ಸೀತಾಮಢಿ (ಬಿಹಾರ)ಯಲ್ಲಿ ಪೊಲೀಸರು ಪೂಜೆಯ ಆಯೋಜನೆ ತಡೆದು ದೇವತೆಗಳ ವಿಗ್ರಹಗಳನ್ನು ನೀರಿನಲ್ಲಿ ಎಸೆದಿದ್ದಾರೆ ಎಂದು ಗ್ರಾಮಸ್ಥರ ಆರೋಪ

ಇಲ್ಲಿನ ಮೇಘಪುರ ಗ್ರಾಮದಲ್ಲಿ ಗ್ರಾಮಸ್ಥರೊಂದಿಗಿನ ಮಾತಿನ ಚಕಮಕಿಯ ನಂತರ ಪೊಲೀಸರು ದೇವಸ್ಥಾನದಲ್ಲಿನ ಶ್ರೀ ದುರ್ಗಾದೇವಿಯ ವಿಗ್ರಹವನ್ನು ನೀರಿನಲ್ಲಿ ಎಸೆದರು. ಅದೇರೀತಿ ಪೊಲೀಸರು ೫೫ ಸಾವಿರ ರೂಪಾಯಿ ಹಾಗೂ ೧ ಲಕ್ಷ ಮೌಲ್ಯದ ಆಭರಣಗಳನ್ನು ತೆಗೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಕ್ಷಾಬಂಧನವು ಹಿಂದೂಗಳ ಹಬ್ಬವಾಗಿದ್ದರಿಂದ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅದನ್ನು ನಿಷೇಧಿಸಿದ ಕೇರಳದ ಮತಾಂಧ ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ. ರಮಲಾ ಬಿವಿ !

ಕೇರಳ ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ. ರಮಲಾ ಬಿವಿಯವರು ರಕ್ಷಾಬಂಧನ ಹಿಂದೂ ಹಬ್ಬವಾಗಿದ್ದರಿಂದ ಆಚರಿಸಬಾರದು’ ಎಂದು ರಾಜ್ಯ ವೈದ್ಯಕೀಯ ಕಾಲೇಜುಗಳಲ್ಲಿ ಆದೇಶ ಹೊರಡಿಸಿದ್ದಾರೆ.

ಸನಾತನ ಪ್ರಭಾತ ಇನ್ನು ‘ಟೆಲಿಗ್ರಾಮ್ನಲ್ಲಿಯೂ ಲಭ್ಯ !

ಸನಾತನ ಪ್ರಭಾತ ನಿಯತಕಾಲಿಕೆಗಳಲ್ಲಿನ ರಾಷ್ಟ್ರ ಧರ್ಮಜಾಗೃತಿಯ ವಿಷಯಗಳು, ಸಮಾಜದಲ್ಲಿ ಎಲ್ಲೆಡೆ ಅದಷ್ಟು ಹೆಚ್ಚು ಜನರಿಗೆ ಪಿಡಿಎಫ್ ಮೂಲಕ ತಲುಪಿಸಲು ‘ಸೋಶಿಯಲ್ ಮೀಡಿಯಾದ ವಿವಿಧ ಮಾಧ್ಯಮಗಳನ್ನು ಉಪಯೋಗಿಸಲಾಗುತ್ತದೆ. ವಾಟ್ಸ್ ಆಪ್, ಫೇಸ್‌ಬುಕ್ ಹಾಗೂ ಟ್ವೀಟರ್ ನಂತರ ಈಗ ‘ಟೆಲಿಗ್ರಾಮ್ ಈ ಸೋಶಿಯಲ್ ಮೀಡಿಯಾದಲ್ಲಿಯೂ ಸನಾತನ ಪ್ರಭಾತ ನಿಯತಕಾಲಿಕೆಗಳ ‘ಟೆಲಿಗ್ರಾಮ್ ಚಾನೆಲ್ ಗಳನ್ನು ಆರಂಭಿಸಲಾಗಿದೆ.

ಕಾಶಿ ವಿಶ್ವನಾಥ ದೇವಸ್ಥಾನದ ವಿಷಯದ ಆಲಿಕೆ ಅಕ್ಟೋಬರ್ ೬ ರಂದು ನಡೆಯಲಿದೆ

ಇಲ್ಲಿಯ ಜಿಲ್ಲಾ ನ್ಯಾಯಾಲಯದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನ ಹಾಗೂ ಜ್ಞಾನವಾಪಿ ಮಸೀದಿ ವಿವಾದದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುನ್ನಿ ವಕ್ಫ ಬೋರ್ಡ್‌ನಿಂದ ಸಲ್ಲಿಸಿದ ಅರ್ಜಿಯ ಬಗ್ಗೆ ಅಕ್ಟೋಬರ್ ೩ ರಂದು ಆಗಬೇಕಿದ್ದ ಆಲಿಕೆಯು ನ್ಯಾಯಾಧೀಶರು ರಜೆಯಲ್ಲಿದ್ದ ಕಾರಣ ಅಕ್ಟೋಬರ್ ೬ ರಂದು ನಡೆಯಲಿದೆ.

ಭಾಜಪದ ಪದಾಧಿಕಾರಿ ಮನೀಷ ಶುಕ್ಲಾ ಅವರನ್ನು ಪೊಲೀಸ್ ಠಾಣೆ ಎದುರು ಗುಂಡಿಕ್ಕಿ ಹತ್ಯೆ

ಬಂಗಾಲದ ೨೪ ಪರಗಣಾ ಜಿಲ್ಲೆಯ ಟಿಟಾಗಡ್ ಪೊಲೀಸ್ ಠಾಣೆ ಎದುರಲ್ಲೇ ಭಾಜಪದ ಜಿಲ್ಲಾ ಸಮಿತಿ ಸದಸ್ಯ ಮತ್ತು ಮಾಜಿ ನಗರ ಸೇವಕ ಮನೀಷ ಶುಕ್ಲಾ ಅವರನ್ನು ಅಜ್ಞಾತರು ಗುಂಡಿಕ್ಕಿ ಕೊಂದಿದ್ದಾರೆ. ಘಟನೆಯ ನಂತರ ಈ ಪ್ರದೇಶದಲ್ಲಿ ಪೊಲೀಸರ ಸರ್ಪಗಾವಲಿದ್ದು ನಗರದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ.

ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರಗೆ ಸಂಬಂಧಿಸಿದ ೧೪ ಕಡೆಗಳ ಮೇಲೆ ಸಿಬಿಐ ದಾಳಿ

ಕಾಂಗ್ರೆಸ್ ಪಕ್ಷದ ಪ್ರದೇಶಾಧ್ಯಕ್ಷ ಡಿ.ಕೆ. ಶಿವಕುಮಾರ ಮತ್ತು ಅವರ ಸಹೋದರ ಸಂಸದ ಡಿ.ಕೆ. ಸುರೇಶ ಇವರ ಕರ್ನಾಟಕದಲ್ಲಿ ೯, ಮುಂಬಯಿಯಲ್ಲಿ ೧ ಮತ್ತು ದೆಹಲಿಯಲ್ಲಿ ೪ ಸ್ಥಳಗಳಲ್ಲಿ ಒಟ್ಟು ೧೪ ಸ್ಥಳಗಳಲ್ಲಿ ಸಿಬಿಐ ಅಕ್ಟೋಬರ್ ೫ ರಂದು ದಾಳಿ ಮಾಡಿದೆ.

ಪಂಜಾಬ್‌ನಿಂದ ಇಬ್ಬರು ಖಲಿಸ್ತಾನಿ ಭಯೋತ್ಪಾದಕರ ಬಂಧನ

ಪಂಜಾಬ್ ಪೊಲೀಸರು ಪಂಜಾಬ್‌ನ ಹೊಶಿಯಾಪುರದಿಂದ ‘ಖಲಿಸ್ತಾನ್ ಜಿಂದಾಬಾದ್ ದಳ’ದ ಭಯೋತ್ಪಾದಕ ಮಾಖನ್ ಸಿಂಹ ಗಿಲ್ ಅಲಿಯಾಸ್ ಅಮಲಿ ಹಾಗೂ ದವಿಂದರ್ ಸಿಂಹ ಅಲಿಯಾಸ್ ಹ್ಯಾಪಿ ಇಬ್ಬರನ್ನು ಬಂಧಿಸಿದ್ದಾರೆ.

‘ಇಂದಿರಾ ಮತ್ತು ರಾಜೀವ್ ಗಾಂಧಿ ಕೊಲ್ಲಲ್ಪಟ್ಟರು; ಆದರೆ ನರೇಂದ್ರ ಮೋದಿಯನ್ನು ಕೊಲ್ಲಲು ಬಾಂಬ್ ಏಕೆ ಸಿಗುತ್ತಿಲ್ಲ ?’(ವಂತೆ)

ಇಂದಿರಾ ಗಾಂಧಿಯನ್ನು ಕೊಲ್ಲಲು ಗುಂಡು ಸಿಕ್ಕಿತು, ರಾಜೀವ್ ಗಾಂಧಿಯನ್ನು ಕೊಲ್ಲಲು ಬಾಂಬ್ ಸಿಕ್ಕಿತು; ಆದರೆ ನರೇಂದ್ರ ಮೋದಿಯವರನ್ನು ಕೊಲ್ಲಲು ಯಾವುದೇ ಬಾಂಬ್ ಪತ್ತೆಯಾಗಿಲ್ಲ, ನರೇಂದ್ರ ಮೋದಿಯವರನ್ನು ಏಕೆ ಕೊಲ್ಲಬಾರದು ? ಎಂದು ಘಂಸೌರ್ ವಿಧಾನಸಭಾ ಚುನಾವಣಾಕ್ಷೇತ್ರದ ಗೊಂಡವಾನಾ ಗಣತಂತ್ರ ಪಾರ್ಟಿಯ ಮಾಜಿ ಶಾಸಕ ರಾಮಗುಲಾಮ ಉಯಿಕೆ ಇವರು ಒಂದು ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದ್ದಾರೆ.

ದೇವಳಾಲಿ ಕ್ಯಾಂಪ್‌ನಲ್ಲಿನ ಮುಖ್ಯ ತರಬೇತಿ ಕೇಂದ್ರದ ನಿರ್ಬಂಧಿತ ಪ್ರದೇಶದ ಛಾಯಾಚಿತ್ರಗಳನ್ನು ಪಾಕಿಸ್ತಾನಕ್ಕೆ ಕಳುಹಿಸುವವನನ್ನು ವಶಕ್ಕೆ ಪಡೆದ ಸೈನ್ಯ

ಫಿರಂಗಿ ಇಲಾಖೆಯ ದೆವಳಾಲಿ ಕ್ಯಾಂಪ್‌ನ ಮುಖ್ಯ ತರಬೇತಿ ಕೇಂದ್ರದ ನಿರ್ಬಂಧಿತ ಪ್ರದೇಶದ ಛಾಯಾಚಿತ್ರಗಳನ್ನು ಪಾಕಿಸ್ತಾನಕ್ಕೆ ಕಳುಹಿಸುವ ಶಂಕಿತ ಸಂಜೀವಕುಮಾರ (ವಯಸ್ಸು ೨೧)ನನ್ನು ಸೈನ್ಯವು ವಶಕ್ಕೆ ಪಡೆದುಕೊಂಡಿದ್ದಾರೆ. ಆತ ಈ ಛಾಯಾಚಿತ್ರಗಳನ್ನು ಪಾಕಿಸ್ತಾನದಲ್ಲಿಯ ಕೆಲವು ‘ವಾಟ್ಸ್‌ಆಪ್’ನ ಗುಂಪಿನಲ್ಲಿ ಕಳುಹಿಸಿರುವುದು ತನಿಖೆಯಿಂದ ಪತ್ತೆಯಾಗಿದೆ.

ಹಾಥ್ರಸ ಪ್ರಕರಣದ ತನಿಖೆ ಸಿಬಿಐಗೆ ! – ಉತ್ತರಪ್ರದೇಶ ಸರಕಾರದ ಘೋಷಣೆ

ಇಲ್ಲಿಯ ಪೀಡಿತೆಯ ಮೇಲೆ ಕಥಿತ ಅತ್ಯಾಚಾರ ಹಾಗೂ ನಂತರ ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ಉತ್ತರಪ್ರದೇಶದ ಸರಕಾರ ಸಿಬಿಐಗೆ ಒಪ್ಪಿಸಿದೆ. ಪೀಡಿತೆಯ ಕುಟುಂಬದವರು ಅಕ್ಟೋಬರ್ ೩ ರಂದು ‘ನಮಗೆ ಪೊಲೀಸ್ ಅಥವಾ ಸಿಬಿಐಯ ಮೇಲೆ ನಂಬಿಕೆ ಇಲ್ಲ. ನಮ್ಮ ಮಗಳ ಮೇಲೆ ಆಗಿರುವ ಅತ್ಯಾಚಾರ ಹಾಗೂ ಆಕೆಯ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು’, ಎಂದು ಆಗ್ರಹಿಸಿದ್ದರು.