ದೇವಳಾಲಿ ಕ್ಯಾಂಪ್‌ನಲ್ಲಿನ ಮುಖ್ಯ ತರಬೇತಿ ಕೇಂದ್ರದ ನಿರ್ಬಂಧಿತ ಪ್ರದೇಶದ ಛಾಯಾಚಿತ್ರಗಳನ್ನು ಪಾಕಿಸ್ತಾನಕ್ಕೆ ಕಳುಹಿಸುವವನನ್ನು ವಶಕ್ಕೆ ಪಡೆದ ಸೈನ್ಯ

ಇಂತಹ ದೇಶದ್ರೋಹಿ ಕೃತ್ಯವನ್ನು ಮಾಡುವವರಿಗೆ ಸೈನ್ಯವು ತೀವ್ರವಾಗಿ ತನಿಖೆ ನಡೆಸಿ ಅವರಿಗೆ ಶೀಘ್ರವಾಗಿ ಕಠಿಣ ಶಿಕ್ಷೆ ನೀಡಬೇಕು !

ನಾಶಿಕ – ಫಿರಂಗಿ ಇಲಾಖೆಯ ದೆವಳಾಲಿ ಕ್ಯಾಂಪ್‌ನ ಮುಖ್ಯ ತರಬೇತಿ ಕೇಂದ್ರದ ನಿರ್ಬಂಧಿತ ಪ್ರದೇಶದ ಛಾಯಾಚಿತ್ರಗಳನ್ನು ಪಾಕಿಸ್ತಾನಕ್ಕೆ ಕಳುಹಿಸುವ ಶಂಕಿತ ಸಂಜೀವಕುಮಾರ (ವಯಸ್ಸು ೨೧)ನನ್ನು ಸೈನ್ಯವು ವಶಕ್ಕೆ ಪಡೆದುಕೊಂಡಿದ್ದಾರೆ. ಆತ ಈ ಛಾಯಾಚಿತ್ರಗಳನ್ನು ಪಾಕಿಸ್ತಾನದಲ್ಲಿಯ ಕೆಲವು ‘ವಾಟ್ಸ್‌ಆಪ್’ನ ಗುಂಪಿನಲ್ಲಿ ಕಳುಹಿಸಿರುವುದು ತನಿಖೆಯಿಂದ ಪತ್ತೆಯಾಗಿದೆ. ಫಿರಂಗಿ ತರಬೇತಿ ಕೇಂದ್ರದ ದೂರಿನ ನಂತರ ಸಂಜೀವಕುಮಾರನ ವಿರುದ್ಧ ಅಪರಾಧವನ್ನು ದಾಖಲಿಸಲಾಗಿದೆ. ಉಗ್ರ ನಿಗ್ರಹ ದಳದೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳೂ ಆತನ ವಿಚಾರಣೆ ಮಾಡಿದ್ದಾರೆ.
ದೇವಳಾಲಿ ಕ್ಯಾಂಪ್‌ನಲ್ಲಿಯ ನೀರಿನ ಟ್ಯಾಂಕ್‌ನ ಕೆಲಸ ನಡೆಯುತ್ತಿದೆ. ಈ ಕೆಲಸವನ್ನು ಮಾಡಿವ ಗುತ್ತಿಗೆದಾರನ ಬಳಿ ಶಂಕಿತ ಸಂಜೀವಕುಮಾರ ಕೆಲಸ ಮಾಡುತ್ತಿದ್ದ. ಅಕ್ಟೋಬರ್ ೨ ರಂದು ರಾತ್ರಿ ೮.೩೦ ಕ್ಕೆ ತರಬೇತಿ ಕೇಂದ್ರದ ಪ್ರವೇಶದ್ವಾರ ಬಳಿ ಸಂಚಾರವಾಣಿಯಿಂದ ಛಾಯಾಚಿತ್ರವನ್ನು ತೆಗೆಯುತ್ತಿರುವುದು ಭದ್ರತಾ ಪಡೆಗಳಿಗೆ ಗಮನಕ್ಕೆ ಬಂದಿತು. ಅವರು ಆತನನ್ನು ವಶಕ್ಕೆ ಪಡೆದು ಸೈನ್ಯದ ಗುಪ್ತಚರ ಇಲಾಖೆಗೆ ಒಪ್ಪಿಸಲಾಯಿತು.