ಪಂಜಾಬ್‌ನಿಂದ ಇಬ್ಬರು ಖಲಿಸ್ತಾನಿ ಭಯೋತ್ಪಾದಕರ ಬಂಧನ

ಶಸ್ತ್ರಾಸ್ತ್ರಗಳು ಜಪ್ತಿ

ಖಲಿಸ್ತಾನವಾದಿಗಳು ಪುನಃ ತಲೆ ಎತ್ತುತ್ತಿದ್ದಾರೆ. ಆದ್ದರಿಂದ ಖಲಿಸ್ತಾನವಾದಿಯನ್ನು ಆಯಾ ಸಮಯದಲ್ಲೇ ಮಟ್ಟ ಹಾಕಲು ಬಂಧಿಸಲ್ಪಟ್ಟ ಭಯೋತ್ಪಾದಕರನ್ನು ತ್ವರಿತಗತಿಯ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿ ಗಲ್ಲು ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸಬೇಕು !

ಭಯೋತ್ಪಾದಕ ಮಾಖನ್ ಸಿಂಹ ಗಿಲ್ ಅಲಿಯಾಸ್ ಅಮಲಿ ಹಾಗೂ ದವಿಂದರ್ ಸಿಂಹ ಅಲಿಯಾಸ್ ಹ್ಯಾಪಿ ಮತ್ತು ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳು

ಚಂದಿಗಡ – ಪಂಜಾಬ್ ಪೊಲೀಸರು ಪಂಜಾಬ್‌ನ ಹೊಶಿಯಾಪುರದಿಂದ ‘ಖಲಿಸ್ತಾನ್ ಜಿಂದಾಬಾದ್ ದಳ’ದ ಭಯೋತ್ಪಾದಕ ಮಾಖನ್ ಸಿಂಹ ಗಿಲ್ ಅಲಿಯಾಸ್ ಅಮಲಿ ಹಾಗೂ ದವಿಂದರ್ ಸಿಂಹ ಅಲಿಯಾಸ್ ಹ್ಯಾಪಿ ಇಬ್ಬರನ್ನು ಬಂಧಿಸಿದ್ದಾರೆ. ಅವರಿಂದ ೨ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ೨ ಸಿಡಿಮದ್ದುಗಳು, ೯ ಎಂಎಂ ಪಿಸ್ತೂಲ್‌ದೊಂದಿಗೆ ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಒಂದು ಚತುಶ್ಚಕ್ರ ವಾಹನ, ೪ ಸಂಚಾರವಾಣಿಗಳನ್ನು ಹಾಗೂ ಇತರ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

೧. ಮಾಖನ್ ನೀಡಿದ ಮಾಹಿತಿಗನುಸಾರ, ಆತ ಕೆನಡಾದ ಹರಪ್ರಿತ್ ಸಿಂಹ ಅವರೊಂದಿಗೆ ಸಂಪರ್ಕದಲ್ಲಿದ್ದನು. ಆತ ಹೇಳಿದಂತೆ ಆತ ಪಂಜಾಬ್‌ನಲ್ಲಿ ಹಿಂಸಾಚಾರ ನಡೆಸಲು ಭಯೋತ್ಪಾದಕ ತಂಡವನ್ನು ರಚಿಸಿದ್ದನು. ಮಾಖನ್ ಈ ಹಿಂದೆ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ‘ಬಬ್ಬರ್ ಖಲಸಾ ಇಂಟರ್‌ನ್ಯಾಶನಲ್’ನ ಮುಖ್ಯಸ್ಥ ವಾಧವಾ ಸಿಂಹರವರ ಸಹಚರರಾಗಿದ್ದರು.

೨. ಕೆನಡಾದಲ್ಲಿರುವ ಹರಪ್ರಿತ್ ಯಾವಾಗಲೂ ಪಾಕಿಸ್ತಾನಕ್ಕೆ ಹೋಗುತ್ತಿರುತ್ತಾನೆ. ಆತ ಪಾಕಿಸ್ತಾನದ ‘ಖಲಿಸ್ತಾನ್ ಜಿಂದಾಬಾದ್ ಫೋರ್ಸ್’ನ ಮುಖ್ಯಸ್ಥ ರಣಜಿತ್ ಸಿಂಹ ಅಲಿಯಾಸ್ ನೀತಾ ಈತನ ಸಹಚರನಾಗಿದ್ದಾನೆ. ರಣಜಿತ್ ನೀತಾನು ಬಂಧಿಸಲ್ಪಟ್ಟ ಇಬ್ಬರಿಗೆ ಶಸ್ತ್ರಾಸ್ತ್ರ ನೀಡಿದ್ದರು.

೩. ಜರ್ಮನಿ ಮತ್ತು ಅಮೇರಿಕಾದ ಕೆಲವು ಸೂತ್ರದಾರರೂರೂವಾರಿಗಳೂ ಇದರಲ್ಲಿದ್ದಾರೆ. ಅವರು ಮಾಖನ್ ಅವರಿಗೆ ಹಣ ನೀಡಿದ್ದರು. ಮಾಖನ್ ಒಬ್ಬ ಕಟ್ಟರ ಖಲಿಸ್ತಾನಿಯಾಗಿದ್ದು ಈ ಹಿಂದೆ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಿದ್ದಕ್ಕಾಗಿ ಬಂಧಿಸಲಾಗಿತ್ತು. ಮಾಖಾನ್‌ಗೆ ಪಾಕಿಸ್ತಾನದಲ್ಲಿ ತರಬೇತಿ ಸಿಕ್ಕಿದ್ದು ಆತ ೧೯೮೦ ರಿಂದ ೧೯೯೦ ರ ವರೆಗೆ ಅಮೇರಿಕಾದಲ್ಲಿದ್ದ. ಆತ ಪಾಕಿಸ್ತಾನದಲ್ಲಿ ೧೪ ವರ್ಷಗಳ ಕಾಲ ವಾಸಿಸಿದ್ದನು.