೧ ಲಕ್ಷ ಜನಸಂಖ್ಯೆಗೆ ಕೇವಲ ೧೫೬ ಪೊಲೀಸರು!
ದೇಶದ ಜನರ ಸುರಕ್ಷತೆಯ ವಿಷಯದಲ್ಲಿ ನೋಡಿದರೆ ನಾಯಕರೇ ಹೆಚ್ಚು ಸುರಕ್ಷಿತರಾಗಿದ್ದಾರೆ ಎಂಬುವುದು ಜನರಿಗೆ ಕಾಣಿಸುತ್ತದೆ! ಪ್ರಜಾಪ್ರಭುತ್ವದಲ್ಲಿ ಜನರ ಭದ್ರತೆಯು ಅಪಾಯದಲ್ಲಿದೆ ಎಂಬುದು ನಾಚಿಕೆಗೇಡಿನ ಸಂಗತಿ!
ನವದೆಹಲಿ: ಭಾರತದಲ್ಲಿ ಪ್ರತಿ ೧ ಲಕ್ಷ ಜನಸಂಖ್ಯೆಗೆ ಕೇವಲ ೧೫೬ ಪೊಲೀಸರು ಇದ್ದಾರೆ. ಅಂದರೆ `ಇಂಡಿಯಾ ಜಸ್ಟಿಸ್ ರಿಪೋರ್ಟ್ ೨೦೨೦’ ರ ಪ್ರಕಾರ ದೇಶದ ಒಬ್ಬ ಪೊಲೀಸ್ ಅಧಿಕಾರಿಯು ೬೪೧ ಜನರನ್ನು ರಕ್ಷಿಸುತ್ತಿದ್ದಾನೆ. ಈ ವರದಿಯನ್ನು ಟಾಟಾ ಟ್ರಸ್ಟ್ ಸಾರ್ವಜನಿಕವಾಗಿ ಪ್ರಕಟಿಸಿದೆ. ಬಿಹಾರದಂತಹ ರಾಜ್ಯದಲ್ಲಿ ೭೬ ಪೊಲೀಸರು ೧ ಲಕ್ಷ ಜನರನ್ನು ರಕ್ಷಿಸುತ್ತಿದ್ದಾರೆ.
दुनिया के दूसरी सबसे ज्यादा जनसंख्या वाले देश भारत में हर 100000 की आबादी पर औसतन 156 पुलिसकर्मी हैं @itsmepanna https://t.co/c6CkGqssl0
— AajTak (@aajtak) February 4, 2021
೧. ವರದಿಯ ಪ್ರಕಾರ, ರಾಷ್ಟ್ರಮಟ್ಟದಲ್ಲಿ ಜನವರಿ ೨೦೨೦ ರ ಹೊತ್ತಿಗೆ, ೩ ಪೊಲೀಸ್ ಅಧಿಕಾರಿಗಳಲ್ಲಿ ೧ ಹುದ್ದೆ ಖಾಲಿ ಇದೆ. ಮಧ್ಯಪ್ರದೇಶ ಮತ್ತು ಬಿಹಾರದಲ್ಲಿ ೨ ಹುದ್ದೆಗಳಲ್ಲಿ ೧ ಹುದ್ದೆಗಳು ಖಾಲಿ ಇವೆ. ಕಾನ್ಸಟೇಬಲ್ ಹುದ್ದೆಗಳಲ್ಲಿ ೫ ರಲ್ಲಿ ೧ ಹುದ್ದೆಗಳು ಖಾಲಿ ಇವೆ. ತೆಲಂಗಾಣ ಮತ್ತು ಬಂಗಾಳದಲ್ಲಿ ಶೇ. ೪೦ ರಷ್ಟು ಪೊಲೀಸ್ ನೇಮಕಾತಿ ಮಾಡಿಲ್ಲ.
೨. ಕಳೆದ ವರ್ಷ ಪಂಜಾಬ್ ಮತ್ತು ಮಹಾರಾಷ್ಟ್ರ ಪೊಲೀಸ್ ರ್ಯಾಂಕಿಂಗ್‌ನಲ್ಲಿ (ranking) ಹಿಂದುಳಿದಿದ್ದರೆ, ಛತ್ತೀಸಗಡ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಪೊಲೀಸರ ರ್ಯಾಂಕಿಂಗ್ (ranking) ಏರಿದೆ. ೨೦೧೯ ರಲ್ಲಿ ಪಂಜಾಬ್ ಪೊಲೀಸರು ದೇಶದಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ೨೦೨೦’ ರಲ್ಲಿ ಅದು ೧೨ ನೇ ಸ್ಥಾನಕ್ಕೆ ಹೋಗಿದೆ. ಪೊಲೀಸರ ಮೇಲಿನ ಸರ್ಕಾರದ ಖರ್ಚು ಕಡಿಮೆಯಾಗಿದ್ದು, ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ.
೩. ೨೦೧೯ ರಲ್ಲಿ ಮಹಾರಾಷ್ಟ್ರ ೪ ನೇ ಸ್ಥಾನದಲ್ಲಿತ್ತು, ಅದು ೧೩ ನೇ ಸ್ಥಾನಕ್ಕೆ ಹೋಗಿದೆ. ಅಧಿಕಾರಿಗಳು ಮತ್ತು ಕಾನ್ಸಟೇಬಲ್‌ಗಳು ಕಡಿಮೆ ಸಂಖ್ಯೆಯಿರುವುದು ಇದರ ಒಂದು ಕಾರಣವಾಗಿದೆ. ಅಲ್ಲದೆ ಮಹಿಳಾ ಪೊಲೀಸರ ಸಂಖ್ಯೆಯೂ ಕಡಿಮೆಯಾಗಿದೆ.
೪. ಕರ್ನಾಟಕ ರಾಜ್ಯ ಪೊಲೀಸರು ಪ್ರಥಮ ಸ್ಥಾನದಲ್ಲಿದ್ದಾರೆ. ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೋಟಾದಲ್ಲಿ ಪೊಲೀಸರ ನೇಮಕಾತಿಯನ್ನು ಪೂರ್ಣಗೊಳಿಸಿದ್ದಾರೆ.