ಶ್ರಾದ್ಧಕರ್ಮವನ್ನು ಮಾಡುವಾಗ ಕೇವಲ ಪಿತೃಗಳ ಹೆಸರು ಮತ್ತು ಅವರ ಗೋತ್ರವನ್ನು ಹೇಳುವುದರಿಂದ ಅವರಿಗೆ ಶ್ರಾದ್ಧದ ಹವ್ಯವು (ಆಹಾರ) ಹೇಗೆ ಸಿಗುತ್ತದೆ ?

‘ಶಬ್ದವಿದ್ದಲ್ಲಿ ಅದರ ಸ್ಪರ್ಶ, ರೂಪ, ರಸ, ಗಂಧ ಮತ್ತು ಅದರ ಶಕ್ತಿ ಒಟ್ಟಿಗೆ ಇರುತ್ತವೆ ಇದು ಅಧ್ಯಾತ್ಮದಲ್ಲಿನ ಮೂಲ ಸಿದ್ಧಾಂತವಾಗಿದೆ. ಪಂಚತತ್ತ್ವಗಳ ಲಹರಿಗಳನ್ನು ಘನೀಕರಿಸಿ, ಸಗುಣ ರೂಪವು ಸಾಕಾರವಾಗುತ್ತದೆ. ಪ್ರತಿಯೊಂದು ವಸ್ತುವು ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಈ ಪಂಚತತ್ತ್ವಗಳ ಸಹಾಯದಿಂದಲೇ ನಿರ್ಮಾಣವಾಗಿದೆ. ಶ್ರಾದ್ಧದಲ್ಲಿ ಪಿತೃಗಳ ಹೆಸರುಗಳನ್ನು ಹೇಳುವುದರಿಂದ ಮಂತ್ರಗಳ ಸಹಾಯದಿಂದ ಪ್ರಕ್ಷೇಪಿತವಾಗುವ ಶಬ್ದಕಂಪನಗಳು ವಾಯುಮಂಡಲದಲ್ಲಿ ಅಲೆದಾಡುತ್ತಿರುವ ಲಿಂಗದೇಹಗಳ ವಾಸನಾಮಯಕೋಶವನ್ನು ಭೇದಿಸಿ ಅವುಗಳನ್ನು ಶ್ರಾದ್ಧದ ಸ್ಥಳಕ್ಕೆ ಆಕರ್ಷಿಸುತ್ತವೆ. ಇದರಿಂದ ಆಯಾ ಗೋತ್ರದ ಪಿತೃಗಳು ಆಯಾ ಸ್ಥಳಗಳಿಗೆ ಬಂದು ಶ್ರಾದ್ಧದಲ್ಲಿನ ಆಹಾರವನ್ನು ಸೇವಿಸಿ ತೃಪ್ತರಾಗುತ್ತಾರೆ. ಆಯಾ ಪಿತೃಗಳ ಹೆಸರಿನ ಶಬ್ದಗಳಿಂದ ಪ್ರಕ್ಷೇಪಿತವಾಗುವ ಧ್ವನಿಕಂಪನಗಳಿಗೆ ಮಂತ್ರಶಕ್ತಿಯಿಂದ ಚಲನೆಯು ಪ್ರಾಪ್ತವಾಗಿ ಅವು ತಮ್ಮ ಸೂಕ್ಷ್ಮಪರಿಣಾಮವನ್ನು ವಾಯುಮಂಡಲದ ಮೇಲೆ ಬೀರುತ್ತವೆ ಮತ್ತು ಸೂಕ್ಷ್ಮ ಸ್ತರದಲ್ಲಿ ವಾಯುರೂಪದಲ್ಲಿ ಅಥವಾ ಸ್ಪರ್ಶರೂಪದಲ್ಲಿ ಪಿತೃಗಳು ಹವ್ಯವನ್ನು ಸ್ವೀಕರಿಸುವಂತೆ ಮಾಡುತ್ತವೆ. – ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರು  ಓರ್ವ ವಿದ್ವಾಂಸ ಎಂಬ ಅಂಕಿತನಾಮದಲ್ಲಿ ಲೇಖನ ಬರೆಯುತ್ತಾರೆ)

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಶ್ರಾದ್ಧ – ೨ ಭಾಗಗಳು)