ಕೊರೋನಾ ಮೇಲೆ ಹಿಡಿತ ಸಾಧಿಸುವಲ್ಲಿ ಭಾರತ ಗಣನೀಯ ಯಶಸ್ಸನ್ನು ಕಂಡಿದೆ ! – ವಿಶ್ವ ಆರೋಗ್ಯ ಸಂಸ್ಥೆಯಿಂದ ಶ್ಲಾಘನೆ

ಡಾ. ಟೆಡ್ರೊಸ್ ಘೆಬ್ರೈಸಸ್

ವಾಷಿಂಗ್ಟನ್ ಡಿ.ಸಿ./ ನವ ದೆಹಲಿ – ಕೊರೋನಾ ಮೇಲೆ ಹಿಡಿತ ಸಾಧಿಸುವಲ್ಲಿ ಭಾರತ ಗಣನೀಯವಾಗಿ ಯಶಸ್ಸನ್ನು ಸಾಧಿಸಿದೆ. ಸರಳ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ನಾವು ತೆಗೆದುಕೊಂಡರೆ, ನಾವು ಕರೋನಾವನ್ನು ನಿವಾರಿಸಬಹುದು ಎಂದು ಇದರಿಂದ ನಮಗೆ ತಿಳಿದುಬರುತ್ತದೆ. ಲಸಿಕೆ ನೀಡಿದ ನಂತರ ನಾವು ಇನ್ನೂ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು ಎಂದು ಡಾ. ಟೆಡ್ರೊಸ್ ಘೆಬ್ರೈಸಸ್ ಹೇಳಿದರು. ಕೊರೋನಾ ಪೀಡಿತರು ಭಾರತದಲ್ಲಿ ಕಂಡುಬಂದರೂ, ಚಿಕಿತ್ಸೆಗೆ ಒಳಗಾಗುವ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಈ ಅಂಕಿ ಅಂಶವು ಈಗ ಶೇಕಡಾ ೧.೪೦ ಕ್ಕೆ ಇಳಿದಿದೆ. ಈ ಸೋಂಕಿನಿಂದ ೧ ಕೋಟಿ ೪ ಲಕ್ಷ ೯೬ ಸಾವಿರ ಜನರು ಗುಣಮುಖರಾಗಿದ್ದಾರೆ ಮತ್ತು ಗುಣಮುಖರಾಗುವ ಪ್ರಮಾಣವು ಶೇಕಡಾ ೯೭.೧೬ ಆಗಿದೆ. ಕೊರೋನಾದಿಂದ ಸಾವಿಗೀಡಾದರು ಸಂಖ್ಯೆ ಇನ್ನಷ್ಟು ಇಳಿದಿದ್ದು, ಈಗ ಶೇ. ೧.೪೩ ರಷ್ಟಿದೆ.