ನವ ದೆಹಲಿ: ಕೇಂದ್ರ ಕೃಷಿ ಕಾಯ್ದೆಯ ವಿರುದ್ಧ ರೈತರ ಆಂದೋಲನವನ್ನು ವಿಶ್ವದ ಯಾವುದೇ ಸರ್ಕಾರ ಬೆಂಬಲಿಸಿಲ್ಲ ಎಂದು ಕೇಂದ್ರವು ಲೋಕಸಭೆಯಲ್ಲಿ ತಿಳಿಸಿದೆ.
No foreign govt has supported farmers' protest: MEA in Lok Sabha https://t.co/4RqhfI0yKL
— Hindustan Times (@HindustanTimes) February 3, 2021
೧. ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಇವರು ರೈತರ ಚಳವಳಿಯ ಬಗ್ಗೆ ಭಾರತದ ಮಿತ್ರರಾಷ್ಟ್ರವಾಗಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಹೇಳಿಕೆ ನೀಡಿದ್ದರು. ಆದರೆ ಅದರ ನಂತರ, ಭಾರತವು ‘ಭಾರತದ ಆಂತರಿಕ ವಿಷಯದಲ್ಲಿ ಇಂತಹ ಹೇಳಿಕೆ ನೀಡುವುದು ಅಯೋಗ್ಯ ಮತ್ತು ಸ್ವೀಕಾರಾರ್ಹವಲ್ಲ” ಎಂದು ಹೇಳಿತ್ತು. ಭಾರತ ಒದಗಿಸಿದ ಮಾಹಿತಿಯ ನಂತರ, ಕೆನಡಾ ಸರ್ಕಾರವು ಭಾರತ ಸರ್ಕಾರವು ರೈತರೊಂದಿಗೆ ಚರ್ಚೆ ನಡೆಸಲು ಕೈಗೊಂಡ ಮುಂದಾಳತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಕೆನಡಾ, ಬ್ರಿಟನ್, ಅಮೇರಿಕಾ ಮತ್ತು ಕೆಲವು ಯುರೋಪಿಯನ್ ದೇಶಗಳಲ್ಲಿ, ಭಾರತೀಯ ಕೃಷಿ ಕಾನೂನುಗಳನ್ನು ಭಾರತೀಯ ಮೂಲದ ಕೆಲವು ಪಟ್ಟ ಭದ್ರ ಜನರು ವಿರೋಧಿಸಿದ್ದಾರೆ.
೨. ರೈತರ ಚಳವಳಿಯನ್ನು ಉಲ್ಲೇಖಿಸಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ೨೦೨೦ ರ ಡಿಸೆಂಬರ್ ಆರಂಭದಲ್ಲಿ ‘ನಾವು ಯಾವುದೇ ಶಾಂತಿಯುತ ಚಳವಳಿಯನ್ನು ಬೆಂಬಲಿಸುತ್ತೇವೆ, ಭಾರತದ ಪರಿಸ್ಥಿತಿ ಚಿಂತಾಜನಕವೆನಿಸುತ್ತದೆ’ ಎಂದು ಹೇಳಿದ್ದರು.