ಹಾಥ್ರಸ ಪ್ರಕರಣದ ತನಿಖೆ ಸಿಬಿಐಗೆ ! – ಉತ್ತರಪ್ರದೇಶ ಸರಕಾರದ ಘೋಷಣೆ

ಹಾಥ್ರಸ (ಉತ್ತರಪ್ರದೇಶ) – ಇಲ್ಲಿಯ ಪೀಡಿತೆಯ ಮೇಲೆ ಕಥಿತ ಅತ್ಯಾಚಾರ ಹಾಗೂ ನಂತರ ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ಉತ್ತರಪ್ರದೇಶದ ಸರಕಾರ ಸಿಬಿಐಗೆ ಒಪ್ಪಿಸಿದೆ.

ಪೀಡಿತೆಯ ಕುಟುಂಬದವರು ಅಕ್ಟೋಬರ್ ೩ ರಂದು ‘ನಮಗೆ ಪೊಲೀಸ್ ಅಥವಾ ಸಿಬಿಐಯ ಮೇಲೆ ನಂಬಿಕೆ ಇಲ್ಲ. ನಮ್ಮ ಮಗಳ ಮೇಲೆ ಆಗಿರುವ ಅತ್ಯಾಚಾರ ಹಾಗೂ ಆಕೆಯ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು’, ಎಂದು ಆಗ್ರಹಿಸಿದ್ದರು. ತದನಂತರ ಕೆಲವೇ ಕ್ಷಣಗಳಲ್ಲಿಯೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗುವುದು ಎಂದು ಘೋಷಿಸಿದರು.