ಮದರಸಾಗಳಿಗೆ ನೀಡಲಾಗುವ ಸರ್ಕಾರದ ಹಣವನ್ನು ಏಕೆ ನಿಲ್ಲಿಸಲಾಗುತ್ತಿಲ್ಲ?
ಲಕ್ಷ್ಮಣಪುರಿ (ಉತ್ತರ ಪ್ರದೇಶ)– ಉತ್ತರಪ್ರದೇಶದಲ್ಲಿ ಮದರಸಾಗಳ ಹೆಸರಿನಲ್ಲಿ ಸರ್ಕಾರದ ಹಣವನ್ನು ಕೊಳ್ಳೆಹೊಡೆಯಲಾಗುತ್ತಿದೆ. ಕೆಲವು ಸ್ಥಳಗಳಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಹಗರಣ ನಡೆದರೆ, ಕೆಲವು ಸ್ಥಳಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹಗರಣ ಕಂಡುಬಂದಿದೆ. ಮಾಹಿತಿ ಹಕ್ಕು ಕಾನೂನಿನಡಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಈಗ ಅದರ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡಕ್ಕೆ ಆದೇಶಿಸಿದೆ. ರಾಜ್ಯದ ಮಿರ್ಜಾಪುರ ಮತ್ತು ಅಜಮಗಡ್ ಜಿಲ್ಲೆಗಳಲ್ಲಿ ೪೦೦ ಮದರಸಾಗಳಲ್ಲಿ ಈ ಹಗರಣವಾಗಿರುವುದಾಗಿ ಶಂಕಿಸಲಾಗಿದೆ.
ಈ ಮದರಸಾಗಳನ್ನು ಸ್ಥಳದಲ್ಲೇ ಪರಿಶೀಲಿಸಲಾಗುವುದು. ಆದ್ದರಿಂದ ಕಾಗದದ ಮೇಲಿನ ಪರಿಸ್ಥಿತಿ ಮತ್ತು ನಿಜವಾದ ಪರಿಸ್ಥಿತಿಯ ನಡುವಿನ ವ್ಯತ್ಯಾಸವನ್ನು ಗಮನಿಸಬಹುದು. ಶಿಕ್ಷಕರ ಮತ್ತು ವಿದ್ಯಾರ್ಥಿಗಳ ‘ಪೊಲೀಸ್ ದಾಖಲೆಗಳು’ ಹಾಗೂ ಶಿಕ್ಷಕರ ದಾಖಲೆಗಳನ್ನು ಪರಿಶೀಲಿಸಲಾಗುವುದು. (ನಿಯಮಗಳ ಪ್ರಕಾರ ಹಾಗೆ ಮಾಡುವುದು ಕಡ್ಡಾಯವಾಗಿದ್ದರೂ, ಆಡಳಿತವು ಈ ಮದರಸಾಗಳಿಗೆ ಸರ್ಕಾರದ ಹಣವನ್ನು ಬಿತ್ತರಿಸಲು ಅನುಮತಿಯನ್ನು ಹೇಗೆ ನೀಡಿತು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು! – ಸಂಪಾದಕರು)