ಬಾಗ್‌ಪತ್‌ನಲ್ಲಿ (ಉತ್ತರ ಪ್ರದೇಶ) ಯಮುನಾ ನದಿಯಲ್ಲಿ ಶರೀರದ ಮೇಲೆ ಅನೇಕ ಕಡೆಗಳಲ್ಲಿ ಗಾಯಗಳಾಗಿರುವ ಅಪರಿಚಿತ ಸಾಧುವಿನ ಶವ ಪತ್ತೆ

ಬಾಗಪತ್ ನಗರದ ಮೂಲಕ ಹರಿಯುವ ಯಮುನಾ ನದಿಯಲ್ಲಿ ಒಬ್ಬ ಸಾಧುವಿನ ಶವ ಪತ್ತೆಯಾಗಿದೆ. ಅವರನ್ನು ಇನ್ನೂ ಗುರುತಿಸಲಾಗಿಲ್ಲ. ಈ ಶವದ ಮೇಲೆ ಅನೇಕ ಗಾಯಗಳಿವೆ. ಅವರನ್ನು ಥಳಿಸಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸನಾತನ ಸಂಸ್ಥೆಯ ವತಿಯಿಂದ ಅಕ್ಟೋಬರ್ ೧೧ ರಿಂದ ‘ಆನಂದಮಯ ಜೀವನಕ್ಕಾಗಿ ಅಧ್ಯಾತ್ಮದ ಮಹತ್ವ’ ಈ ವಿಷಯದಲ್ಲಿ ೯ ಭಾಷೆಗಳಲ್ಲಿ ‘ಆನ್‌ಲೈನ್’ ಸಾಧನೆ ಪ್ರವಚನ ಮಾಲಿಕೆ !

ದಿನನಿತ್ಯದ ಜೀವನದಲ್ಲಿ ಮಾರ್ಗದರ್ಶಕವಾಗಲಿರುವ ಇಂತಹ ವಿಷಯಗಳ ಪ್ರವಚನವನ್ನು ಆನ್‌ಲೈನ್‌ನ ಮಾಧ್ಯಮದಿಂದ ಆಯೋಜಿಸಲಾಗಿದೆ. ಎಲ್ಲ ಜಿಜ್ಞಾಸು ಬಂಧು-ಭಗಿನಿಯರು ಇದರ ಲಾಭವನ್ನು ಪಡೆದುಕೊಳ್ಳಿರಿ, ಎಂದು ವಿನಂತಿ.

ನಾಗಾಲ್ಯಾಂಡ್ ಭಾರತದ ಹೊರಗಿನ ಪ್ರದೇಶ ಎಂದು ಹೇಳಿದ್ದಕ್ಕಾಗಿ ‘ಫ್ಲಿಪ್‌ಕಾರ್ಟ್’ನಿಂದ ಕ್ಷಮೆಯಾಚನೆ

ನಾಗಾಲ್ಯಾಂಡ್ ಭಾರತದ ಹೊರಗಿನ ಪ್ರದೇಶವಾಗಿದೆ ಎಂದು ಹೇಳುವ ಆನ್‌ಲೈನ್ ವಸ್ತುಗಳನ್ನು ಮಾರಾಟ ಮಾಡುವ ‘ಫ್ಲಿಪ್‌ಕಾರ್ಟ್’ ಭಾರತೀಯರ ವಿರೋಧದ ನಂತರ ಕ್ಷಮೆಯಾಚಿಸಿದೆ. ‘ನಿಷ್ಕಾಳಜಿಯಿಂದಾಗಿ ಈ ತಪ್ಪಾಗಿದೆ’ ಎಂದು ಫ್ಲಿಪ್‌ಕಾರ್ಟ್ ಹೇಳಿದೆ.

ಸ್ವಾಮಿ ವಿವೇಕಾನಂದರ ಛಾಯಾಚಿತ್ರ; ಮನೆಮನೆಗಳಲ್ಲಿ ಹಾಕಿದರೇ ಭಾಜಪ ೩೦ ವರ್ಷಗಳ ಕಾಲ ಅಧಿಕಾರದಲ್ಲಿ ಇರುತ್ತದೆ ! – ತ್ರಿಪುರಾದ ಮುಖ್ಯಮಂತ್ರಿ ಬಿಪ್ಲಾಬ್‌ಕುಮಾರ ದೇವ್

ನನ್ನ ಹಳ್ಳಿಯಲ್ಲಿ ನಾನು ಕೆಲವು ವಿಷಯಗಳನ್ನು ನೋಡಿದೆ. ಅನೇಕರ ಮನೆಗಳಲ್ಲಿ ಜ್ಯೋತಿಬಸು, ಜೋಸೆಫ್ ಸ್ಟಾಲಿನ್, ಮಾವೋ ತ್ಸೆ ತುಂಗ್ ಛಾಯಾಚಿತ್ರಗಳು ನೋಡಲು ಸಿಕ್ಕಿತು. ದೇವತೆಗಳ ಚಿತ್ರಗಳನ್ನು ಇಡುವಲ್ಲಿ, ಈ ಚಿತ್ರಗಳು ಇದ್ದವು.

ಮುಸಲ್ಮಾನ ಹುಡುಗಿಯೊಬ್ಬಳನ್ನು ಪ್ರೀತಿಸಿದ ಹಿಂದೂ ಯುವಕನನ್ನು ಹತ್ಯೆಗೈದ ಆಕೆಯ ಕುಟುಂಬ

ಮುಸಲ್ಮಾನ ಹುಡುಗಿಯನ್ನು ಪ್ರೀತಿಸುತ್ತಿದ್ದ ಕೆ. ಲಕ್ಷ್ಮೀಪತಿ ಎಂಬ ಹಿಂದೂ ಯುವಕನನ್ನು ಹುಡುಗಿಯ ತಂದೆ ನಿಜಾಮುದ್ದೀನ್ ಹತ್ಯೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ನಿಜಾಮುದ್ದೀನ್ ಮತ್ತು ಅವರ ಪುತ್ರ ಸಿಕಂದರ್‌ನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇಬ್ರತ ಮತ್ತು ಮಹಮ್ಮದ ಎಂಬ ಇತರ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಭೂ ಮಾಫಿಯಾದವರಿಂದ ಕರೌಲಿ (ರಾಜಸ್ಥಾನ)ಯಲ್ಲಿ ದೇವಸ್ಥಾನದ ಅರ್ಚಕನನ್ನು ಜೀವಂತವಾಗಿ ಸುಟ್ಟರು

ಇಲ್ಲಿಯ ಸಪೋಟರಾ ತಾಲ್ಲೂಕಿನ ರಾಧಾ ಗೋವಿಂದ ದೇವಸ್ಥಾನದ ೫೦ ವರ್ಷದ ಅರ್ಚಕ ಬಾಬುಲಾಲ ವೈಷ್ಣವ ಇವರನ್ನು ಅಕ್ಟೋಬರ್ ೮ ರಂದು ಭೂ ಮಾಫಿಯಾ ಹಾಗೂ ಅದರ ೫ ಸಹಚರರು ಸೇರಿ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟಿರುವ ಘಟನೆಯಾಗಿದೆ. ಆಸ್ಪತ್ರೆಗೆ ದಾಖಲಿಸಿದ ನಂತರ ಅಕ್ಟೋಬರ್ ೯ ರಂದು ಅವರು ಮೃತಪಟ್ಟರು.

ದೀಪಾವಳಿಯ ಸಮಯದಲ್ಲಿ ಪಟಾಕಿ ಸಿಡಿಸುವುದರಿಂದಾಗುವ ಮಾಲಿನ್ಯದಿಂದ ಕೊರೋನಾ ಪೀಡಿತರಿಗೆ ಅಪಾಯವಿದೆ ! – ತಜ್ಞರ ಎಚ್ಚರಿಕೆ

ದೀಪಾವಳಿಯಲ್ಲಿ ಪಟಾಕಿಯನ್ನು ದೊಡ್ಡ ಪ್ರಮಾಣದಲ್ಲಿ ಸಿಡಿಸಲಾಗುತ್ತದೆ. ಈ ವರ್ಷ ಕೊರೋನಾ ವಿಪತ್ತಿನ ಸಮಯದಲ್ಲಿ ಪಟಾಕಿಗಳಿಂದಾಗುವ ಮಾಲಿನ್ಯವು ರೋಗಿಗಳಿಗೆ ಅಪಾಯಕಾರಿಯಾಗಬಹುದು. ಇದರಿಂದ ಕೊರೋನಾ ಪೀಡಿತರಿಗೆ, ಅದೇರೀತಿ ವಿವಿಧ ಕಾಯಿಲೆಗಳನ್ನು ಎದುರಿಸುತ್ತಿರುವ ರೋಗಿಗಳಿಗೆ ತೊಂದರೆಗಳಾಗುವ ಸಾಧ್ಯತೆಯಿದೆ.

ನದಿಮಾರ್ಗವಾಗಿ ನುಸುಳುತ್ತಿದ್ದ ಭಯೋತ್ಪಾದಕರಿಂದ ಬೃಹತ್ ಪ್ರಮಾಣಗಳಲ್ಲಿ ಶಸ್ತ್ರಾಸ್ತ್ರಗಳ ವಶ(ಜಫ್ತಿ)

ಕೇರನ್ ಸೆಕ್ಟರ್‌ನಲ್ಲಿಯ ಪಾಕ್ ಪುರಸೃತ ಭಯೋತ್ಪಾದಕರು ಕಿಶನಗಂಗಾ ನದಿ ಮಾರ್ಗವಾಗಿ ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಪ್ರಯತ್ನಿಸಿದಾಗ ಭಾರತೀಯ ಸೈನ್ಯವು ಅದನ್ನು ವಿಫಲಗೊಳಿಸಿದೆ. ಭಯೋತ್ಪಾದಕರಿಂದ ೪ ಎಕೆ-೪೭, ೮ ಮ್ಯಾಗಝಿನ್ ಹಾಗೂ ೨೪೦ ಎಕೆ ರೈಫಲ್ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥರ ಶಿರಚ್ಛೇದಿಸುವಂತಹ ದರ್ಪದ ಮಾತನಾಡಿದ ಸಲಮಾನನ ಬಂಧನ

ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ವಿರುದ್ಧ ಆಕ್ಷೇಪಾರ್ಹ ಭಾಷಣ ಮಾಡಿದ ಪ್ರಕರಣದಲ್ಲಿ ಸಲಮಾನ್ ಎಂಬ ಯುವಕನನ್ನು ಬಾಗಪತ್ ಪೊಲೀಸರು ಬಂಧಿಸಿದ್ದಾರೆ. ಇಲ್ಲಿಯ ರಾಷ್ಟ್ರೀಯ ಲೋಕದಳದ ಮಹಾಪಂಚಾಯತ್‌ನಲ್ಲಿ ಭಾಷಣ ಮಾಡುತ್ತಿರುವಾಗ ಆತ ‘ಮೋದಿ ಮತ್ತು ಯೋಗಿ ಆದಿತ್ಯನಾಥರ ಶಿರಚ್ಛೇದಗೊಳಿಸದಿದ್ದರೆ ನನ್ನ ಹೆಸರನ್ನು ಬದಲಾಯಿಸಿ’ ಎಂದು ಘೋಷಣೆಯನ್ನು ನೀಡಿದ್ದನು.

ಕರ್ನಾಟಕ ಮತ್ತು ತಮಿಳುನಾಡಿನಿಂದ ಇಸ್ಲಾಮಿಕ್ ಸ್ಟೇಟ್‌ನ ಇಬ್ಬರ ಬಂಧನ

ತಮಿಳುನಾಡು ಮತ್ತು ಕರ್ನಾಟಕದಿಂದ ಇಸ್ಲಾಮಿಕ್ ಸ್ಟೇಟ್‌ನಲ್ಲಿ ಭಯೋತ್ಪಾದಕರಾಗಿ ಭರ್ತಿಯಾಗಲು ಹಾಗೂ ಅವರಿಗೆ ಸಿರಿಯಾ ತನಕ ತಲುಪಲು ಹಣ ವ್ಯವಸ್ಥೆ ಮಾಡಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.ಯು) ಅಹಮದ್ ಅಬ್ದುಲ್ ಕಾದಿರ್ (ವಯಸ್ಸು ೪೦) ಮತ್ತು ಇರಫಾನ್ ನಾಸೀರ್ (ವಯಸ್ಸು ೩೩) ಈ ಇಬ್ಬರನ್ನು ಬಂಧಿಸಿದೆ.