊ. ಧರ್ಮಪ್ರಸಾರದ ಕಾರ್ಯಕ್ಕಾಗಿ ನಾವು ಸ್ಥಳೀಯ ಅವಶ್ಯಕತೆಯಂತೆ ಏನೆಲ್ಲ ಸಂಹಿತೆಯನ್ನು ಬರೆಯುತ್ತೇವೆಯೋ ಅಥವಾ ಹೊಸ ವಿಷಯವನ್ನು ಮಂಡಿಸುತ್ತೇವೆಯೋ, ಅದನ್ನೂ ಬರೆದು ಕಳುಹಿಸಿದರೆ ಭಾರತದಾದ್ಯಂತ ಕಾರ್ಯ ಮಾಡುತ್ತಿರುವ ಇತರರಿಗೂ ಅಂತಹ ವಿಷಯಗಳ ಭಾಷಣಕ್ಕೆ ಉಪಯೋಗಿಸಬಹುದು. ಇದರಿಂದ ಆಯಾ ಸ್ಥಳಗಳ ಸಾಧಕರ ಸಂಹಿತೆ ಬರೆಯುವ ಸಮಯವು ಉಳಿತಾಯವಾಗುತ್ತದೆ. ಬೇರೆ ಕಡೆಗಳಲ್ಲಿ ಸಾಧಕರಿಗೆ ಸಂಹಿತೆ ಉಪಲಬ್ಧವಾಗುವುದರಿಂದ ತಮ್ಮ ಭಾಗದಲ್ಲಿ ವಿಷಯವನ್ನು ಮಂಡಿಸಲು ಸಾಧ್ಯವಾಗುತ್ತದೆ.

ಎ. ಧರ್ಮಪ್ರಸಾರದ ಯಾವುದಾದರೂ ಹೊಸ ಉಪಕ್ರಮಗಳ ಬಗ್ಗೆ ಬಂದಿರುವ ಒಳ್ಳೆಯ-ಕೆಟ್ಟ- ಅನುಭವಗಳನ್ನು ಬರೆದು ಕಳುಹಿಸಿದರೆ ಆ ಉಪಕ್ರಮದ ಸಂದರ್ಭದಲ್ಲಿ ಅಭ್ಯಾಸ ಮಾಡಬಹುದು ಮತ್ತು ಅದರಲ್ಲಿ ಸುಧಾರಣೆಗಳನ್ನು ಮಾಡಿ ಅದರ ನಿಲುವನ್ನು ನಿರ್ಧರಿಸಬಹುದು.

ಏ. ನೀವು ಕಳುಹಿಸಿದ ಕೆಲವು ಆಯ್ದ ಲೇಖನಗಳನ್ನು ಧರ್ಮ ಪ್ರಸಾರ ಮತ್ತು ಸಮಷ್ಟಿ ಸಾಧನೆಗೆ ಸಂಬಂಧಿಸಿದ ಪ್ರಾಯೋಗಿಕ ಗ್ರಂಥಗಳಲ್ಲಿಯೂ ಸೇರಿಸಲೂ ಅನುಕೂಲವಾಗುವುದು. ಈ ಗ್ರಂಥಗಳಿಂದ ಭಾವೀ ಪೀಳಿಗೆಗೂ ಲಾಭವಾಗಬಹುದು.

ಓ. ಸಾಧಕರ ಧರ್ಮಪ್ರಸಾರದ ಕಾರ್ಯವು ಒಂದು ಭೌಗೋಳಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರುತ್ತದೆ; ಆದರೆ ಅವರು ಕಳುಹಿಸಿದ ಧರ್ಮಪ್ರಸಾರಕ್ಕೆ ಸಂಬಂಧಿತ ಲೇಖನವು ಭಾರತದಾದ್ಯಂತ ಎಲ್ಲೆಡೆಯ ಸಾಧಕರಿಗೆ ಲಾಭದಾಯಕವಾಗಿರುತ್ತದೆ; ಆದ್ದರಿಂದ ಧರ್ಮ ಪ್ರಸಾರದ ಸಮಷ್ಟಿ ಸೇವೆಗಿಂತ ಧರ್ಮಪ್ರಸಾರಕ್ಕೆ ಸಂಬಂಧಿತ ಲೇಖನವು ಸಮಷ್ಟಿ ಸಾಧನೆಯಲ್ಲಿ ಹೆಚ್ಚು ಮಹತ್ವದ್ದಾಗಿದೆ. ಧರ್ಮಪ್ರಸಾರ ಮಾಡುವಾಗ ಬರುವ ಒಳ್ಳೆಯ-ಕೆಟ್ಟ-ವಿಶೇಷ ಅನುಭವಗಳನ್ನು ಬರೆದು ಕಳುಹಿಸಲು ಇಷ್ಟು ಮಹತ್ವವಿರುವಾಗ ‘ಪ್ರಸಾರದಲ್ಲಿರುವ ಸಾಧಕರಿಂದ ಈ ರೀತಿಯ ಕೃತಿ ಏಕೆ ಆಗುತ್ತಿಲ್ಲ ?, ಎಂದು ಪ್ರಸಾರ ಕಾರ್ಯ ಮಾಡುವ ಸಾಧಕರು ಗಾಂಭೀರ್ಯದಿಂದ ವಿಚಾರ ಮಾಡಬೇಕಾಗಿದೆ. ಅನೇಕರಿಂದ ಪ್ರಯತ್ನಗಳೂ ಆಗಿದ್ದರೂ ಆ ಅನುಭವವನ್ನು ಬರೆದು ಕಳುಹಿಸುವ ತುಲನೆಯಲ್ಲಿ ಅದು ತುಂಬಾ ಕಡಿಮೆ ಇದೆ.

೨. ಧರ್ಮಪ್ರಸಾರಕ್ಕೆ ಸಂಬಂಧಿತ ಲೇಖನವನ್ನು ಕಳುಹಿಸದವರು ಮುಂದಿನ ಕೃತಿಯನ್ನು ಮಾಡಬೇಕು

ಅ. ಧರ್ಮಪ್ರಸಾರದಲ್ಲಿ ಬಂದಂತಹ ಆದರೆ ಇಲ್ಲಿಯವರೆಗೆ ಕಳುಹಿಸದೇ ಇರುವ ಎಲ್ಲ ಒಳ್ಳೆಯ-ಕೆಟ್ಟ-ವಿಶೇಷ ಅನುಭವ ಹಾಗೂ ಸಂಹಿತೆಯನ್ನು ಪ್ರಾಧಾನ್ಯತೆಯಿಂದ ಬರೆಯಲು ನಿಯೋಜನೆ ಮಾಡಬೇಕು. ಈ ಸೇವೆಗಾಗಿ ಸಮಯವನ್ನು ನಿಗದಿಗೊಳಿಸಬೇಕು. ಈ ಸಂದರ್ಭದಲ್ಲಿ ನಿಮ್ಮ ನಿಯೋಜನೆಯನ್ನು ಜವಾಬ್ದಾರ ಸಾಧಕರಿಗೆ ತಿಳಿಸಬೇಕು.

ಆ. ಧರ್ಮಪ್ರಸಾರಕ್ಕೆ ಸಂಬಂಧಿತ ಅನುಭವಗಳ ಲೇಖನವನ್ನು ಕಳುಹಿಸದಿರುವ ಸಾಧಕರು ಸಮಷ್ಟಿ ತಪ್ಪುಗಳಿಗೆ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬೇಕು.

ಇ. ಧರ್ಮಪ್ರಸಾರ ಕಾರ್ಯದ ಬಗ್ಗೆ ಜವಾಬ್ದಾರಿ ತೆಗೆದುಕೊಂಡು ಕಾರ್ಯ ಮಾಡುವವರಲ್ಲಿಯೂ ಅನುಭವಗಳನ್ನು ಕಳುಹಿಸುವ ವಿಷಯದಲ್ಲಿ ಗಾಂಭೀರ್ಯ ಕಡಿಮೆಯಿದೆ. ಅವರಿಗೆ ಪ್ರತಿದಿನ ವಿವಿಧ ಪ್ರಕಾರದ ಅನುಭವಗಳು ಬರುತ್ತವೆ. ಇದಕ್ಕಾಗಿ ಅವರು ತಾವು ತೆಗೆದುಕೊಳ್ಳುತ್ತಿರುವ ಸ್ವಯಂಸೂಚನೆಯೊಂದಿಗೆ ಮುಂದಿನ ಸ್ವಯಂ ಸೂಚನೆಯನ್ನು ಕೂಡ ತೆಗೆದುಕೊಳ್ಳಬೇಕು. ‘ಧರ್ಮ ಪ್ರಸಾರದ ಸೇವೆ ಮಾಡುತ್ತಿರುವಾಗ ನನಗೆ ವಿಶೇಷ ಅನುಭವ, ಬೆಂಬಲ ಅಥವಾ ವಿಷಯಗಳು ತಿಳಿದಾಗ ನನಗೆ ಆ ಲೇಖನವನ್ನು ಮುಂದೆ ಕಳುಹಿಸಬೇಕೆಂದು ಅರಿವಾಗುವುದು ಮತ್ತು ಅದೇ ದಿನ ಆ ಲೇಖನವನ್ನು ಕಳುಹಿಸುತ್ತೇನೆ, ಹಾಗೂ ಜವಾಬ್ದಾರ ಸಾಧಕರಿಗೆ ಅದರ ವರದಿಯನ್ನೂ ನೀಡುತ್ತೇನೆ.

ಈ. ಪ್ರಸಾರದ ನಿಯಮಿತ ಸತ್ಸಂಗದಲ್ಲಿಯೂ ಜವಾಬ್ದಾರ ಸಾಧಕರು ಧರ್ಮಪ್ರಸಾರಕ್ಕೆ ಸಂಬಂಧಿಸಿದ ಅನುಭವವನ್ನು ಕಳುಹಿಸುವ ಬಗ್ಗೆ ಸಾಧಕರ ವರದಿಯನ್ನು ತೆಗೆದುಕೊಳ್ಳಬೇಕು.

ಉ. ಧರ್ಮಪ್ರಸಾರ ಕಾರ್ಯಕ್ಕೆ ಸಂಬಂಧಿಸಿದ ಯಾವುದಾದರೂ ಅನುಭವ ಅಥವಾ ಘಟನೆ ಇತರ ಸಾಧಕರಿಂದ ನಮಗೆ ತಿಳಿದರೆ ಮತ್ತು ಅದರಿಂದ ಪ್ರಸಾರ ಕಾರ್ಯ ಅಥವಾ ಜಾಗೃತಿಯ ದೃಷ್ಟಿಯಿಂದ ಪ್ರಯೋಜನವಾಗುತ್ತಿದ್ದರೆ, ಆ ಸಾಧಕನಿಗೆ ಆ ಅನುಭವವನ್ನು ಮುಂದೆ ಕಳುಹಿಸಲು ಹೇಳಬೇಕು. ಆ ಸಾಧಕರಿಗೆ ಕ್ಷಮತೆಯಿಲ್ಲದಿದ್ದರೆ ಆ ಅನುಭವವನ್ನು ಸ್ವತಃ ಕಳುಹಿಸುವ ನಿಯೋಜನೆಯನ್ನು ಮಾಡಬೇಕು. ಪ್ರಸ್ತುತ ಲೇಖನಗಳನ್ನು ಜಿಲ್ಲೆಗಳಿಂದ ನಿತ್ಯದ ಪದ್ಧತಿಯಂತೆ ಕಳುಹಿಸಬೇಕು. ‘ಲೇಖನ ಯಾರದ್ದಾಗಿದೆ ?, ಅವರ ಹೆಸರು ಮತ್ತು ಸಂಪರ್ಕ ಕ್ರಮಾಂಕ ಇತ್ಯಾದಿ ಪ್ರಾಥಮಿಕ ಮಾಹಿತಿಯನ್ನು ಅದರಲ್ಲಿ ತಿಳಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಧರ್ಮಪ್ರಸಾರ ಕಾರ್ಯದ ಅನುಭವ ಕಳುಹಿಸುವ ಮಹತ್ವವನ್ನು ಗಮನದಲ್ಲಿಟ್ಟು ಬಂದಂತಹ ಅನುಭವಗಳನ್ನು ಆಯಾ ಸಮಯಕ್ಕೆ ಕಳುಹಿಸಿ ಧರ್ಮಪ್ರಸಾರದ ಸೇವೆಯನ್ನು ಪರಿಪೂರ್ಣ ಮಾಡಿರಿ !