ಪಾಕಿಸ್ತಾನವು ೨೦೨೧ ನ್ನು ‘ಗೋವು ವರ್ಷ’ ಎಂದು ಆಚರಿಸಲಿದೆ !

 ಕೇವಲ ‘ಗೋವು ವರ್ಷ’ ಆಚರಿಸುವ ಬದಲು, ಗೋವಧೆಯಾಗದಂತೆ ಪಾಕಿಸ್ತಾನ ಪ್ರಯತ್ನಿಸಿದರೆ ಅದನ್ನು ನಂಬಬಹುದು

ಇಸ್ಲಾಮಾಬಾದ್ (ಪಾಕಿಸ್ತಾನ) – ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ೨೦೨೧ ರ ವರ್ಷವನ್ನು ‘ಗೋವು ವರ್ಷ’ ಎಂದು ಆಚರಿಸಲು ನಿರ್ಧರಿಸಿದ್ದಾರೆ. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಗೆ ರಫ್ತು ಮಾಡಲು ಮತ್ತು ಗೋವಿನ ಮೇಲೆ ಗಮನ ಕೇಂದ್ರೀಕರಿಸಲು ಸರ್ಕಾರ ನಿರ್ಧರಿಸಿದೆ. ಇಂಧನ ಸಮಸ್ಯೆಯನ್ನು ಪರಿಹರಿಸಲು ಗೋವಿನ ಸೆಗಣಿಯ ಬಗ್ಗೆ ಸಂಶೋಧನೆಯನ್ನು ಕೂಡ ಮಾಡಲಾಗುವುದು.

. ಭಾರತವು ಸೆಗಣಿಯಿಂದ ಶಕ್ತಿಯನ್ನು ಉತ್ಪಾದಿಸಬಹುದಾದರೆ, ನಾವು ಹಿಂದೆ ಉಳಿಯುವುದಿಲ್ಲ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಗೋವಿನ ಹಾಲನ್ನು ನಾಲ್ಕು ಪಟ್ಟು ಹೆಚ್ಚಿಸುವ ತಂತ್ರಜ್ಞಾನವನ್ನು ಪಾಕಿಸ್ತಾನಕ್ಕೆ ನೀಡಲು ಚೀನಾ ಮತ್ತು ಹೋಲ್ಯಾಂಡ್ ಒಪ್ಪಿವೆ. ಇದಕ್ಕಾಗಿ ರೈತರಿಗೆ ತರಬೇತಿ ನೀಡಲು ಮತ್ತು ಗೋವು ಖರೀದಿಸಲು ಸಾಲ ನೀಡುವ ಯೋಜನೆ ಸಿದ್ಧಪಡಿಸಲಾಗಿದೆ. ನಂತರ ಅವರು ಊರ್ಜೆಯ ಬಗ್ಗೆ ಚೀನಾದ ಸಹಾಯವನ್ನು ಕೋರಿದ್ದರು. ಚೀನಾದಲ್ಲಿ ಸೆಗಣಿ ಬಗ್ಗೆ ಯಾವುದೇ ಸಂಶೋಧನೆ ನಡೆದಿಲ್ಲ ಎಂದು ಗಮನಕ್ಕೆ ಬಂದಿದೆ. ಪಾಕಿಸ್ತಾನದಲ್ಲಿ, ‘ಬಾಸ್ ಇಂಡಿಕಸ್’ ಎಂಬ ತಳಿಯ ಗೋವು ೪ ಪಟ್ಟು ಹೆಚ್ಚು ಹಾಲು ನೀಡಬಹುದು. (ಬಾಸ್ ಇಂಡಿಕಸ್ ಗೋವು ಎಂದರೆ ಭಾರತೀಯ ಮೂಲದ ಗೋವು) ಇದನ್ನು ಹೆಚ್ಚು ಹೆಚ್ಚು ಬಳಸಲಾಗುತ್ತಿದೆ.

೨. ಪಾಕಿಸ್ತಾನದ ಹವಾಮಾನ ಬದಲಾವಣೆಯ ಸಚಿವೆ ಜರ್ತಾಜ್ ಗುಲ್ ಅವರ ಪ್ರಕಾರ, ಕರಾಚಿಯಲ್ಲಿ ಸ್ಥಳೀಯ ಬಸ್ ಸೇವೆ ಕಳೆದ ಕೆಲವು ವರ್ಷಗಳಿಂದ ಗೋವಿನ ಸೆಗಣಿಯಿಂದ ಉತ್ಪನ್ನವಾಗುವ ಗ್ಯಾಸ್‌ನಿಂದ ನಡೆಯುತ್ತಿದೆ. ಈಗ ಅದನ್ನು ಹೆಚ್ಚಿಸಲಾಗುವುದು. ಇದು ಪಾಕಿಸ್ತಾನದಲ್ಲಿ ರಾಷ್ಟ್ರವ್ಯಾಪಿಯಾಗಿ ನಡೆಯುವ ಕಾರ್ಯಕ್ರಮವಾಗಬೇಕು, ಆದರೆ ಅದಕ್ಕೆ ಬೇಕಾಗುವಷ್ಟು ನಿಯೋಜನೆ ಮತ್ತು ತಂತ್ರಜ್ಞಾನ ದೇಶದ ಬಳಿಯಿಲ್ಲ; ಆದರೆ ಪರಿಸರ ಹಾನಿಯನ್ನು ತಡೆಗಟ್ಟುವಲ್ಲಿ ಗೋವಿನ ಸಗಣಿ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದಿದ್ದಾರೆ.

. ಭಾರತದ ದೃಷ್ಟಿಕೋನದಿಂದ, ಪಾಕಿಸ್ತಾನದಲ್ಲಿ ಗೋವುಗಳ ವೈಶಿಷ್ಟ್ಯವೆಂದರೆ ಭಾರತದ ಪ್ರಮುಖ ಗೋತಳಿಗಳು ಪಾಕಿಸ್ತಾನದಲ್ಲಿವೆ. ಸಾಹಿವಾಲ್, ಕಾಂಕ್ರೇಜ್, ಗಿರ್, ಥಾರ್ಪಾರ್ಕರ್, ಹರಿಯಾನ್ವಿ ಇತ್ಯಾದಿ ಗೋವುಗಳು ಸಿಂಧೂ ಕಣಿವೆಯಲ್ಲಿವೆ; ಆದರೆ ಭಗ್ನೂರ ಎಂಬ ಅತಿ ಎತ್ತರದ ಗೋವು ಬಲೂಚಿಸ್ತಾನದಲ್ಲಿದೆ.

ಪಾಕಿಸ್ತಾನದಲ್ಲಿ ಗೋಹತ್ಯೆ ಕಡಿಮೆಯಾಗುವ ಸಾಧ್ಯತೆಯೂ ಕಡಿಮೆಯೇ!

ಭಾರತದಲ್ಲಿ ಗೋವು ವಿಜ್ಞಾನಕ್ಕೆ ವೇಗ ಬಂದ ದಿನದಿಂದ ಭಾರತೀಯ ಉಪಖಂಡದಲ್ಲಿ ಮತ್ತು ಚೀನಾದಲ್ಲಿಯೂ ಗೋವುಗಳ ಮಹತ್ವ ಹೆಚ್ಚುತ್ತಿದೆ. ಕೆಲವು ತಿಂಗಳ ಹಿಂದೆ ಶ್ರೀಲಂಕಾ ಗೋಹತ್ಯೆಯನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತಂದಿತು. ನಂತರ ಆಗ್ನೇಯ ಏಷ್ಯಾದಲ್ಲಿ ಈ ವಿಷಯವು ವೇಗವನ್ನು ಪಡೆಯಿತು. ಚೀನಾದ ಬಡ ರಾಜ್ಯವಾದ ಗನ್ಸು ಪ್ರಾಂತ್ಯದಲ್ಲಿ ೫ ಕೋಟಿ ಗೋವುಗಳನ್ನು ರೈತರಿಗೆ ವಿತರಿಸಲಾಗಿದೆ. ಅಧ್ಯಯನಕಾರರ ಪ್ರಕಾರ, ಪ್ರಸ್ತುತ ಪಾಕಿಸ್ತಾನದಲ್ಲಿ ಗೋವುಗಳ ವಿಷಯವು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ ಅಂದರೆ ಅಲ್ಲಿ ಗೋಹತ್ಯೆ ಕಡಿಮೆಯಾಗಿದೆ ಎಂದು ಈಗಾಗಲೇ ಹೇಳಲಾಗದು.