ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ನಂತರ ಆಡಳಿತವು ಚಿಕ್ಕಬಳ್ಳಾಪುರದ ಬೆಟ್ಟದ ಮೇಲಿನ ಸರ್ಕಾರಿ ಭೂಮಿಯಲ್ಲಿ ಹಾಕಲಾಗಿದ್ದ ಅಕ್ರಮ ಶಿಲುಬೆ ಮತ್ತು ಯೇಸುವಿನ ಮೂರ್ತಿಯನ್ನು ತೆಗೆದುಹಾಕಿತು !

  • ನ್ಯಾಯಾಲಯದ ಆದೇಶದ ನಂತರ ಇದನ್ನು ಏಕೆ ಮಾಡಲಾಯಿತು ? ಆಡಳಿತವು ಸ್ವತಃ ಅದನ್ನು ಏಕೆ ಮಾಡಲಿಲ್ಲ ?

  • ಸರಕಾರಿ ಭೂಮಿಯಲ್ಲಿ ಇಂತಹ ಧಾರ್ಮಿಕ ಅತಿಕ್ರಮಣ ಆಗುವ ತನಕ ಆಡಳಿತವು ನಿದ್ರೆ ಮಾಡುತ್ತಿತ್ತೇ ? ಅಥವಾ ನಿರ್ಲಕ್ಷಿಸಿತ್ತೇ ? ಇಂತಹ ಬೇಜವಾಬ್ದಾರಿತನ ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು !

  • ಭ್ರಷ್ಟಾಚಾರದ ನೆಪದಲ್ಲಿ ದೇವಸ್ಥಾನಗಳನ್ನು ವಶಪಡಿಸಿಕೊಳ್ಳುತ್ತಿರುವ ಸರಕಾರ, ಸರಕಾರಿ ಜಮೀನುಗಳನ್ನು ಅತಿಕ್ರಮಣ ಮಾಡುವಂತಹ ದೊಡ್ಡ ಭ್ರಷ್ಟಾಚಾರ ಮಾಡುವ ಚರ್ಚ್‌ಗಳು ಮತ್ತು ಮಸೀದಿಗಳನ್ನು ವಶಪಡಿಸಿಕೊಳ್ಳುವ ಧೈರ್ಯವನ್ನು ಎಂದಿಗೂ ತೋರಿಸಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ

ಚಿಕ್ಕಬಳ್ಳಾಪುರ – ಇಲ್ಲಿನ ಸೊಸೇಪಾಳ್ಯ ಬೆಟ್ಟದಲ್ಲಿಯ ಸರಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದ್ದ ಶಿಲುಬೆ ಮತ್ತು ಯೇಸುವಿನ ಬೃಹತ್ ಮೂರ್ತಿಯನ್ನು ಜಿಲ್ಲಾಡಳಿತ ತೆಗೆದುಹಾಕಿದೆ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಕುರಿತು ಕರ್ನಾಟಕ ಉಚ್ಚನ್ಯಾಯಾಲಯವು ತೀರ್ಪು ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು. ಕಾರ್ಯಾಚರಣೆಯ ಸಮಯದಲ್ಲಿ ಕ್ರೈಸ್ತರು ಪ್ರತಿಭಟನೆಯನ್ನು ನಡೆಸಿದರು. ಇದು ಸರ್ಕಾರಿ ಸ್ವಾಮ್ಯದ ಭೂಮಿಯಾಗಿದ್ದು, ಅಲ್ಲಿ ಶಿಲುಬೆ ಹಾಗೂ ಮೂರ್ತಿಯನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು.
ಕಳೆದ ವರ್ಷ ಕೇರಳದಲ್ಲಿ ಒಂದು ಚರ್ಚ್‌ನಿಂದ ರಾಜ್ಯದ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಸರಕಾರದ ಸಹಾಯದಿಂದ ‘ಪೂನಕವನಮ್’ ಎಂದು ಕರೆಯಲ್ಪಡುವ ಶಬರಿಮಲೈ ದೇವಸ್ಥಾನಕ್ಕೆ ಸಂಬಂಧಿಸಿದ ಪವಿತ್ರ ಅರಣ್ಯವನ್ನು ಅತಿಕ್ರಮಿಸಲು ಪ್ರಯತ್ನಿಸಲಾಗಿತ್ತು. ಈ ಭೂಮಿ ‘ಕ್ರೈಸ್ತರ ತೀರ್ಥಕ್ಷೇತ್ರ’ ಎಂದು ಹೇಳುವ ಫಲಕವನ್ನು ಸಹ ಹಾಕಲಾಗಿತ್ತು.