ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

‘ಆನ್‌ಲೈನ್ ಸತ್ಸಂಗ ಮಾಲಿಕೆ’ಯ ಎಲ್ಲ ಸತ್ಸಂಗಗಳು ‘ಯೂ ಟ್ಯೂಬ್’ನಲ್ಲಿ ಲಭ್ಯವಿದ್ದು ತಮ್ಮ ಸಮಯಕ್ಕನುಸಾರ ಈ ಸತ್ಸಂಗಗಳ ಲಾಭ ಪಡೆಯಿರಿ !

‘ಸಮಾಜಕ್ಕೆ ನಾಮಜಪ ಮುಂತಾದ ಸಾಧನೆಯ ಮಹತ್ವವು ತಿಳಿಯಬೇಕು ಹಾಗೂ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯದ ಪ್ರಸಾರವಾಗಬೇಕು’, ಎಂಬ ದೃಷ್ಟಿಯಿಂದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಆನ್‌ಲೈನ್ ಸತ್ಸಂಗ ಮಾಲಿಕೆ’ಯನ್ನು ಪ್ರಸಾರ ಮಾಡಲಾಗುತ್ತಿದೆ. ದೇಶದಾದ್ಯಂತ ಸಂಚಾರಸಾರಿಗೆ ನಿರ್ಬಂಧವು ಜಾರಿಗೆ ಬಂದ ಕಾರಣ ಮನೆಮನೆಗೆ ಹೋಗಿ ಅಧ್ಯಾತ್ಮ ಪ್ರಸಾರ ಮಾಡಲು ಸಾಧ್ಯವಾಗುತ್ತಿಲ್ಲ. ಸತ್ಸಂಗಗಳ ಮಾಧ್ಯಮದಿಂದ ಅದಕ್ಕಿಂತಲೂ ಹೆಚ್ಚು ವ್ಯಾಪಕ ಪ್ರಸಾರವಾಗುತ್ತಿದ್ದು ಸಮಾಜಕ್ಕೆ ಆಪತ್ಕಾಲದಲ್ಲಿಯೂ ನವಸಂಜೀವನಿಯು ಸಿಗುತ್ತಿದೆ.

ಕಾರ್ಯಾಲಯದ ಬಿಡುವಿಲ್ಲದ ಕಾರ್ಯಕಲಾಪಗಳಿಂದ ಹಾಗೂ ಕೌಟುಂಬಿಕ ಜವಾಬ್ದಾರಿ ಇವುಗಳಿಂದಾಗಿ ಕೆಲವು ಜಿಜ್ಞಾಸುಗಳಿಗೆ ನಿಯಮಿತವಾಗಿ ಸತ್ಸಂಗಗಳ ಲಾಭ ಪಡೆಯಲು ಆಗುತ್ತಿಲ್ಲ. ‘ಈ ಜಿಜ್ಞಾಸುಗಳು ಸತ್ಸಂಗಗಳಿಂದ ವಂಚಿತರಾಗ ಬಾರದೆಂದು’, ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಇವುಗಳ ‘ಯೂ ಟ್ಯೂಬ್ ವಾಹಿನಿಯಲ್ಲಿನ (ಚಾನೆಲ್‌ನಲ್ಲಿನ) ‘ಪ್ಲೆ ಲಿಸ್ಟ್’ನಲ್ಲಿ ಇಲ್ಲಿಯವರೆಗೆ (ಸಂಚಾರ ಸಾರಿಗೆ ನಿರ್ಬಂಧದ ಸಮಯದಲ್ಲಿ) ಪ್ರಸಾರ ಮಾಡಲಾದ ಎಲ್ಲ ಸತ್ಸಂಗಗಳು ೨೪ ಗಂಟೆಗಳ ಕಾಲ ಲಭ್ಯವಿದೆ. ಜಿಜ್ಞಾಸುಗಳು ತಮ್ಮ ಸಮಯಕ್ಕನುಸಾರ ದಿನದ ಯಾವುದೇ ಸಮಯದಲ್ಲಿ ಈ ಸತ್ಸಂಗಗಳನ್ನು ನೋಡಬಹುದಾಗಿದೆ. ಎಲ್ಲರೂ ತಮ್ಮ ಆಪ್ತರಿಗೆ, ಸ್ವಕೀಯರಿಗೆ, ಸ್ನೇಹಿತರಿಗೆ, ಕಾರ್ಯಾಲಯದ ಸಹದ್ಯೋಗಿಗಳಿಗೆ ಮುಂತಾದವರಿಗೆ ಈ ಬಗ್ಗೆ ಹೇಳಿ ಸತ್ಸಂಗಗಳ ಲಾಭ ಪಡೆಯಲು ಉದ್ಯುಕ್ತಗೊಳಿಸಬೇಕು.

ಮುಂದಿನ ‘ಯೂ ಟ್ಯೂಬ್’ ಲಿಂಕ್‌ನಲ್ಲಿ ಎಲ್ಲ ಸತ್ಸಂಗಗಳು ಲಭ್ಯ !

https://www.youtube.com/HJSKarnataka

https://www.youtube.com/SSKarnataka