-
ಕ್ರೂರ ಮತ್ತು ಕಟ್ಟರ ಹಿಂದೂದ್ವೇಷಿ ಇಸ್ಲಾಮಿಕ್ ಆಕ್ರಮಣಕಾರರಿಂದ ಸಾವಿರಾರು ಹಿಂದೂ ದೇವಸ್ಥಾನಗಳನ್ನು ನೆಲಸಮ ಮಾಡಿ ಅಲ್ಲಿ ಮಸೀದಿಗಳನ್ನು ನಿರ್ಮಿಸಲಾಗಿದೆ ಎಂಬ ವಾಸ್ತವವಾಗಿದ್ದರೂ ಸ್ವಾತಂತ್ರ್ಯದ ೭೩ ವರ್ಷಗಳ ನಂತರ ಹಿಂದೂ ಭೂಮಿಯನ್ನು ಮರಳಿ ನೀಡಲು ಇಲ್ಲಿಯವರೆಗಿನ ಸರಕಾರಗಳು ಏನನ್ನೂ ಮಾಡಿಲ್ಲ, ಬದಲಾಗಿ ಅದು ಸಿಗದೇ ಇರಲಿ, ಅದಕ್ಕಾಗಿ ಕಾನೂನನ್ನು ನಿರ್ಮಿಸಿದ್ದಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
-
ಸರಕಾರವು ಈ ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ನಡೆಸಿ ಶ್ರೀಕೃಷ್ಣನ ಜನ್ಮಸ್ಥಳವನ್ನು ಹಿಂದೂಗಳಿಗೆ ಮರಳಿ ನೀಡಲು ಪ್ರಯತ್ನಿಸಬೇಕು ಎಂದು ಹಿಂದೂಗಳು ಒತ್ತಾಯಿಸುತ್ತಾರೆ !
-
ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳು ತಮ್ಮ ಹಕ್ಕಿಗಾಗಿ ಇಂತಹ ಅರ್ಜಿಯನ್ನು ಸಲ್ಲಿಸಬೇಕಾಗಿರುವುದು, ನಾಚಿಕೆಗೇಡಿನ ಸಂಗತಿ ! ಹಿಂದೂಗಳಿಗೆ ಗೌರವದಿಂದ ಬದುಕಲು ಹಿಂದೂ ರಾಷ್ಟ್ರ ಬೇಕು !
ಮಥುರಾ (ಉತ್ತರ ಪ್ರದೇಶ) – ಮಥುರಾದ ಶ್ರೀಕೃಷ್ಣ ಜನ್ಮಭೂಮಿಯ ೧೩.೩೭ ಎಕರೆ ಜಮೀನಿನ ಮಾಲೀಕತ್ವ ಮತ್ತು ಈ ಭೂಮಿಯಲ್ಲಿ ಶಾಹಿ ಇದ್ಗಾ ಮಸೀದಿಯ ಅತಿಕ್ರಮಣವನ್ನು ತೆರವುಗೊಳಿಸುವಂತೆ ಕೋರಿ ಅರ್ಜಿಯನ್ನು ಭಗವಾನ್ ಕೃಷ್ಣ ವಿರಾಜ್ ಮಾನ್, ಕಟರಾ ಕೇಶವ್ ದೇವ್ ಕೆವಾಟ್ ಮತ್ತು ರಂಜನಾ ಅಗ್ನಿಹೋತ್ರಿಯೊಂದಿಗೆ ಒಟ್ಟು ೬ ಜನರು ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ,
೧. ಉತ್ತರ ಪ್ರದೇಶದ ಸುನ್ನಿ ವಕ್ಫ್ ಮಂಡಳಿಯ ಸದಸ್ಯ, ಟ್ರಸ್ಟ್ ಮಸೀದಿ ಈದ್ಗಾ ಅಥವಾ ಮುಸ್ಲಿಂ ಸಮುದಾಯದ ಯಾವುದೇ ಸದಸ್ಯರಿಗೆ ಕಟರಾ ಕೇಶವ್ ದೇವ್ ಅವರ ಆಸ್ತಿಯಲ್ಲಿ ಯಾವುದೇ ಆಸಕ್ತಿ ಅಥವಾ ಹಕ್ಕಿಲ್ಲ.
೨. ಇತಿಹಾಸಕಾರ ಯದುನಾಥ್ ಸರಕಾರ ಅವರ ಅಧ್ಯಯನದ ಪ್ರಕಾರ, ೧೬೬೯-೭೦ ರಲ್ಲಿ ಔರಂಗಜೇಬನು ಕಟರಾ ಕೇಶವ್ ದೇವ್‌ನಲ್ಲಿ ಶ್ರೀಕೃಷ್ಣನು ಜನಿಸಿದ ಕೃಷ್ಣ ದೇವಸ್ಥಾನವನ್ನು ನೆಲಸಮಗೊಳಿಸಿ ಅಲ್ಲಿ ಕಟ್ಟಡವನ್ನು ನಿರ್ಮಿಸಿ ಅದಕ್ಕೆ ’ಈದ್ಗಾ ಮಸೀದಿ’ ಎಂದು ಹೆಸರಿಟ್ಟನು.
೩. ೧೦೦ ವರ್ಷಗಳ ನಂತರ, ಮರಾಠರು ಗೋವರ್ಧನ್ ಯುದ್ಧವನ್ನು ಗೆದ್ದು ಆಗ್ರಾ ಮತ್ತು ಮಥುರಾ ಪ್ರಾಂತ್ಯವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡರು. ಆಗ ಮರಾಠರು ಮಸೀದಿಯ ರಚನೆ ಎಂದು ಕರೆಯಲ್ಪಡುವ ಕಟ್ಟಡವನ್ನು ತೆರವುಗೊಳಿಸಿ ಕಟರಾ ಕೇಶವ್ ದೇವ್‌ನಲ್ಲಿ ಶ್ರೀಕೃಷ್ಣನ ಜನ್ಮಸ್ಥಳವನ್ನು ನವೀಕರಿಸಿದರು.
೪. ೧೮೦೩ ರಲ್ಲಿ ಬ್ರಿಟಿಷರು ಮಥುರಾವನ್ನು ವಶಪಡಿಸಿಕೊಂಡ ನಂತರ ಮಥುರೆಯ ಸ್ಥಳದಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ೧೮೧೫ ರಲ್ಲಿ ಬ್ರಿಟಿಷರು ೧೩.೩೭ ಎಕರೆ ಭೂಮಿಯನ್ನು ಹರಾಜು ಮಾಡಿ ವಾರಣಾಸಿಯ ರಾಜ ಪಟ್ನಿ ಮಾಲ್‌ಗೆ ಅದನ್ನು ಮಾರಿದರು. ಅವರು ಈ ಜಮೀನಿನ ಮಾಲೀಕರಾದರು.
೫. ೧೯೨೧ ರಲ್ಲಿ ಕೆಲವು ಮುಸ್ಲಿಮರು ಭೂಮಿಯ ಮಾಲೀಕತ್ವವನ್ನು ಕೋರಿ ಅರ್ಜಿ ಸಲ್ಲಿಸಿದ್ದರು ಆದರೆ ಅದನ್ನು ನ್ಯಾಯಾಲಯ ತಿರಸ್ಕರಿಸಿತು.
೬. ಫೆಬ್ರವರಿ ೧೯೪೪ ರಲ್ಲಿ ರಾಜ ಪಟ್ನಿ ಮಾಲ್ ಅವರ ಉತ್ತರಾಧಿಕಾರಿಗಳು ಈ ಭೂಮಿಯನ್ನು ಪಂಡಿತ್ ಮದನ್ ಮೋಹನ್ ಮಾಲವೀಯ, ಗೋಸ್ವಾಮಿ ಗಣೇಶ್ ದತ್ ಮತ್ತು ಭಿಕಾಣ ಲಾಲ್‌ಜಿ ಅತ್ರೆ ಅವರಿಗೆ ೧೯,೪೦೦ ರೂಗಳಿಗೆ ಮಾರಾಟ ಮಾಡಿದರು, ಇದನ್ನು ಜುಗಲ್ ಕಿಶೋರ್ ಬಿರ್ಲಾ ಪಾವತಿಸಿದರು.
೭. ಅಕ್ಟೋಬರ್ ೧೯೬೮ ರಲ್ಲಿ ಭೂಮಿ ಒಡೆತನದಲ್ಲಿ ಇರದಿದ್ದರೂ ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಘ ಮತ್ತು ಶಾಹಿ ಮಸೀದಿ ಈದ್ಗಾ ಸೊಸೈಟಿ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಒಪ್ಪಂದದಲ್ಲಿ ಟ್ರಸ್ಟ್ ಮಸೀದಿ ಈದ್ಗಾ ಅವರ ಕೆಲವು ಬೇಡಿಕೆಗಳನ್ನು ಅಂಗೀಕರಿಸಲಾಯಿತು.
೮. ಜುಲೈ ೧೯೭೩ ರಲ್ಲಿ ಮಥುರಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಈ ಒಪ್ಪಂದದ ಆಧಾರದ ಮೇಲೆ ಬಾಕಿ ಇರುವ ಪ್ರಕರಣವನ್ನು ನಿರ್ಧರಿಸಿದರು ಮತ್ತು ಅಸ್ತಿತ್ವದಲ್ಲಿರುವ ರಚನೆಯನ್ನು ಬದಲಾಯಿಸಲು ನಿರಾಕರಿಸಿದರು.
ಮಥುರಾ, ಕಾಶಿ ಮತ್ತು ಇತರ ದೇವಸ್ಥಾನಗಳ ನಿರ್ಧಾರಗಳು ‘ಪ್ಲೇಸಸ್ ಆಫ್ ವರಶಿಪ್ (ವಿಶೇಷ ನಿಬಂಧನೆಗಳು) ಕಾಯ್ದೆ ೧೯೯೧’ ಕಾರಣದಿಂದ ತಡೆಯಲ್ಪಟ್ಟಿವೆ !
ಇದು ೧೦೦ ಕೋಟಿ ಹಿಂದೂಗಳಿಗೆ ಅನ್ಯಾಯ ಮಾಡುವ ಕಾನೂನು ಅಲ್ಲವೇ ? ಇಂತಹ ಅನ್ಯಾಯದ ಕಾನೂನುಗಳನ್ನು ಮೋದಿ ಸರ್ಕಾರ ತಕ್ಷಣವೇ ರದ್ದುಪಡಿಸಬೇಕು ಹಾಗೂ ಕಾಶಿ ಮತ್ತು ಮಥುರಾ ಸೇರಿದಂತೆ ಇಸ್ಲಾಮಿಕ್ ಆಕ್ರಮಣಕಾರರು ವಶಪಡಿಸಿಕೊಂಡ ಹಿಂದೂಗಳ ಎಲ್ಲಾ ವಾಸ್ತುಗಳನ್ನು ಹಿಂದೂಗಳಿಗೆ ಹಿಂದಿರುಗಿಸುವ ಕಾನೂನನ್ನು ನಿರ್ಮಿಸಿ ಅದರಂತೆ ಕ್ರಮ ಕೈಗೊಳ್ಳಬೇಕೆಂದು ಹಿಂದೂಗಳ ಏಕಪಕ್ಷೀಯ ಬೇಡಿಕೆ ಇದೆ !
೧೯೯೧ ರಲ್ಲಿ ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಸರಕಾರವು ಅಂಗೀಕರಿಸಿದ ‘ಪ್ಲೇಸಸ್ ಆಫ್ ವರ್ಶಿಪ್ (ವಿಶೇಷ ನಿಬಂಧನೆಗಳು) ಕಾಯ್ದೆ ೧೯೯೧ ರ ಪ್ರಕಾರ, ಎಲ್ಲಾ ಪೂಜಾ ಸ್ಥಳಗಳ ವಿಷಯದಲ್ಲಿ ‘ಯಥಾಸ್ಥಿತಿಯನ್ನು’ ಪಾಲಿಸುವ ನಿಲುವನ್ನು ತೆಗೆದುಕೊಳ್ಳಲಾಯಿತು. ಆದ್ದರಿಂದ ಅಯೋಧ್ಯೆಯನ್ನು ಹೊರತುಪಡಿಸಿ ಎಲ್ಲಾ ಸ್ಥಳಗಳಲ್ಲಿ ೧೯೪೭ ರ ಆಗಸ್ಟ್ ೧೫ ರಂದು ‘ಹೇಗೆ ಇದೆ ಹಾಗೆ ಇರುವಂತೆ’ ಪರಿಸ್ಥಿತಿಯನ್ನು ಕಾಪಾಡಿಕೊಳ್ಳಲಾಗುವುದು, ಎಂದು ಕಾಯ್ದೆಯಲ್ಲಿ ನಮೂದಿಸಲಾಯಿತು. ಈ ಕಾನೂನಿನ ಪ್ರಕಾರ ಯಾವುದೇ ಪೂಜಾ ಸ್ಥಳವನ್ನು ಬೇರೆ ಧರ್ಮದ ಪೂಜಾ ಸ್ಥಳವಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಈ ಕಾನೂನಿನಿಂದಾಗಿ ಮಥುರಾ, ಕಾಶಿ ಇತ್ಯಾದಿಗಳ ನಿರ್ಧಾರಗಳು ಸಿಲುಕಿಕೊಂಡಿವೆ ಎಂದು ಹೇಳಲಾಗುತ್ತಿದೆ.