ಭಾಜಪದ ಪದಾಧಿಕಾರಿ ಮನೀಷ ಶುಕ್ಲಾ ಅವರನ್ನು ಪೊಲೀಸ್ ಠಾಣೆ ಎದುರು ಗುಂಡಿಕ್ಕಿ ಹತ್ಯೆ

ಬಂಗಾಲದಲ್ಲಿ ಮುಂದುವರಿದ ಭಾಜಪ ನಾಯಕರ ಹತ್ಯಾ ಸರಣಿ !

  • ಯಾವಾಗಲು ದೇಶದಲ್ಲಿ ಕಪಟ ಪ್ರಗತಿಪರರ ಹತ್ಯೆಯಾದರೇ ಆಕಾಶಪಾತಾಳ ಒಂದು ಮಾಡುವ ಪ್ರಗತಿ(ಅಧೋಗತಿ)ಪರರು ಹಾಗೂ ಜಾತ್ಯತೀತರು ಬಂಗಾಲದಲ್ಲಿ ಸತತವಾಗಿ ಭಾಜಪದ ಕಾರ್ಯಕರ್ತರ ಹತ್ಯೆಯಾಗುತ್ತಿರುವಾಗ ಏಕೆ ಬಾಯಿ ಬಿಡುತ್ತಿಲ್ಲ ? ಅಥವಾ ‘ಭಾಜಪದ ನಾಯಕರ, ಕಾರ್ಯಕರ್ತರ ಹತ್ಯೆ ಆಗಲೇ ಬೇಕು’, ಎಂದು ಅವರಿಗೆ ಅನಿಸುತ್ತದೆಯೇ ?
  • ಬಂಗಾಲದಲ್ಲಿ ಪೊಲೀಸ್ ಠಾಣೆ ಎದುರೇ ಹತ್ಯೆಯಾಗುತ್ತಿದೆ ಇದರಿಂದ ಬಂಗಾಲದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ ಎಂಬುದು ಸ್ಪಷ್ಟವಾಗಿದೆ !
  • ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಭಾಜಪದ ಕಾರ್ಯಕರ್ತರ ಬಂಗಾಲದಲ್ಲಿ ಹತ್ಯೆಯಾಗುವುದು ಹಾಗೂ ಅದನ್ನು ತಡೆಯದಿರುವುದು, ಇದು ಹಿಂದೂಗಳಿಗೆ ಆತಂಕದ ವಿಷಯವಾಗಿದೆ. ಕೇಂದ್ರದಲ್ಲಿರುವ ಭಾಜಪ ಸರಕಾರವು ಬಂಗಾಲದ ತೃಣಮೂಲ ಕಾಂಗ್ರೆಸ್ ಸರಕಾರವನ್ನು ವಿಸರ್ಜಿಸಿ ಅಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತಂದು ತಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರ ಪ್ರಾಣ ಉಳಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
  • ಕಾಶ್ಮೀರದಿಂದ ತಮಿಳುನಾಡಿನ ವರೆಗೆ ಭಾಜಪದ ಮುಖಂಡರು ಹಾಗೂ ಕಾರ್ಯಕರ್ತರ ಹತ್ಯೆಯಾಗುತ್ತಿರುವಾಗ ಅದನ್ನು ತಡೆಯಲು ಭಾಜಪ ವಿಶೇಷ ಪ್ರಯತ್ನಗಳನ್ನು ಮಾಡಬೇಕೆಂದು, ಹಿಂದೂಗಳಿಗೆ ಅನಿಸುತ್ತದೆ !
ಭಾಜಪದ ಜಿಲ್ಲಾ ಸಮಿತಿ ಸದಸ್ಯ ಮತ್ತು ಮಾಜಿ ನಗರ ಸೇವಕ ಮನೀಷ ಶುಕ್ಲಾ

ಕೋಲಕಾತಾ – ಬಂಗಾಲದ ೨೪ ಪರಗಣಾ ಜಿಲ್ಲೆಯ ಟಿಟಾಗಡ್ ಪೊಲೀಸ್ ಠಾಣೆ ಎದುರಲ್ಲೇ ಭಾಜಪದ ಜಿಲ್ಲಾ ಸಮಿತಿ ಸದಸ್ಯ ಮತ್ತು ಮಾಜಿ ನಗರ ಸೇವಕ ಮನೀಷ ಶುಕ್ಲಾ ಅವರನ್ನು ಅಜ್ಞಾತರು ಗುಂಡಿಕ್ಕಿ ಕೊಂದಿದ್ದಾರೆ. ಘಟನೆಯ ನಂತರ ಈ ಪ್ರದೇಶದಲ್ಲಿ ಪೊಲೀಸರ ಸರ್ಪಗಾವಲಿದ್ದು ನಗರದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಹತ್ಯೆಯ ನಂತರ ಭಾಜಪದ ಮುಖಂಡರು ಬರಾಕಪುರ್‌ನಲ್ಲಿ ಬಂದ್‌ಗೆ ಕರೆ ನೀಡಿದ್ದರೆ, ರಾಜ್ಯಪಾಲರು ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳನ್ನು ರಾಜಭವನಕ್ಕೆ ಕರೆದು ಚರ್ಚಿಸಿದ್ದಾರೆ.

೧. ಮನೀಷ ಶುಕ್ಲಾ ಅಕ್ಟೋಬರ್ ೪ ರಂದು ರಾತ್ರಿ ೮ ಗಂಟೆ ಸುಮಾರಿಗೆ ಭಾಜಪದ ಕಚೇರಿಯಲ್ಲಿ ಕುಳಿತಿದ್ದರು. ಆ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಅಜ್ಞಾತರು ಶುಕ್ಲಾ ಮೇಲೆ ಗುಂಡು ಹಾರಿಸಿದ್ದಾರೆ. ಅದರಲ್ಲಿ ಅವರು ಗಂಭೀರವಾಗಿ ಗಾಯಗೊಂಡರು; ಆದರೆ ಚಿಕಿತ್ಸೆಯ ಸಮಯದಲ್ಲಿ ಅವರು ನಿಧನರಾದರು. ಈ ಗುಂಡುಹಾರಾಟದಲ್ಲಿ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ.

೨. ಮನೀಶ್ ಶುಕ್ಲಾ ಹತ್ಯೆಯ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಭಾಜಪದ ಮುಖಂಡ ಕೈಲಾಶ್ ವಿಜಯವರ್ಗಿಯ ಒತ್ತಾಯಿಸಿದ್ದಾರೆ.