ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ ಮತ್ತು ಸಾಧಕರಿಗೆ ಮಹತ್ವದ ಸೂಚನೆ !
೧. ಪಿಂಡದಾನ ಮಾಡಿ ಶ್ರಾದ್ಧ ಮಾಡುವುದು : ‘ಭಾದ್ರಪದ ಕೃಷ್ಣ ಪಕ್ಷ ಪ್ರತಿಪದೆಯಿಂದ ಭಾದ್ರಪದ ಅಮಾವಾಸ್ಯೆ (೧೮ ಸೆಪ್ಟೆಂಬರ್ ದಿಂದ ೨ ಅಕ್ಟೋಬರ್ ೨೦೨೪) ಈ ಅವಧಿಯಲ್ಲಿ ಪಿತೃಪಕ್ಷವಿದೆ. ಈ ಅವಧಿಯಲ್ಲಿ ಕುಲದ ಎಲ್ಲ ಪಿತೃಗಳು ಅನ್ನ (ಆಹಾರ) ಮತ್ತು ಉದಕ (ನೀರು) ಇವುಗಳ ಅಪೇಕ್ಷೆಯಿಟ್ಟು ತಮ್ಮ ವಂಶಜರ ಬಳಿಗೆ ಬರುತ್ತಾರೆ. ಪಿತೃಪಕ್ಷದಲ್ಲಿ ಪಿತೃಲೋಕವು ಭೂಮಿಯ ಅತ್ಯಧಿಕ ಹತ್ತಿರ ಬರುವುದರಿಂದ ಪಿತೃಗಳಿಗೆ ನೀಡಿದ ಅನ್ನ, ನೀರು ಮತ್ತು ಪಿಂಡದಾನವು ಅವರಿಗೆ ಬೇಗನೇ ತಲುಪುತ್ತದೆ. ಆದುದರಿಂದ ಅವರು ತೃಪ್ತರಾಗುತ್ತಾರೆ ಮತ್ತು ಕುಟುಂಬದವರಿಗೆ ಆಶೀರ್ವಾದ ನೀಡುತ್ತಾರೆ. ಶ್ರಾದ್ಧವಿಧಿಯನ್ನು ಮಾಡುವುದರಿಂದ ಪಿತೃದೋಷದಿಂದ ಸಾಧನೆಯಲ್ಲಿ ಬರುವ ಅಡಚಣೆಗಳು ದೂರವಾಗಿ ಸಾಧನೆಗೆ ಸಹಾಯವಾಗುತ್ತದೆ. ‘ಎಲ್ಲ ಪಿತೃಗಳು ತೃಪ್ತರಾಗಬೇಕು ಮತ್ತು ಸಾಧನೆಗೆ ಅವರ ಆಶೀರ್ವಾದ ದೊರಕಬೇಕು’, ಎಂಬುದಕ್ಕಾಗಿ ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಅವಶ್ಯ ಮಾಡಬೇಕು.
೨. ಆಮಾನ್ನ ಶ್ರಾದ್ಧ : ಕೆಲವು ಕಾರಣಗಳಿಂದ ಪೂರ್ಣ ಶ್ರಾದ್ಧವಿಧಿಯನ್ನು ಮಾಡುವುದು ಸಾಧ್ಯವಾಗದಿದ್ದರೆ ಸಂಕಲ್ಪಪೂರ್ವಕ ‘ಆಮಾನ್ನ ಶ್ರಾದ್ಧ’ವನ್ನು ಮಾಡಬೇಕು. ಆಮಾನ್ಯ ಶ್ರಾದ್ಧವೆಂದರೆ ನಮ್ಮ ಕ್ಷಮತೆಗನುಸಾರ ಧಾನ್ಯ, ಅಕ್ಕಿ, ಎಳ್ಳು, ತುಪ್ಪ, ಬೆಲ್ಲ, ಬಟಾಟೆ, ತೆಂಗಿನಕಾಯಿ, ಎಲೆಅಡಿಕೆ, ದಕ್ಷಿಣೆ ಇತ್ಯಾದಿ ಸಾಮಗ್ರಿಗಳನ್ನು ಯಾರಾದರೊಬ್ಬ ಪುರೋಹಿತರಿಗೆ ಕೊಡಬೇಕು. ಪುರೋಹಿತರು ಸಿಗದಿದ್ದಲ್ಲಿ ವೇದಪಾಠಶಾಲೆ ಅಥವಾ ದೇವಸ್ಥಾನಗಳಿಗೆ ದಾನ ನೀಡಬೇಕು.
೩. ಹಿರಣ್ಯ ಶ್ರಾದ್ಧ : ‘ಆಮಾನ್ನ ಶ್ರಾದ್ಧ’ವು ಸಾಧ್ಯವಾಗದಿದ್ದರೆ ಸಂಕಲ್ಪಪೂರ್ವಕ ‘ಹಿರಣ್ಯ ಶ್ರಾದ್ಧ’ವನ್ನು ಮಾಡಬೇಕು. ಹಿರಣ್ಯ ಶ್ರಾದ್ಧವೆಂದರೆ ನಮ್ಮ ಕ್ಷಮತೆಗನುಸಾರ ಮೇಲಿನ ಅಂಶದಲ್ಲಿ ಹೇಳಿದಂತಹವುಗಳ ಪೈಕಿ ಒಂದು ಸ್ಥಳದಲ್ಲಿ ಹಣವನ್ನು ಅರ್ಪಿಸಬೇಕು.
೪. ಶ್ರಾದ್ಧವಿಧಿಯಲ್ಲಿ ಮಾಡಬೇಕಾದಂತಹ ಪ್ರಾರ್ಥನೆ ! :
‘ಹೇ ದತ್ತಾತ್ರೆಯಾ, ತಮ್ಮ ಕೃಪೆಯಿಂದ ನಮಗೆ ದೊರಕಿದ ಸ್ಥಿತಿಯಲ್ಲಿ ಆಮಾನ್ನ ಶ್ರಾದ್ಧ/ಹಿರಣ್ಯ ಶ್ರಾದ್ಧವನ್ನು (ಯಾವ ಶ್ರಾದ್ಧವನ್ನು ಮಾಡಿರುವೆವೋ, ಅದರ ಉಲ್ಲೇಖ ಮಾಡಬೇಕು) ಮಾಡಿದ್ದೇವೆ. ಇದರ ಮೂಲಕ ಪಿತೃಗಳಿಗೆ ಅನ್ನ ಮತ್ತು ನೀರು ದೊರಕಲಿ. ಈ ದಾನದಿಂದ ಎಲ್ಲ ಪಿತೃಗಳು ತೃಪ್ತರಾಗಲಿ. ನಮ್ಮ ಮೇಲೆ ಅವರ ಕೃಪಾದೃಷ್ಟಿ ಇರಲಿ. ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಅವರ ಆಶೀರ್ವಾದ ಪ್ರಾಪ್ತವಾಗಲಿ. ತಮ್ಮ ಕೃಪೆಯಿಂದ ಅವರಿಗೆ ಮುಂದಿನ ಗತಿ ಪ್ರಾಪ್ತವಾಗಲಿ’, ಇದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ.
– ಸನಾತನ ಪುರೋಹಿತ ಪಾಠಶಾಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೮.೨೦೨೪)