‘ಶ್ರಾದ್ಧವಿಧಿಯನ್ನು ಮಾಡುವಾಗ ಪಿತೃಗಳಿಗೆ ನೈವೇದ್ಯವನ್ನು ತೋರಿಸುವಾಗ ವಾತಾವರಣದಲ್ಲಿ ಲಿಂಗದೇಹಗಳು (ಆರ್ಬ್ಸ್) ಕಾಣಿಸುವ ಹಿಂದಿನ ವೈಜ್ಞಾನಿಕ ಕಾರಣವೇನು ? ಸಂಪೂರ್ಣ ವಿಧಿಯಲ್ಲಿ ಕಾಣಿಸದಿರುವ ಲಿಂಗದೇಹಗಳು ಕೇವಲ ಪಿಂಡದಾನ ಮಾಡುವಾಗ ಮತ್ತು ಪಿತೃಗಳಿಗೆ ನೈವೇದ್ಯವನ್ನು ತೋರಿಸುವಾಗಲೇ ಏಕೆ ಕಾಣಿಸುತ್ತವೆ ? ಈ ಸಂದರ್ಭದಲ್ಲಿ ಯಾವ ವೈಜ್ಞಾನಿಕ ಉಪಕರಣಗಳ ಮೂಲಕ ಸಂಶೋಧನೆ ಮಾಡಬಹುದು ?’ ಮುಂತಾದ ಬಗ್ಗೆ ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರ ಸಹಾಯ ಲಭಿಸಿದರೆ ನಾವು ಕೃತಜ್ಞರಾಗಿರುತ್ತೇವೆ.’ – ಮಹರ್ಷಿ ಅಧ್ಯಾತ್ಮವಿಶ್ವವಿದ್ಯಾಲಯ, ಗೋವಾ (ಸಂಪರ್ಕ : ಶ್ರೀ. ರೂಪೇಶ ಲಕ್ಷ್ಮಣ ರೇಡಕರ್, ವಿ-ಅಂಚೆ : [email protected] )
೧. ಪಿತೃಗಳಿಗೆ ನೈವೇದ್ಯವನ್ನು ತೋರಿಸುವಾಗ ತೆಗೆದ ಛಾಯಾಚಿತ್ರದಲ್ಲಿ ವಾತಾವರಣದಲ್ಲಿ ಅಕಸ್ಮಾತ್ ಅಸಂಖ್ಯಾತ ಲಿಂಗದೇಹಗಳು ಕಾಣಿಸತೊಡಗುವುದು
‘೨೩.೯.೨೦೧೪ ರಂದು ಎಸ್.ಎಸ್.ಆರ್.ಎಫ್.ನ ಆಸ್ಟ್ರೇಲಿಯಾದ ಸಾಧಕರಾದ ಶ್ರೀ. ಶಾನ್ ಕ್ಲಾರ್ಕ್ ಇವರು ತಮ್ಮ ಪಿತೃಗಳಿಗೆ ಗತಿ ಸಿಗಬೇಕೆಂದು, ಶ್ರಾದ್ಧವಿಧಿಯನ್ನು ಮಾಡಿದ್ದರು. ಶ್ರೀ. ಶಾನ್ ಇವರು ಮಾಡಿದ ಈ ಶ್ರಾದ್ಧದಲ್ಲಿ ಭೋಜನವನ್ನು ಬಡಿಸುವ ಮೊದಲು ತೆಗೆದ ಛಾಯಾಚಿತ್ರದಲ್ಲಿ ವಾತಾವರಣದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ, ಅಂದರೆ ತೀರಾ ಒಂದು-ಎರಡು ಲಿಂಗದೇಹಗಳು (ಆರ್ಬ್ಸ್) ಕಂಡು ಬಂದವು; ಆದರೆ ಪಿತೃಗಳಿಗೆ ನೈವೇದ್ಯ ತೋರಿಸುವಾಗ ತೆಗೆದ ಛಾಯಾಚಿತ್ರದಲ್ಲಿ ವಾತಾವರಣದಲ್ಲಿ ಅಕಸ್ಮಾತ್ತಾಗಿ ಅಸಂಖ್ಯಾತ ಲಿಂಗದೇಹಗಳು ಕಾಣಿಸತೊಡಗಿದವು. ಶ್ರಾದ್ಧವಿಧಿಯಲ್ಲಿ ಪಿತೃಗಳಿಗೆ ನೈವೇದ್ಯ ತೋರಿಸುವ ವಿಧಿಯು ಮುಗಿದ ನಂತರ ವಾತಾವರಣದಲ್ಲಿ ಲಿಂಗದೇಹಗಳು ಕಾಣಿಸಲಿಲ್ಲ.
೨. ಧರ್ಮಶಾಸ್ತ್ರಕ್ಕನುಸಾರ ಪಿತೃಪಕ್ಷದಲ್ಲಿ ಶ್ರಾದ್ಧವಿಧಿಯನ್ನು ಮಾಡುವುದರ ಮಹತ್ವ
ಶ್ರಾದ್ಧವಿಧಿಯಂತಹ ಕರ್ಮಗಳು ದೇವತೆಗಳ ಕನಿಷ್ಠ, ಅಂದರೆ ಪೃಥ್ವಿ ಮತ್ತು ಆಪ ಈ ಕನಿಷ್ಠ ತತ್ತ್ವಗಳಿಗೆ ಸಂಬಂಧಿಸಿರುತ್ತವೆ. ಆದ್ದರಿಂದ ಈ ಕಾಲಾವಧಿಯಲ್ಲಿ ನೈವೇದ್ಯವನ್ನು ತೋರಿಸುವ ಕರ್ಮವು ಹೆಚ್ಚಾಗಿ
ಭೂಮಿಗೆ ಅಂದರೆ ಪೃಥ್ವಿತತ್ತ್ವಕ್ಕೆ ಸಂಬಂಧಿಸಿರುವುದನ್ನು ತೋರಿಸುತ್ತದೆ. ಶ್ರಾದ್ಧದ ಅನ್ನದಿಂದ ಮಂತ್ರೋಚ್ಚಾರದಲ್ಲಿ ಪ್ರಕ್ಷೇಪಿತವಾಗುವ ತೇಜ ಲಹರಿಗಳು ಲಿಂಗದೇಹದ ವಾಸನಾಮಯಕೋಶದಲ್ಲಿನ ರಜ-ತಮ ಕಣಗಳ ಉಚ್ಚಾಟಿಸಲು ಸಹಾಯ ಮಾಡುತ್ತದೆ. ಲಿಂಗದೇಹದ ಜಡತ್ವವು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುವುದ ರಿಂದ ಅದಕ್ಕೆ ಹಗುರತನದ ಅರಿವಾಗಿ ಅದು ಮುಂದಿನ ಗತಿಯನ್ನು ಪ್ರಾಪ್ತಮಾಡಿಕೊಳ್ಳುತ್ತದೆ, ಈ ಮಹತ್ವದ ಉದ್ದೇಶವು ಸಾಧ್ಯವಾಗುತ್ತದೆ. ಪಿತೃಗಳು ಲಿಂಗ ದೇಹಗಳ ಸ್ವರೂಪದಲ್ಲಿ ಶ್ರಾದ್ಧದ ಸ್ಥಳಕ್ಕೆ ಬರುತ್ತಾರೆ ಮತ್ತು ‘ಆರ್ಬ್ಸ್ ಇದು ಅವರ ತೃಪ್ತಿಯಾಗಿರುವುದರ ಸೂಚಕವಾಗಿದೆ.) (ಹೆಚ್ಚಿನ ಮಾಹಿತಿಗಾಗಿ ಓದಿರಿ : ಸನಾತನದ ಗ್ರಂಥ ‘ ಶ್ರಾದ್ಧದ ಮಹತ್ವ ಮತ್ತು ಶಾಸ್ತ್ರೀಯ ವಿವೇಚನೆ’ ಮತ್ತು ‘ಶ್ರಾದ್ಧದಲ್ಲಿನ ಕೃತಿಗಳ ಹಿಂದಿನ ಅಧ್ಯಾತ್ಮಶಾಸ್ತ್ರ’)
೩. ಪಿತೃಪಕ್ಷದಲ್ಲಿ ಶ್ರಾದ್ಧವಿಧಿ ಮಾಡುವುದರ ಮಹತ್ವವನ್ನು ಹೇಳಿಯೂ ಆ ವಿಷಯದಲ್ಲಿ ಟೀಕೆ-ಟಿಪ್ಪಣಿಯನ್ನುಮಾಡುವ ನತದೃಷ್ಟ ಭಾರತೀಯರೇ, ಪಾಶ್ಚಾತ್ಯರಿಂದ ಕಲಿಯಿರಿ !
ವಾಸ್ತವದಲ್ಲಿ ಭಾರತವು ಇಡೀ ವಿಶ್ವಕ್ಕೇ ಅಮೂಲ್ಯವಾದಂತಹ ಅಧ್ಯಾತ್ಮದ ಕೊಡುಗೆಯನ್ನು ನೀಡಿದೆ. ಭಾರತೀಯ ಸಂಸ್ಕೃತಿಯು ಕೋಟ್ಯವಧಿ ಜನರಿಗೆ ಜೀವಿಸಲು ಮತ್ತು ಜೀವನದಲ್ಲಿನ ಆನಂದವನ್ನು ಪಡೆಯಲು ಕಲಿಸಿದೆ. ಇಂತಹ ವೈಭವಶಾಲಿ ಭಾರತಕ್ಕೆ ಪುನರ್ ವೈಭವ ದೊರಕಿಸಿ ಕೊಡಲು ಪ್ರಯತ್ನಗಳ ಪರಾಕಾಷ್ಠೆಯನ್ನು ಮಾಡುವ ಆವಶ್ಯಕತೆಯಿರುವಾಗ ಕೆಲವು ನತದೃಷ್ಟರು ಪಾಶ್ಚಾತ್ಯರ ಅಂಧಾನುಕರಣೆ ಮಾಡುವುದನ್ನು ಹೆಮ್ಮೆಯೆಂದು ತಿಳಿದಿದ್ದಾರೆ; ಆದರೆ ವಿದೇಶದ ಜನರು ಭಾರತಕ್ಕೆ ಬಂದು ಭಾರತೀಯ ಸಂಸ್ಕೃತಿ, ಇಲ್ಲಿನ ಆಚಾರಗಳನ್ನು ಕಲಿಯುತ್ತಾರೆ ಮತ್ತು ಅವುಗಳ ಆಚರಣೆಯನ್ನು ಮಾಡುತ್ತಾರೆ. ಇದರಿಂದ, ಭಾರತೀಯರು ಜ್ಞಾನ, ಸಮೃದ್ಧಿ ಹಾಗೂ ಸಂಪನ್ನತೆ ಇವುಗಳ ಆಳವಾದ ಸಾಗರದಲ್ಲಿದ್ದರೂ ಶುಷ್ಕವಾಗಿಯೇ ಇದ್ದಾರೆ ಎಂದು ಗಮನಕ್ಕೆ ಬರುತ್ತದೆ. ಧರ್ಮಶಾಸ್ತ್ರದಲ್ಲಿ, ಪಿತೃಪಕ್ಷದಲ್ಲಿ ಶ್ರಾದ್ಧವಿಧಿಯನ್ನು ಮಾಡುವ ಮಹತ್ವವನ್ನು ತಿಳಿಸಿದರೂ ಕೆಲವು ಜನರು ಆ ರೀತಿ ಮಾಡದೇ ಆ ವಿಷಯದಲ್ಲಿ ಟೀಕೆ-ಟಿಪ್ಪಣಿಯನ್ನು ಮಾಡುತ್ತಾರೆ. ಶ್ರೀ. ಶಾನ್ ಕ್ಲಾರ್ಕ್ ಇವರು ಮೂಲತಃ ವಿದೇಶದವರಾಗಿದ್ದರೂ ಅವರು ಹಿಂದೂಧರ್ಮಕ್ಕನುಸಾರ ಶ್ರಾದ್ಧವಿಧಿಯ ಮಹತ್ವವನ್ನು ತಿಳಿದುಕೊಂಡು ಶ್ರಾದ್ಧವಿಧಿಯನ್ನು ಮಾಡಿದರು. ಎಲ್ಲ ಹಿಂದೂಗಳು ಇದರಿಂದ ಕಲಿಯುವಂತಿದೆ.’ – ಕು. ಪ್ರಿಯಾಂಕಾ ವಿಜಯ ಲೋಟಲೀಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೯.೯.೨೦೧೫)