ಮಾಲ್ಡೀವ್ಸ್ ಒಪ್ಪಿಗೆ ಇಲ್ಲದ ಕಾರಣ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ೧೯ ನೇ ಸಾರ್ಕ್ ಶೃಂಗಸಭೆ ರದ್ದು

ಅಬ್ದುಲ್ಲಾ ಶಾಹಿದ್

ನವ ದೆಹಲಿ – ೧೯ ನೇ ಸಾರ್ಕ್ ಶೃಂಗಸಭೆಯನ್ನು ಪಾಕಿಸ್ತಾನದಲ್ಲಿ ನಡೆಸಲು ಪ್ರಸ್ತಾಪಿಸಲಾಗಿತ್ತು; ಆದರೆ ಈ ಪ್ರಸ್ತಾಪವನ್ನು ತಡೆಯುವಲ್ಲಿ ಮಾಲ್ಡೀವ್ಸ್ ಭಾರತದ ಪರವಾಗಿ ನಿಂತಿತು. ಇದಕ್ಕೂ ಮುನ್ನ ೨೦೧೬ ರಲ್ಲಿ ಸಾರ್ಕ್ ಶೃಂಗಸಭೆಯನ್ನು ಮುಂದೂಡಲಾಗಿತ್ತು. ಆ ವರ್ಷ ಪಾಕಿಸ್ತಾನದಲ್ಲಿ ಸಮ್ಮೇಳನದ ಆಯೋಜಕವಾಗಿತ್ತು; ಆದರೆ ಪಾಕಿಸ್ತಾನ ಪ್ರಾಯೋಜಿತ ಉಗ್ರರು ಭಾರತೀಯ ಸೈನ್ಯದ ಮೇಲೆ ‘ಉರಿ ದಾಳಿ’ ನಡೆಸಿದರು. ಇದರ ಫಲವಾಗಿ, ಆ ವರ್ಷ ಸಾರ್ಕ್‌ನ ಶೃಂಗಸಭೆಯನ್ನು ಭಾರತ ಬಹಿಷ್ಕರಿಸಿತ್ತು. ಸಾರ್ಕ್‌ನ ಇತರ ದೇಶಗಳು ಭಾರತವನ್ನು ಬೆಂಬಲಿಸುವ ಮೂಲಕ ಶೃಂಗಸಭೆಯಲ್ಲಿ ಭಾಗಿಯಾಗದಿರುವಂತೆ ನಿರ್ಧರಿಸಿದ್ದವು.

ಮಾಲ್ಡೀವ್ಸ್‌ನ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಇವರು ಮಾತನಾಡುತ್ತಾ, ಪ್ರಸ್ತುತ ಪರಿಸ್ಥಿತಿಯಲ್ಲಿ ನಾವು ಕೊರೋನಾದ ಸೋಂಕನ್ನು ಎದುರಿಸುತ್ತಿದ್ದೇವೆ. ಆದ್ದರಿಂದ ಸಾರ್ಕ್ ಶೃಂಗಸಭೆಯನ್ನು ಚರ್ಚಿಸಲು ಇದು ಸರಿಯಾದ ಸಮಯ ಎಂದು ನಮಗೆ ಅನಿಸುವುದಿಲ್ಲ ಎಂದು ಹೇಳಿದರು.