ಜಲಂಧರ್ (ಪಂಜಾಬ್) ನಲ್ಲಿ ಅಜ್ಞಾತರಿಂದ ಗುಂಡಿನ ದಾಳಿ, ಅಪ್ರಾಪ್ತೆ ಮತ್ತು ಅರ್ಚಕರು ಗಾಯಾಳು

ಕಾಂಗ್ರೆಸ್ ರಾಜ್ಯದಲ್ಲಿ ಹಿಂದೂ ದೇವಾಲಯಗಳ ಅರ್ಚಕರು ಅಸುರಕ್ಷಿತರು !

ಜಲಂಧರ್ (ಪಂಜಾಬ್) – ಇಲ್ಲಿನ ಫಲ್ಲೌರ್ ಗ್ರಾಮದ ದೇವಾಲಯದ ಅರ್ಚಕ ಸಂತ ಜ್ಞಾನ ಮೇಲೆ ಅಜ್ಞಾತರೊಬ್ಬರು ಗುಂಡು ಹಾರಿಸಿದ್ದಾರೆ. ಅದರಲ್ಲಿ ಅರ್ಚಕ ಸಂತ ಜ್ಞಾನ ಇವರಿಗೆ ಮೂರು ಗುಂಡುಗಳು ತಗುಲಿದ್ದು, ಅಪ್ರಾಪ್ತ ಬಾಲಕಿಯೂ ಗಾಯಗೊಂಡಿದ್ದಾಳೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ, ಈ ದೇವಾಲಯವನ್ನು ಕೆಲವು ವರ್ಷಗಳ ಹಿಂದೆ ಅರ್ಚಕ ಸಂತ ಜ್ಞಾನರು ನಿರ್ಮಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ದೇವಾಲಯವನ್ನು ಕೆಲವರು ವಿರೋಧಿಸುತ್ತಿದ್ದಾರೆ.