ಪಿತೃಪಕ್ಷದ ಕಾಲಾವಧಿಯಲ್ಲಿ ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದ ಕಡೆಗೆ ಅನೇಕ ಕಾಗೆಗಳು ಆಕರ್ಷಿತವಾಗುವುದು, ಇದು ಆಶ್ರಮವು ತೀರ್ಥಕ್ಷೇತ್ರ ಸಮಾನವಾಗಿರುವುದರಿಂದ ಇಲ್ಲಿಗೆ ಬಂದು ಪಿತೃಗಳು ತೃಪ್ತರಾದುದರ ದ್ಯೋತಕ !

ಕು. ಪ್ರಿಯಾಂಕಾ ಲೋಟಲೀಕರ

೧. ಲಿಂಗದೇಹ ಮತ್ತು ಮನುಷ್ಯರ ನಡುವಿನ ಮಾಧ್ಯಮವಾಗಿರುವುದು

ಶ್ರಾದ್ಧದಲ್ಲಿ ಪಿಂಡದಾನದ ಮಾಧ್ಯಮದಿಂದ ಪಿತೃಗಳನ್ನು ಆಹ್ವಾನಿಸುತ್ತಾರೆ. ಪಿತೃಗಳ ಅತೃಪ್ತ ಆಸೆಗಳನ್ನು ಪಿಂಡದ ಮೂಲಕ ಪೂರೈಸಲಾಗುತ್ತದೆ. ಪಿತೃಗಳ ಲಿಂಗದೇಹವು ಯಾವ ಸಮಯದಲ್ಲಿ ಪಿಂಡದ ಕಡೆಗೆ ಆಕರ್ಷಿತವಾಗುತ್ತದೆಯೋ ಆಗ ಅದು ರಜ-ತಮಾತ್ಮಕ ಲಹರಿಗಳಿಂದ ತುಂಬಿಕೊಂಡಿರುತ್ತದೆ. ಈ ಲಹರಿಗಳ ಕಡೆಗೆ ಕಾಗೆಯು ಆಕರ್ಷಿತವಾಗುತ್ತದೆ. ಪಿತೃಗಳು ಶ್ರಾದ್ಧದ ಜಾಗಕ್ಕೆ ಬಂದು ತೃಪ್ತವಾಗುವುದರ ಸೂಚನೆ ಎಂದರೆ ಪಿಂಡವನ್ನು ಕಾಗೆಯು ಮುಟ್ಟುವುದು. ಇದನ್ನೇ ‘ಕಾಗೆಯು ತುತ್ತು ತಿನ್ನುವುದು ಎಂದು ಹೇಳುತ್ತಾರೆ. ಆದುದರಿಂದ ಕಾಗೆಯು ಲಿಂಗದೇಹ ಮತ್ತು ಮನುಷ್ಯರ ನಡುವಿನ ಒಂದು ಮಾಧ್ಯಮವಾಗಿದೆ.

೨. ಪಿತೃಪಕ್ಷದಲ್ಲಿ ಆಶ್ರಮದಲ್ಲಿ ಶ್ರಾದ್ಧವಿಧಿಯು ನಡೆದಿರುವಾಗ ಅನೇಕ ಕಾಗೆಗಳು ಆಶ್ರಮದ ಪರಿಸರದ ಕಡೆಗೆ ಆಕರ್ಷಿತವಾಗುವುದು

ಸನಾತನದ ಆಶ್ರಮದಲ್ಲಿದ್ದು ಪೂರ್ಣವೇಳೆ ಸಾಧನೆಯನ್ನು ಮಾಡುವ ಸಾಧಕರ ಪಿತೃಗಳಿಗಾಗಿ ಕಳೆದ ಎರಡು ವರ್ಷಗಳಿಂದ ಶ್ರಾದ್ಧವಿಧಿಯನ್ನು ಮಾಡಲಾಗುತ್ತದೆ. ರಾಮನಾಥಿ (ಗೋವಾ) ಯಲ್ಲಿನ ಸನಾತನದ ಆಶ್ರಮದಲ್ಲಿ ೨೧ ರಿಂದ ೨೪ ಸೆಪ್ಟೆಂಬರ್ ೨೦೧೬ ಈ ಕಾಲಾವಧಿಯಲ್ಲಿ ಶ್ರಾದ್ಧವಿಧಿಯು ಪೂರ್ಣಗೊಂಡ ನಂತರ ಪ್ರತಿದಿನ ಆಶ್ರಮದ ಪರಿಸರದಲ್ಲಿ ಬಹಳಷ್ಟು ಕಾಗೆಗಳು ಬರುತ್ತಿರುವುದು ಕಾಣಿಸುತ್ತಿತ್ತು. ಇಲ್ಲಿ ಕೊಡಲಾದ ಛಾಯಾಚಿತ್ರಗಳಲ್ಲಿ, ಆಶ್ರಮದ ಪಕ್ಕದಲ್ಲಿರುವ ತಂತಿಗಳ ಮೇಲೆ ಈ ಎಲ್ಲ ಕಾಗೆಗಳು ಆಶ್ರಮದ ದಿಕ್ಕಿಗೆ ಮುಖ ಮಾಡಿ ಸಾಲಾಗಿ ಕುಳಿತ್ತಿದ್ದವು.

೩. ಸನಾತನದ ಆಶ್ರಮವು ತೀರ್ಥಕ್ಷೇತ್ರಸಮಾನ ಚೈತನ್ಯಮಯವಾದುದರಿಂದ ಸಾಧಕರಿಗೆ ಇತರ ತೀರ್ಥಕ್ಷೇತ್ರಗಳಿಗೆ ಹೋಗುವ ಆವಶ್ಯಕತೆ ಇಲ್ಲದಿರುವುದು

ಆಶ್ರಮದ ವಿದ್ಯುತ್ ತಂತಿಯ ಮೇಲೆ ಕುಳಿತಿರುವ ಕಾಗೆಗಳು. (ಅದನ್ನು ಗೋಲಾಕಾರದಲ್ಲಿ ದೊಡ್ಡದಾಗಿ ತೋರಿಸಲಾಗಿದೆ)

ಪೂರ್ವಜರಿಗೆ ಸದ್ಗತಿ ಸಿಗಬೇಕು ಮತ್ತು ಪೂರ್ವಜರಿಂದಾಗಿ ವ್ಯಾವಹಾರಿಕ, ಹಾಗೆಯೇ ಆಧ್ಯಾತ್ಮಿಕ ಉನ್ನತಿಯಲ್ಲಿ ಬರುವ ಅಡಚಣೆಗಳಿಗೆ ಪರಿಹಾರ ಸಿಗಬೇಕೆಂದು ಕೆಲವು ಜನರು ನಾರಾಯಣಬಲಿ, ನಾಗಬಲಿ, ತ್ರಿಪಿಂಡಿ ಶ್ರಾದ್ಧ ಇವುಗಳಂತಹ ವಿಧಿಗಳಿಗಾಗಿ ಗೋಕರ್ಣ ಮಹಾಬಲೇಶ್ವರ (ಕರ್ನಾಟಕ), ಗರುಡೇಶ್ವರ (ಗುಜರಾತ), ಹರಿಹರೇಶ್ವರ (ದಕ್ಷಿಣ ಕಾಶಿ), ಕಾಶಿ (ವಾರಣಾಸಿ), ತ್ರ್ಯಂಬಕೇಶ್ವರ ಇತ್ಯಾದಿ ತೀರ್ಥಕ್ಷೇತ್ರಗಳ ಸ್ಥಳಗಳಿಗೆ ಹೋಗಿ ಶ್ರಾದ್ಧವಿಧಿಯನ್ನು ಮಾಡುತ್ತಾರೆ. ಇದರಿಂದ ಹೆಚ್ಚು ಲಾಭವಾಗುತ್ತದೆ; ಆದರೆ ಪಿತೃ ಪಕ್ಷವು ಆರಂಭವಾದಾಗಿನಿಂದ ಸನಾತನದ ರಾಮನಾಥಿ ಆಶ್ರಮಕ್ಕೆ ಕಾಗೆಗಳು ಬರುವ ಪ್ರಮಾಣದಲ್ಲಿ ಹೆಚ್ಚಳವಾಗಿದೆ; ಅಂದರೆ ಅನೇಕರ ಪಿತೃಗಳು ತೃಪ್ತರಾಗಲು, ಹಾಗೆಯೇ ಮುಂದಿನ ಗತಿಯನ್ನು ಪ್ತಾಪ್ತ ಮಾಡಿಕೊಳ್ಳಲು ಆಶ್ರಮಕ್ಕೆ ಬರುವುದರ ಇದು ಸೂಚಕವಾಗಿದೆ. ಇದರಿಂದಲೇ ಸನಾತನದ ಆಶ್ರಮವೆಂದರೆ ತೀರ್ಥಕ್ಷೇತ್ರವಾಗಿರುವ ಬಗ್ಗೆ ಅನುಭೂತಿಯು ಬರುತ್ತದೆ. ಯೋಗತಜ್ಞ ದಾದಾಜಿ ವೈಶಂಪಾಯನ ಮತ್ತು ಇತರ ಅನೇಕ ಸಂತರು ಸನಾತನದ ಸಾಧಕರು ಪ್ರಯಾಗ, ಕಾಶಿ ಅಥವಾ ಇತರ ತೀರ್ಥಕ್ಷೇತ್ರಗಳ ಸ್ಥಳಗಳಿಗೆ ಹೋಗುವ ಆವಶ್ಯಕತೆ ಇಲ್ಲ; ಏಕೆಂದರೆ ಅವರಿಗೆ ಆಶ್ರಮದಲ್ಲಿಯೇ ಎಲ್ಲ ಚೈತನ್ಯವು ಸಿಗುತ್ತದೆ’, ಎಂದು ಹೇಳಿದ್ದಾರೆ. – ಕು. ಪ್ರಿಯಾಂಕಾ ಲೋಟಲೀಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೬.೯.೨೦೧೬)