ಹಿಂಸಾಚಾರಿಗಳ ವಿರುದ್ಧ ಉಗ್ರಕ್ರಮ ಕೈಗೊಳ್ಳಿರಿ !

೧. ಕ್ರೈಸ್ತ ಬಿಶಪನ ಮತಾಂಧತೆಯನ್ನು ತಿಳಿಯಿರಿ !

ಕೇರಳದ ಆಡಳಿತ ಪಕ್ಷವಾದ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಾರ್ಟಿಯು ಮುಂಬರುವ ವಿಧಾನಸಭೆಯ ಚುನಾವಣೆಯಲ್ಲಿ ಚರ್ಚನ ಬೆಂಬಲವಿರುವ ಅಭ್ಯರ್ಥಿಗೆ ಟಿಕೇಟ್ ನೀಡುವಂತೆ ಬಿಶಪ ಜಾಕಬ್ ಮನಥೋದಾಥ್ ಇವರು ಮಾಕಪದ ರಾಜ್ಯ ಕಾರ್ಯದರ್ಶಿ ಕನಮ ರಾಜೇಂದ್ರನ್ ಇವರಿಗೆ ಗೋಪನೀಯ ಪತ್ರವನ್ನು ಬರೆದು ಶಿಫಾರಸ್ಸು ಮಾಡಿದ್ದಾರೆ.

೨. ಹಿಂಸಾಚಾರಿಗಳ ವಿರುದ್ಧ ಉಗ್ರಕ್ರಮ ಕೈಗೊಳ್ಳಿರಿ !

ಜನವರಿ ೨೬ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಆಂದೋಲನ ಮಾಡುವ ರೈತರು ಟ್ರ್ಯಾಕ್ಟರ್ ಮೋರ್ಚಾವನ್ನು ತೆಗೆದಿದ್ದರು; ಆದರೆ ಇದರಲ್ಲಿ ಬೃಹತ್ಪ್ರಮಾಣದಲ್ಲಿ ಅವರಿಂದ ಹಿಂಸಾಚಾರವಾಯಿತು. ಇದರಲ್ಲಿ ಇಬ್ಬರು ರೈತರು ಮೃತಪಟ್ಟರೆ, ೧೮ ಪೊಲೀಸರು ಗಾಯಗೊಂಡರು.

೩. ಇದಕ್ಕಿಂತ ಸಮಾನ ನಾಗರಿಕ ಕಾನೂನನ್ನು ಮಾಡಿರಿ !

ಭಾಜಪದ ನಾಯಕ ವಿನೀತ ಅಗ್ರವಾಲ ಶಾರದಾ ಇವರು ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ “ಎಲ್ಲಿಯ ತನಕ ಕುಟುಂಬ ನಿಯೋಜನೆಯ ಸಂದರ್ಭದಲ್ಲಿ ನಿಯಮಗಳನ್ನು ಮಾಡಲಾಗುವುದಿಲ್ಲ, ಅಲ್ಲಿಯ ತನಕ ನಾವು ಹಮ್ ದೊ ಹಮಾರೆ ಪಾಂಚ್‌ನ ಸಂಕಲ್ಪವನ್ನು ಮಾಡಬೇಕು’, ಎಂಬುದಾಗಿ ಹೇಳಿಕೆಯನ್ನು ನೀಡಿದರು.

೪. ಭ್ರಷ್ಟಾಚಾರವನ್ನು ದೂರಗೊಳಿಸುವುದಕ್ಕೆ ಹಿಂದೂ ರಾಷ್ಟ್ರವೇ ಬೇಕು !

ಟ್ರಾನ್ಸಪರೆನ್ಸಿ ಇಂಟರನ್ಯಾಶನಲ್‌ನ ಇತ್ತೀಚಿನ ಕರಪ್ಶನ್ ಪರ್ಸೆಪ್ಶನ್ ಇಂಡೆಕ್ಸ್‌ನಲ್ಲಿ ಭ್ರಷ್ಟಾಚಾರದ ನಿರ್ಮೂಲನೆಗೆ ಕ್ರಮಕೈಗೊಂಡ ೧೮೦ ದೇಶಗಳ ಪಟ್ಟಿ ಮಾಡಿದೆ. ಇದರಲ್ಲಿ ಭಾರತ ೮೬ ನೇ ಸ್ಥಾನದಲ್ಲಿದ್ದರೆ, ಚೀನಾ ೭೮ ನೇ ಸ್ಥಾನದಲ್ಲಿದೆ.

೫. ಇಂತಹವರಿಗೆ ಉಗ್ರ ಶಿಕ್ಷೆಯನ್ನು ವಿಧಿಸಬೇಕು !

ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಮೋರ್ಚಾದ ಸಮಯದಲ್ಲಿ ಸಂಭವಿಸಿದ ಹಿಂಸಾಚಾರದ ಸಮಯದಲ್ಲಿ ಪೊಲೀಸರು ಗುಂಡು ಹಾರಿಸಿದಾಗ ಒಬ್ಬ ರೈತನು ಮೃತಪಟ್ಟನು ಎಂದು ಗಾಳಿಸುದ್ದಿ ಹಬ್ಬಿಸಿದ ಪ್ರಕರಣದಲ್ಲಿ ಪೊಲೀಸರು ಕಾಂಗ್ರೆಸ್ ಸಂಸದ ಶಶಿ ತರೂರ, ಪತ್ರಕರ್ತ ರಾಜದೀಪ ಸರದೇಸಾಯಿ ಮುಂತಾದ ಪತ್ರಕರ್ತರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ.

೬. ಉಗ್ರರಿಗೆ ಧರ್ಮ ಇರುತ್ತದೆ !

ರಾಜಧಾನಿಯಲ್ಲಿ ಇಸ್ರೇಲ್ ರಾಯಭಾರಿ ಕಚೇರಿ ಎದುರಿಗೆ ಸಂಭವಿಸಿದ ಸ್ಫೋಟದ ಹೊಣೆಯನ್ನು ಜೈಶ-ಉಲ್-ಹಿಂದ್ ಈ ಉಗ್ರ ಸಂಘಟನೆಯು ಸ್ವೀಕರಿಸಿತು. ‘ಸರ್ವಶಕ್ತಿಶಾಲಿ ಅಲ್ಲಾಹನ ಕೃಪೆಯಿಂದ ಮತ್ತು ಸಹಾಯದಿಂದ ಈ ಸ್ಫೋಟವನ್ನು ಮಾಡಲಾಯಿತು, ಎಂದು ಅದು ಹೇಳಿದೆ.

೭. ಚೀನಾದ ಕೈಗೊಂಬೆಯಾಗಿರುವ  ಪಾಕಿಸ್ತಾನ

ಚೀನಾವು ನನ್ನನ್ನು ಬಲೂಚಿ ಜನರ ಆಂದೋಲನವನ್ನು ಹತ್ತಿಕ್ಕಲು ಹಾಗೂ ಭಾರತದ ಪ್ರಭಾವ ನಾಶ ಮಾಡುವುದಕ್ಕಾಗಿ ಇಲ್ಲಿ ನಿಯುಕ್ತಿ ಮಾಡಿದೆ, ಎಂದು ಪಾಕಿಸ್ತಾನದ ಸೇನಾಮುಖ್ಯಸ್ಥ ಮೇಜರ್ ಜನರಲ್ ಅಯಮಾನ್ ಬಿಲಾಲ ಇವರು ಹೇಳಿಕೆ ನೀಡಿದ್ದಾರೆ.