ಶ್ರಾದ್ಧದ ಮಹತ್ವ ಮತ್ತು ಅವಶ್ಯಕತೆ

ಪಿತೃಪಕ್ಷ : ಭಾದ್ರಪದ ಕೃಷ್ಣ ಪ್ರತಿಪದೆಯಿಂದ ಭಾದ್ರಪದ ಅಮಾವಾಸ್ಯೆ

ಪ್ರತಿವರ್ಷ ಶ್ರಾದ್ಧವಿಧಿ ಮಾಡುವುದು ಹಿಂದೂ ಧರ್ಮದ ಮಹತ್ವದ ಆಚಾರಧರ್ಮವಾಗಿದ್ದು ಅದಕ್ಕೆ ಅಪಾರ ಮಹತ್ವವಿದೆ. ಪುರಾಣಕಾಲ ದಿಂದಿದ್ದ ಈ ವಿಧಿಯ ಮಹತ್ವವನ್ನು ನಮ್ಮ ಋಷಿ ಮುನಿಗಳು ಅನೇಕ ಧರ್ಮಗ್ರಂಥಗಳಲ್ಲಿ ಬರೆದಿಟ್ಟಿದ್ದಾರೆ. ಶ್ರಾದ್ಧ ವಿಧಿಯ ಮಹತ್ವ ಮತ್ತು ಅವಶ್ಯಕತೆಯನ್ನು ಈ ಲೇಖನದಿಂದ ತಿಳಿದು ಕೊಳ್ಳೋಣ. ಈ ವರ್ಷ ಸಪ್ಟೆಂಬರ ೧೮ ರಿಂದ ಅಕ್ಟೋಬರ ೨ ರ ತನಕ ಪಿತೃಪಕ್ಷವಿದೆ.

೧. ಶ್ರಾದ್ಧವು ಧರ್ಮಪಾಲನೆಯ ಒಂದು ಭಾಗವಾಗಿದೆ

‘ದೇವರು, ಋಷಿ ಮತ್ತು ಸಮಾಜ ಈ ಮೂರು ಋಣಗಳೊಂದಿಗೆ ಪಿತೃೃಣವನ್ನು ತೀರಿಸುವುದೂ ಅಷ್ಟೇ ಮಹತ್ವದ್ದಾಗಿದೆ. ಪಿತೃರನ್ನು ಗೌರವಿಸುವುದು, ಅವರ ಹೆಸರಿನಲ್ಲಿ ದಾನಧರ್ಮ ಮಾಡುವುದು ಹಾಗೂ ಅವರಿಗೆ ಸಂತೋಷವಾಗುವÀ ಕೃತಿಗಳನ್ನು ಮಾಡುವುದು, ಇದು ವಂಶಜರ ಕರ್ತವ್ಯವಾಗಿದೆ. ಶ್ರಾದ್ಧವು ಧರ್ಮಪಾಲನೆಯ ಒಂದು ಭಾಗವಾಗಿದೆ’, ಎಂದು ಧರ್ಮಶಾಸ್ತ್ರ ಹೇಳುತ್ತದೆ.

೨. ‘ಪಿತೃರು ತಮ್ಮ ಪುತ್ರರು ಪಿಂಡೋದಕ (ಪಿಂಡ ಮತ್ತು ಉದಕ) ನೀಡಿದ ನಂತರವೇ ಸುಖೀ ಹಾಗೂ ಸಂತುಷ್ಟರಾಗುತ್ತಾರೆ.

‘ಪುತ್ರನೆಂದು ಯಾರಿಗೆ ಹೇಳಬೇಕು’, ಎಂಬ ವಿಷಯದಲ್ಲಿ ಮಹಾಭಾರತದಲ್ಲಿ ನೀಡಿರುವ ಶ್ಲೋಕ ಈ ಮುಂದಿನಂತಿದೆ

ಪುನ್ನಾಮ್ನೋ ನರಕಾದ್ಯಸ್ಮಾತ್ ತ್ರಾಯತೆ ಪಿತರಂ ಸುತಃ |
ತಸ್ಮಾತ್ಪುತ್ರ ಇತಿ ಪ್ರೋಕ್ತಃ ಸ್ವಯಮೇವ ಸ್ವಯಂಭುವಾ ||

– ಮಹಾಭಾರತ ೧.೭೪.೩೯

ಅರ್ಥ : ಮಗನು ತನ್ನ ಪಿತೃರನ್ನು (ಪೂರ್ವಜರನ್ನು) ಪು ಎಂಬ ಹೆಸರಿನ ನರಕದಿಂದ ರಕ್ಷಿಸುತ್ತಾನೆ; ಆದ್ದರಿಂದ ಅವನನ್ನು ಸ್ವತಃ ಬ್ರಹ್ಮದೇವನೇ ‘ಪುತ್ರ’ ಎಂದು ಹೇಳಿದ್ದಾನೆ. ಈ ಶ್ಲೋಕಕ್ಕನುಸಾರ ಪಿತೃರಿಗೆ ಸದ್ಗತಿ ಲಭಿಸಬೇಕು. ಅವರು ಅನಂತ ಯಾತನೆಗಳಿಂದ ಅವರ ಬಿಡುಗಡೆಯಾಗಬೇಕು ಹಾಗೂ ಪಿತೃರು ಪಿತೃಲೋಕದಿಂದ ವಂಶದ ಮೇಲೆ ಕೃಪಾದೃಷ್ಟಿಯನ್ನಿಡಬೇಕು, ಎಂದು ಪುತ್ರನು ಶ್ರಾದ್ಧಾದಿವಿಧಿ ಮಾಡಬೇಕು. ಅದು ತನ್ನನ್ನು ಪುತ್ರನೆಂದು ಹೇಳಿಸಿ ಕೊಳ್ಳುವವರ ಕರ್ತವ್ಯ, ಎಂಬುದು ಸ್ಪಷ್ಟವಾಗುತ್ತದೆ.

೩. ದೇವಕಾರ್ಯ ಮತ್ತು ಪಿತೃಕಾರ್ಯವನ್ನು ತಪ್ಪಿಸಬಾರದು

ದೇವಪಿತೃಕಾರ್ಯಾಭ್ಯಾಂ ನ ಪ್ರಮದಿತವ್ಯಮ್ |

– ತೈತ್ತೀರೀಯೋಪನಿಷತ್ತು ೧. ಅನುವಾಕ ೧೧, ವಾಕ್ಯ ೨

ಅರ್ಥ : ದೇವಕಾರ್ಯ ಮತ್ತು ಪಿತೃಕಾರ್ಯಗಳಲ್ಲಿ ಯಾವತ್ತೂ ತಪ್ಪು ಮಾಡಬಾರದು, ಆ ಕಾರ್ಯಗಳನ್ನು ತಪ್ಪಿಸಬಾರದು.

೪. ಶ್ರಾದ್ಧವಿಧಿ ಮಾಡದಿರುವವರ ವಿಷಯದಲ್ಲಿ ಭಗವದ್ಗೀತೆಯಲ್ಲಿನ ಈ ಮುಂದಿನ ಶ್ಲೋಕ ಚಿಂತನಾಯೋಗ್ಯವಾಗಿದೆ.

ಪತನ್ತಿ ಪಿತರೋ ಹ್ಯೇಷಾಂ ಲುಪ್ತಪಿಂಡೋದಕಕ್ರಿಯಾಃ |

– ಶ್ರೀಮದ್ಭಗವದ್ಗೀತೆ, ಅಧ್ಯಾಯ ೧, ಶ್ಲೋಕ ೪೨

ಅರ್ಥ: ಇಂತಹವರ (ಶ್ರಾದ್ಧವಿಧಿ ಮಾಡದವರ) ಪಿತೃರು ಪಿಂಡ ಶ್ರಾದ್ಧತರ್ಪಣಾದಿ ಕ್ರಿಯೆ ಮಾಡದ ಕಾರಣ ನರಕಕ್ಕೆ ಹೋಗುತ್ತಾರೆ. ಪರಿಣಾಮವಾಗಿ ಸ್ವಂತದ ಅಭ್ಯುದಯವಾಗುವುದಿಲ್ಲ.

೫. ಶ್ರಾದ್ಧಕ್ಕಿಂತ ಹೆಚ್ಚು ಶ್ರೇಯಸ್ಕರ ಬೇರೆ ಯಾವುದೂ ಇಲ್ಲ

ಸುಮಂತುಋಷಿ ಹೇಳುತ್ತಾರೆ, ಶ್ರಾದ್ಧಾತ ಪರತರಂ ನಾನ್ಯತ್ ಶ್ರೇಯಸ್ಕರಮುದಾಹತಮ್ |‘ ಅಂದರೆ ಶ್ರಾದ್ಧಕ್ಕಿಂತ ಹೆಚ್ಚು ಶ್ರೇಯಸ್ಕರವಾದುದು ಬೇರೆ ಯಾವುದಿಲ್ಲ. ಇದಕ್ಕಾಗಿಯೆ ಪ್ರಜ್ಞಾವಂತರು ಎಂದಿಗೂ ಶ್ರಾದ್ಧವನ್ನು ತಪ್ಪಿಸಬಾರದು.

೬. ದೇವಕಾರ್ಯಕ್ಕಿಂತ ಪಿತೃಕಾರ್ಯ ಮಹತ್ವದ್ದು

ಬ್ರಹ್ಮವೈವರ್ತಪುರಾಣವು ದೇವಕಾರ್ಯಕ್ಕಿಂತ ಪಿತೃಕಾರ್ಯ ಮಹತ್ವದ್ದು ಎಂದು ಹೇಳಿದೆ, ಆದ್ದರಿಂದಲೆ ಎಲ್ಲ ಮಂಗಲಕಾರ್ಯ ಗಳಲ್ಲಿ ನಾಂದಿ ಶ್ರಾದ್ಧದ ವಿಧಾನ ಸರ್ವಪ್ರಥಮವಾಗಿರುತ್ತದೆ.

೭. ಶ್ರಾದ್ಧ ಮಾಡುವವರ ಕುಲದಲ್ಲಿ ಯಾರೂ ದುಃಖಿಯಾಗಿರುವುದಿಲ್ಲ

ಬ್ರಹ್ಮಪುರಾಣವು ಹೇಳುತ್ತದೆ, ಯಾವ ವ್ಯಕ್ತಿ ವಿಧಿಪೂರ್ವಕ ತನ್ನ ಆರ್ಥಿಕ ಸ್ಥಿತಿಗನುಸಾರ ಶ್ರಾದ್ಧ ಮಾಡುತ್ತಾನೆಯೋ, ಅವನು ಬ್ರಹ್ಮದೇವರಿಂದ ಹಿಡಿದು ಹುಲ್ಲಿನವರೆಗೆ ಎಲ್ಲ ಜೀವಗಳನ್ನು ತೃಪ್ತಗೊಳಿಸುತ್ತಾನೆ. ಶ್ರಾದ್ಧ ಮಾಡುವವರ ಕುಲದಲ್ಲಿ ಯಾರೂ ದುಃಖಿಯಾಗಿರುವುದಿಲ್ಲ.

೮. ವಾಸನಾ-ಅತೃಪ್ತಿ

‘ಯಾವುದಾದರೂ ಮೃತ ವ್ಯಕ್ತಿಗೆ ‘ತನ್ನ ಶ್ರಾದ್ಧವಾಗಬೇಕು’, ಎಂಬ ಇಚ್ಛೆ ಇದ್ದರೆ ಹಾಗೂ ಅಪೇಕ್ಷಿತರಿಂದ ಅದು ಪೂರ್ಣವಾಗದಿದ್ದರೆ, ವಾಸನಾ-ಅತೃಪ್ತಿಯ ದುಃಖವಾಗುತ್ತದೆ. ಇಂತಹ ಯಾವುದಾದರೊಂದು ವ್ಯಕ್ತಿಯ ಮೃತಾತ್ಮ ಪಿಶಾಚಿ (ಅನಿಷ್ಟಶಕ್ತಿಯ ಒಂದು ಪ್ರಕಾರ) ಆಗಿ ಶ್ರಾದ್ಧ ಮಾಡದಿರುವುದರ ಮೇಲೆ ಕೋಪ ಗೊಂಡು ತೊಂದರೆಯನ್ನು ಕೊಡಬಹುದು. ಕೆಲವೊಮ್ಮೆ ಮೃತಾತ್ಮ ಸಂಬಂಧಿಕರಲ್ಲಿ ಪ್ರಕಟವಾಗಿ ಮಾತನಾಡುತ್ತದೆ, ಇದರ ಒಂದು ಉದಾಹರಣೆಯನ್ನು ಮುಂದೆ ಕೊಡಲಾಗಿದೆ.

ಒಮ್ಮೆ ಒಂದು ಮೃತಾತ್ಮವು ಒಬ್ಬ ಮನುಷ್ಯನ ಮೈಯಲ್ಲಿ ಬಂದಿತು ಹಾಗೂ ಅದು ಕೋಲಾಹಲ ಮಾಡತೊಡಗಿತು. ಅಹಮ್ಮದ ನಗರದ ಪ.ಪೂ. ಕ್ಷೀರಸಾಗರ ಮಹಾರಾಜರು, ತಾವು ಯಾರು ಎಂದು ವಿಚಾರಿಸಿದರು ?’ ಅವನು, ‘ನಾನು ಈ ವ್ಯಕ್ತಿಯ ತಂದೆಯಾಗಿದ್ದೇನೆ’ ಎಂದು ಉತ್ತರ ನೀಡಿತು ಮಹಾರಾಜರು ಕೇಳಿದರು, ‘ತಾವು ಏಕೆ ಬಂದಿದ್ದೀರಿ ?’ ಮೈಮೇಲೆ ಬಂದಿರುವ ತಂದೆ ಹೇಳಿದರು, ‘ಇವನು ನನಗೆ ಅನ್ನ ನೀಡುವುದಿಲ್ಲ, ಶ್ರಾದ್ಧವನ್ನು ಮಾಡುವುದಿಲ್ಲ. ನಾನು ಉಪವಾಸ ಇದ್ದೇನೆ.’

೯. ಪ್ರತಿಯೊಬ್ಬರ ಶ್ರಾದ್ಧ ಮಾಡುವುದೇ ಯೋಗ್ಯವಾಗಿದೆ

ಯಾರಿಗಾದರೂ ‘ಶ್ರಾದ್ಧದಲ್ಲಿ ಏನೂ ಅರ್ಥವಿಲ್ಲ; ಎಂದು ಅನಿಸಿ ತನ್ನ ಮರಣದ ನಂತರ ತನಗಾಗಿ ಶ್ರಾದ್ಧ ಮಾಡುವುದು ಬೇಡ’, ಎಂದು ಅನಿಸಿದರೆ ಹಾಗೂ ಮರಣದ ನಂತರ ಶ್ರಾದ್ಧ ಮಾಡದಿರುವುದರಿಂದ ‘ತಾನು ಸಿಲುಕಿದ್ದೇನೆ’, ಎಂದು ಅರಿವಾದರೂ ಅವನು ಹಾಗೆ ಹೇಳುವ ಹಾಗಿಲ್ಲ. ಇಚ್ಛಾ ಪೂರ್ಣ ವಾಗದೇ ಅವನು ದುಃಖಿಯಾಗಬಹುದು. ಇದನ್ನು ಗಮನದಲ್ಲಿಟ್ಟು ಪ್ರತಿಯೊಬ್ಬರಿಗೂ ಶ್ರಾದ್ಧ ಮಾಡುವುದೇ ಯೋಗ್ಯವಾಗಿದೆ.

೧೦. ಕೊಡುಕೊಳ್ಳುವ ಲೆಕ್ಕಾಚಾರ ಶ್ರಾದ್ಧ ಮಾಡುವುದರಿಂದ ಪೂರ್ಣವಾಗುತ್ತದೆ.

ಉದಾ, ನಾವು ಯಾರಿಗಾದರೂ ಕೊಡುವುದನ್ನು ಕೊಡುವ ಮೊದಲೇ ಅವನು ಪರಲೋಕಕ್ಕೆ ಹೋದರೆ ಅವನಿಗೆ ಕೊಡುವುದನ್ನು ಕೊಡುವ ಸಲುವಾಗಿ ಅವನ ಶ್ರಾದ್ಧ ಮಾಡಬೇಕು.

೧೧. ಅತೃಪ್ತ ಪೂರ್ವಜರ ಲಿಂಗದೇಹಗಳಿಂದ ತೊಂದರೆಯಾಗುವುದು

ಇಂದು ಯಾರೂ ಶ್ರಾದ್ಧಾದಿ ವಿಧಿ ಹಾಗೂ ಸಾಧನೆ ಮಾಡದಿರುವುದರಿಂದ ಹೆಚ್ಚಾಗಿ ಎಲ್ಲರಿಗೂ ಅತೃಪ್ತ ಪೂರ್ವಜರ ಲಿಂಗದೇಹಗಳಿಂದ ತೊಂದರೆಯಾಗುತ್ತದೆ. ನಮಗೆ ಪೂರ್ವಜರು ತೊಂದರೆ ಕೊಡುತ್ತಾರೆ ಅಥವಾ ಪೂರ್ವಜರಿಂದ ತೊಂದರೆಯಾಗುವ ಸಂಭವವಿದೆ, ಎಂದು ಉನ್ನತರೇ (ಸಂತರು) ಹೇಳಬಹುದು. ಉನ್ನತರು ಸಿಗದಿದ್ದರೆ ಮುಂದೆ ಕೊಟ್ಟಿರುವಂತಹ ತೊಂದರೆ ಪೂರ್ವಜರಿಂದ ಆಗಲು ಸಾಧ್ಯವಿದೆ ಎಂದು ತಿಳಿಯಬೇಕು. ಮನೆಯಲ್ಲಿ ನಿರಂತರ ಜಗಳ, ಪರಸ್ಪರರಲ್ಲಿ ಹೊಂದಾಣಿಕೆಯಾಗದಿರುವುದು, ನೌಕರಿ ಸಿಗದಿರುವುದು, ಮನೆ ಯಲ್ಲಿ ಹಣ ಹೆಚ್ಚು ಸಮಯ ಉಳಿಯದಿರುವುದು, ಒಬ್ಬರಿಗೆ ಗಂಭೀರ ಕಾಯಿಲೆ ಬರುವುದು, ಎಲ್ಲ ಪರಿಸ್ಥಿತಿ ಅನುಕೂಲವಿದ್ದರೂ ವಿವಾಹವಾಗದಿರುವುದು, ಪತಿ, ಪತ್ನಿಯರಲ್ಲಿ ಹೊಂದಾಣಿಕೆ ಯಾಗದಿರುವುದು, ಗರ್ಭಧಾರಣೆಯಾಗದಿರುವುದು, ಆದರೂ ಗರ್ಭಪಾತವಾಗುವುದು.

ಶ್ರಾದ್ಧವಿಧಿ ಮಾಡುವುದರಿಂದ ಪಿತೃರು ಸಂತುಷ್ಟರಾಗುತ್ತಾರೆ. ಅದರಿಂದ ಅವರ ಆಶೀರ್ವಾದ ಲಭಿಸುತ್ತದೆ ಹಾಗೂ ಮರ್ತ್ಯ ಲೋಕದಲ್ಲಿ ಸಿಲುಕಿರುವ ಪೂರ್ವಜರಿಗೆ ಗತಿ ಸಿಗುವುದರಿಂದ ಅವರಿಂದಾಗುವ ತೊಂದರೆಯ ನಿವಾರಣೆಯಾಗುತ್ತದೆ.

೧೨. ಶ್ರಾದ್ಧ ಮಾಡುವುದರಿಂದ ಪಿತೃರಿಗೆ ಗತಿ (ಮುಕ್ತಿ) ಸಿಗುತ್ತದೆ ಆದ್ದರಿಂದ ಅದನ್ನು ಸತತವಾಗಿ ಮಾಡುವುದು ಆವಶ್ಯಕವಾಗಿದೆ

ಮೃತ ವ್ಯಕ್ತಿಯ ತಿಥಿಯಂದು ಶ್ರಾದ್ಧವನ್ನು ಮಾಡುವುದರಿಂದ ಆ ಅನ್ನವು ಅದರ ಸೂಕ್ಷ್ಮ-ದೇಹಕ್ಕೆ ವರ್ಷವಿಡೀ ಸಾಕಾಗುತ್ತದೆ. ಎಲ್ಲಿಯವರೆಗೆ ಇಚ್ಛೆ-ಆಕಾಂಕ್ಷೆ ಇರುತ್ತದೆಯೋ, ಅಲ್ಲಿಯವರೆಗೆ ಆ ಮೃತ ವ್ಯಕ್ತಿ ಆ ತಿಥಿಗೆ ತನ್ನ ವಂಶಜರಿಂದ ಅನ್ನ ಸಿಗಬೇಕೆಂದು ಅಪೇಕ್ಷೆಯನ್ನಿಡುತ್ತದೆ. ಶ್ರಾದ್ಧ ಮಾಡುವುದರಿಂದ ಅದರ ಇಚ್ಛೆ ಪೂರ್ತಿಯಾಗುತ್ತದೆ, ಅದರೊಂದಿಗೆ ಅದಕ್ಕೆ ಮುಂದೆ ಹೋಗಲು ಇಂಧನವೂ ಸಿಗುತ್ತದೆ. ಪೂರ್ವಜರ ಯಾವುದೇ ಒಂದು ವಾಸನೆ ತೀವ್ರವಿದ್ದರೂ, ಶ್ರಾದ್ಧವಿಧಿಯ ಮೂಲಕ ಸಿಗುವ ಇಂಧನ ದಿಂದ ಅವರ ವಾಸನಾಪೂರ್ತಿ ಮಾತ್ರ ಆಗುವುದರಿಂದ ಪಿತೃರಿಗೆ ಮುಂದೆ ಹೋಗಲು ಗತಿ ಸಿಗುವುದಿಲ್ಲ. ಆದ್ದರಿಂದ ಸತತವಾಗಿ ಶ್ರಾದ್ಧ ಮಾಡುವುದರಿಂದ ಕ್ರಮೇಣ ಅವರ ವಾಸನೆ ಕಡಿಮೆಯಾಗಿ ಅದಕ್ಕೆ ಗತಿ ಪ್ರಾಪ್ತಿಯಾಗಬಹುದು. ಅದೇ ರೀತಿ ಶಾಸ್ತ್ರನಿಯಮದಂತೆ ನಾವು ಜೀವಂತವಿರುವ ತನಕ ಪಿತೃರಿಗೆ ಕೃತಜ್ಞತೆಯೆಂದು ಪ್ರತಿವರ್ಷ ಶ್ರಾದ್ಧ ಮಾಡುವುದೇ ಯೋಗ್ಯವಾಗಿದೆ.

೧೩. ‘ಪಿತೃರ ಆಧ್ಯಾತ್ಮಿಕ ಮಟ್ಟ ಶೇ. ೫೦ ರಷ್ಟಿದೆ’ ಎಂದು ತಿಳಿದಿದ್ದರೂ ಶ್ರಾದ್ಧಪಕ್ಷಾದಿ ವಿಧಿಗಳನ್ನು ಮಾಡುವುದರ ಕಾರಣಗಳು

ಅ. ಕಲಿಯುಗದಲ್ಲಿ ರಜ-ತಮದ ಹೆಚ್ಚಳದಿಂದಾಗಿ ಸಾಧನೆ ಮಾಡುವವರ ಪ್ರಮಾಣ ಕಡಿಮೆಯಿರುತ್ತದೆ. ಆದ್ದರಿಂದ ಅತೃಪ್ತ ಇಚ್ಛೆಯಿಂದ ಜೀವಕ್ಕೆ ಮುಂದಿನ ಗತಿ (ಮುಕ್ತಿ) ಸಿಗುವುದಿಲ್ಲ. ಅದೇ ರೀತಿ ಸಾಧನೆಯ ಬಲವಿಲ್ಲದ ಕಾರಣ ಜೀವವು ಮುಂದೆ ಹೋಗುವುದಿಲ್ಲ. ಶ್ರಾದ್ಧಪಕ್ಷಾದಿ ವಿಧಿಗಳನ್ನು ಮಾಡದಿದ್ದರೆ, ಪೂರ್ವಜರಿಗೆ ಗತಿ ಸಿಗುವುದಿಲ್ಲ. ಅದೇ ರೀತಿ ತೀರ್ಥಕ್ಷೇತ್ರದಲ್ಲಿ ಶ್ರಾದ್ಧ ಮಾಡಿದರೂ ಯಾವ ಪೂರ್ವಜರಿಗೆ ಗತಿ ಸಿಗುವ ಸಮಯ ಬಂದಿರುವುದೋ, ಅಷ್ಟೇ ಪೂರ್ವಜರಿಗೆ ಆಗ ಗತಿ ಸಿಗುತ್ತದೆ. ಅದರ ಹೊರತು ಇತರ ಪೂರ್ವಜರಿಗಾಗಿ ಪ್ರತಿವರ್ಷ ಶ್ರಾದ್ಧ ಮಾಡುವುದು ಆವಶ್ಯಕವಿರುತ್ತದೆ

ಆ. ಯಾವ ಪಿತೃರ ಮಟ್ಟ ಹೆಚ್ಚಿರುತ್ತದೆ, ಅವರಿಗೆ ಧರ್ಮಶಾಸ್ತ್ರದಲ್ಲಿ ಹೇಳಲಾಗಿಯೆಂದು ಹಾಗೂ ಸಮಾಜದೆದುರು ಧಾರ್ಮಿಕ ವಿಧಿಗಳ ಆದರ್ಶವನ್ನಿಡಲು ಶ್ರಾದ್ಧವನ್ನು ಮಾಡಬೇಕು; ಏಕೆಂದರೆ ಮಟ್ಟಕ್ಕಿಂತ ಧರ್ಮಪಾಲನೆ ಮಹತ್ವದ್ದಾಗಿರುತ್ತದೆ. ಪಿತೃರ ಮಟ್ಟವನ್ನು ಹೇಳುವವರು ಕೂಡ ಸಮಾಜದಲ್ಲಿರುವುದಿಲ್ಲ.

ಇ. ಕೆಲವು ಸಂತರು ಸಮಾಜದ ಮುಂದೆ ಆದರ್ಶವಿರಬೇಕೆಂದು ಸ್ವತಃ ದೇವರ ಪೂಜೆಯನ್ನು ಮಾಡುತ್ತಾರೆ. ಅವರಿಗೆ ಸ್ಥೂಲದಿಂದ ದೇವರ ಪೂಜೆಮಾಡುವ ಅವಶ್ಯಕತೆಯಿರುವುದಿಲ್ಲ, ಹಾಗೆಯೆ ಇದಾಗಿದೆ. ಈ ಮೇಲಿನ ಉತ್ತರಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲರೂ ಧರ್ಮಪಾಲನೆಯೆಂದು ಶ್ರಾದ್ಧಪಕ್ಷಾದಿ ವಿಧಿ ಮಾಡ ಬೇಕು.’

ಲೇಖಕ : ಯೋಗಾಚಾರ್ಯ ಕೃಷ್ಣಾಜಿ ಕೇಶವ ಕೊಲ್ಹಟಕರ್, ಪ್ರಕಾಶಕರು : ಆದಿತ್ಯ ಪ್ರತಿಷ್ಠಾನ, ೧೨, ಅಮಿತ ಕಾಂಪ್ಲೆಕ್ಸ್, ೪೭೪ ಬ, ಸದಾಶಿವಪೇಠ್, ನ್ಯೂ ಇಂಗ್ಲಿಷ್ ಸ್ಕೂಲ್ನ (ತಿಲಕ ಪಥ) ಎದುರಿಗೆ, ಪುಣೆ ೪೧೧೦೩೦