ಹಿಂಸಾಚಾರಿಗಳ ವಿರುದ್ಧ ಉಗ್ರಕ್ರಮ ಕೈಗೊಳ್ಳಿರಿ !

ಜನವರಿ ೨೬ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಆಂದೋಲನ ಮಾಡುವ ರೈತರು ಟ್ರ್ಯಾಕ್ಟರ್ ಮೋರ್ಚಾವನ್ನು ತೆಗೆದಿದ್ದರು; ಆದರೆ ಇದರಲ್ಲಿ ಬೃಹತ್ಪ್ರಮಾಣದಲ್ಲಿ ಅವರಿಂದ ಹಿಂಸಾಚಾರವಾಯಿತು. ಇದರಲ್ಲಿ ಇಬ್ಬರು ರೈತರು ಮೃತಪಟ್ಟರೆ, ೧೮ ಪೊಲೀಸರು ಗಾಯಗೊಂಡರು.

ಕೊರೋನಾ ಮೇಲೆ ಹಿಡಿತ ಸಾಧಿಸುವಲ್ಲಿ ಭಾರತ ಗಣನೀಯ ಯಶಸ್ಸನ್ನು ಕಂಡಿದೆ ! – ವಿಶ್ವ ಆರೋಗ್ಯ ಸಂಸ್ಥೆಯಿಂದ ಶ್ಲಾಘನೆ

ಕೊರೋನಾ ಮೇಲೆ ಹಿಡಿತ ಸಾಧಿಸುವಲ್ಲಿ ಭಾರತ ಗಣನೀಯವಾಗಿ ಯಶಸ್ಸನ್ನು ಸಾಧಿಸಿದೆ. ಸರಳ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ನಾವು ತೆಗೆದುಕೊಂಡರೆ, ನಾವು ಕರೋನಾವನ್ನು ನಿವಾರಿಸಬಹುದು ಎಂದು ಇದರಿಂದ ನಮಗೆ ತಿಳಿದುಬರುತ್ತದೆ.

ಉತ್ತರ ಪ್ರದೇಶದ ಮದರಸಾಗಳಿಗೆ ಸಿಗುವ ಸರ್ಕಾರದ ನಿಧಿಯಲ್ಲಾದ ಹಗರಣಗಳ ಬಗ್ಗೆ ತನಿಖೆ ನಡೆಸಲಾಗುವುದು!

ಉತ್ತರಪ್ರದೇಶದಲ್ಲಿ ಮದರಸಾಗಳ ಹೆಸರಿನಲ್ಲಿ ಸರ್ಕಾರದ ಹಣವನ್ನು ಕೊಳ್ಳೆಹೊಡೆಯಲಾಗುತ್ತಿದೆ. ಕೆಲವು ಸ್ಥಳಗಳಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಹಗರಣ ನಡೆದರೆ, ಕೆಲವು ಸ್ಥಳಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹಗರಣ ಕಂಡುಬಂದಿದೆ.

ಪಾಕಿಸ್ತಾನವು ೨೦೨೧ ನ್ನು ‘ಗೋವು ವರ್ಷ’ ಎಂದು ಆಚರಿಸಲಿದೆ !

ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ೨೦೨೧ ರ ವರ್ಷವನ್ನು ‘ಗೋವು ವರ್ಷ’ ಎಂದು ಆಚರಿಸಲು ನಿರ್ಧರಿಸಿದ್ದಾರೆ. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಗೆ ರಫ್ತು ಮಾಡಲು ಮತ್ತು ಗೋವಿನ ಮೇಲೆ ಗಮನ ಕೇಂದ್ರೀಕರಿಸಲು ಸರ್ಕಾರ ನಿರ್ಧರಿಸಿದೆ.

ಭಾರತದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ೬೪೧ ಜನರನ್ನು ರಕ್ಷಿಸುತ್ತಾನೆ!

ಭಾರತದಲ್ಲಿ ಪ್ರತಿ ೧ ಲಕ್ಷ ಜನಸಂಖ್ಯೆಗೆ ಕೇವಲ ೧೫೬ ಪೊಲೀಸರು ಇದ್ದಾರೆ. ಅಂದರೆ `ಇಂಡಿಯಾ ಜಸ್ಟಿಸ್‌ ರಿಪೋರ್ಟ್ ೨೦೨೦’ ರ ಪ್ರಕಾರ ದೇಶದ ಒಬ್ಬ ಪೊಲೀಸ್ ಅಧಿಕಾರಿಯು ೬೪೧ ಜನರನ್ನು ರಕ್ಷಿಸುತ್ತಿದ್ದಾನೆ. ಈ ವರದಿಯನ್ನು ಟಾಟಾ ಟ್ರಸ್ಟ್ ಸಾರ್ವಜನಿಕವಾಗಿ ಪ್ರಕಟಿಸಿದೆ. ಬಿಹಾರದಂತಹ ರಾಜ್ಯದಲ್ಲಿ ೭೬ ಪೊಲೀಸರು ೧ ಲಕ್ಷ ಜನರನ್ನು ರಕ್ಷಿಸುತ್ತಿದ್ದಾರೆ.

ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಇಬ್ಬರು ಇರಾನಿನ ಸೈನಿಕರನ್ನು ಬಿಡುಗಡೆ ಮಾಡಿದ ಇರಾನ್

ಭಾರತದ ನಂತರ, ಈಗ ಇರಾನ್ ಕೂಡ ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್‌ ನಡೆಸಿ ತನ್ನ ಇಬ್ಬರು ಸೈನಿಕರನ್ನು ಬಿಡುಗಡೆ ಮಾಡಿದೆ. ಇರಾನ್‌ನ `ರೆವಲ್ಯೂಶನರಿ ಗಾರ್ಡ್ಸ’ಗಳು ಜೈಶ್-ಎ-ಅದಲ್ ಜಿಹಾದಿ ಗುಂಪಿನ ಅಡಗುತಾಣಗಳ ಮೇಲೆ ದಾಳಿ ನಡೆಸಿ ತನ್ನ ಸೈನಿಕರನ್ನು ಬಿಡುಗಡೆ ಮಾಡಿದೆ.

ತಂಬಾಕು ಮಾತ್ರವಲ್ಲ, ಮೈದಾ, ಪಾಪ್‌ಕಾರ್ನ್, ಆಲೂಗೆಡ್ಡೆ ಚಿಪ್ಸ್, ಸಂಸ್ಕರಿಸಿದ ಮಾಂಸ ಇತ್ಯಾದಿಗಳಿಂದ ಕ್ಯಾನ್ಸರ್ ಬರುತ್ತದೆ

ವಿಶ್ವದಲ್ಲೇ ಸಾವಿಗೆ ಕ್ಯಾನ್ಸರ್ ಎರಡನೇ ಪ್ರಮುಖ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ೨೦೧೮ ರಲ್ಲಿ ೯೬ ಲಕ್ಷ ಜನರು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ. ಕ್ಯಾನ್ಸರ್ ಆಗಲು ದೈನಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಪ್ರಭಾವವಿರುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಜಲಂಧರ್ (ಪಂಜಾಬ್) ನಲ್ಲಿ ಅಜ್ಞಾತರಿಂದ ಗುಂಡಿನ ದಾಳಿ, ಅಪ್ರಾಪ್ತೆ ಮತ್ತು ಅರ್ಚಕರು ಗಾಯಾಳು

ಇಲ್ಲಿನ ಫಲ್ಲೌರ್ ಗ್ರಾಮದ ದೇವಾಲಯದ ಅರ್ಚಕ ಸಂತ ಜ್ಞಾನ ಮೇಲೆ ಅಜ್ಞಾತರೊಬ್ಬರು ಗುಂಡು ಹಾರಿಸಿದ್ದಾರೆ. ಅದರಲ್ಲಿ ಅರ್ಚಕ ಸಂತ ಜ್ಞಾನ ಇವರಿಗೆ ಮೂರು ಗುಂಡುಗಳು ತಗುಲಿದ್ದು, ಅಪ್ರಾಪ್ತ ಬಾಲಕಿಯೂ ಗಾಯಗೊಂಡಿದ್ದಾಳೆ.

ವಿಶ್ವದ ಯಾವುದೇ ದೇಶದ ಸರ್ಕಾರ ರೈತರ ಆಂದೋಲನವನ್ನು ಬೆಂಬಲಿಸಿಲ್ಲ! – ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ಸ್ಪಷ್ಟನೆ

ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಇವರು ರೈತರ ಚಳವಳಿಯ ಬಗ್ಗೆ ಭಾರತದ ಮಿತ್ರರಾಷ್ಟ್ರವಾಗಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಹೇಳಿಕೆ ನೀಡಿದ್ದರು.