ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಇಬ್ಬರು ಇರಾನಿನ ಸೈನಿಕರನ್ನು ಬಿಡುಗಡೆ ಮಾಡಿದ ಇರಾನ್

ಭಾರತ -ಪಾಕ್ ಯುದ್ಧದ ಅನೇಕ ಸೈನಿಕರು ಪಾಕಿಸ್ತಾನದ ಜೈಲುಗಳಲ್ಲಿ ನರಳುತ್ತಿದ್ದಾರೆ ಮತ್ತು ಭಾರತದ ಮಾಜಿ ಸೇನಾಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನದ ಜೈಲುಗಳಲ್ಲಿ ಇರಿಸಲಾಗಿದೆ. ಭಾರತವು ಈಗ ಚರ್ಚಿಸುವ ಸಮಯವನ್ನು ವ್ಯರ್ಥ ಮಾಡುವುದಕ್ಕಿಂತ ಅಂತಹ ಸರ್ಜಿಕಲ್ ಸ್ಟ್ರೈಕ್‌ ಮಾಡುವುದು ಉತ್ತಮ!

ಟೆಹ್ರಾನ್ (ಇರಾನ್) – ಭಾರತದ ನಂತರ, ಈಗ ಇರಾನ್ ಕೂಡ ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್‌ ನಡೆಸಿ ತನ್ನ ಇಬ್ಬರು ಸೈನಿಕರನ್ನು ಬಿಡುಗಡೆ ಮಾಡಿದೆ. ಇರಾನ್‌ನ `ರೆವಲ್ಯೂಶನರಿ ಗಾರ್ಡ್ಸ’ಗಳು ಜೈಶ್-ಎ-ಅದಲ್ ಜಿಹಾದಿ ಗುಂಪಿನ ಅಡಗುತಾಣಗಳ ಮೇಲೆ ದಾಳಿ ನಡೆಸಿ ತನ್ನ ಸೈನಿಕರನ್ನು ಬಿಡುಗಡೆ ಮಾಡಿದೆ. ಯಾವುದೇ ಇರಾನಿನ ಸೈನಿಕರಿಗೆ ತೊಂದರೆಯಾಗಿಲ್ಲ. ಕಳೆದ ಎರಡೂವರೆ ವರ್ಷಗಳಿಂದ ಈ ಸೈನಿಕರು ಈ ಭಯೋತ್ಪಾದಕ ಸಂಘಟನೆಯ ವಶದಲ್ಲಿದ್ದರು.

೧. ಜೈಶ್-ಉಲ್-ಅದಲ್ ಇದು ನೈಋತ್ಯ ಪಾಕಿಸ್ತಾನದ ಇರಾನಿನ ಗಡಿಯಲ್ಲಿ ಸಕ್ರಿಯವಾಗಿರುವ ಕಟ್ಟರ್ ವಹಾಬಿ ಉಗ್ರಗಾಮಿ ಗುಂಪು. ಈ ಉಗ್ರಗಾಮಿ ಗುಂಪು ಇರಾನಿನ ಸೈನ್ಯದ ಮೇಲೆ ೨೦೧೯ ರ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಅದರಲ್ಲಿ ಕೆಲವು ಸೈನಿಕರು ಕೊಲ್ಲಲ್ಪಟ್ಟಿದ್ದರು.

೨. ಅಕ್ಟೋಬರ್ ೧೬, ೨೦೧೮ ರಂದು ಜೈಶ್-ಉಲ್-ಅದಲ್ ೧೨ ಇರಾನಿನ ಸೈನಿಕರನ್ನು ಅಪಹರಿಸಿದೆ. ಬಲೂಚಿಸ್ತಾನ್ ಪ್ರಾಂತ್ಯದ ಮಾರ್ಕವಾ ನಗರದಲ್ಲಿ ಈ ಘಟನೆ ನಡೆದಿದೆ. ಈ ಭಾಗ ಪಾಕಿಸ್ತಾನ-ಇರಾನ್ ಗಡಿಯ ಸಮೀಪದಲ್ಲಿದೆ. ಸೈನಿಕರನ್ನು ರಕ್ಷಿಸಲು ಇರಾನ್ ಮತ್ತು ಪಾಕಿಸ್ತಾನದ ಜಂಟಿ ಸಮಿತಿಯನ್ನೂ ರಚಿಸಲಾಗಿತ್ತು. ಈ ಗುಂಪು ೨೦೧೮ ರ ನವೆಂಬರ್‌ನಲ್ಲಿ ಐದು ಸೈನಿಕರನ್ನು ಬಿಡುಗಡೆ ಮಾಡಿದ್ದರೆ, ಮಾರ್ಚ್ ೨೧, ೨೦೧೯ ರಂದು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಯಲ್ಲಿ ನಾಲ್ಕು ಸೈನಿಕರನ್ನು ಬಿಡುಗಡೆ ಮಾಡಿದೆ.