ಹಿಂದೂಗಳು ಇದರಿಂದ ಏನಾದರೂ ಕಲಿಯುವರೇ ?

೧. ಹಿಂದೂಗಳು ಇದರಿಂದ ಏನಾದರೂ ಕಲಿಯುವರೇ ?

ಇಂಗ್ಲೆಂಡಿನ ಕ್ರಿಕೇಟ್ ಆಟಗಾರ ಮೊಯಿನ್ ಅಲೀ ಐಪಿಎಲ್ ಕ್ರಿಕೆಟ್ ಸ್ಪರ್ಧೆಯಲ್ಲಿ ಚೆನ್ನೈ ಸೂಪರಕಿಂಗ್ಸ್ ತಂಡದ ಪರವಾಗಿ ಆಡುತ್ತಾರೆ. ಈ ತಂಡದ ಟಿ-ಶರ್ಟ್ ಮೇಲೆ ಒಂದು ಸರಾಯಿ ಕಂಪನಿಯ ಲೋಗೋ ಇದ್ದುದರಿಂದ ಮೊಯಿನ್ ಅಲೀ ಇವರು ಅದನ್ನು ತೆಗೆಯುವಂತೆ ಆಗ್ರಹಿಸಿದಾಗ ಆ ಲೋಗೋವನ್ನು ತೆಗೆಯಲಾಯಿತು.

೨. ಪೊಲೀಸರಿಗೆ ಗೋಕಳ್ಳಸಾಗಾಣಿಕೆಯು ಕಾಣಿಸುವುದಿಲ್ಲವೇ ?

ಆಗ್ರಾದ ರಾಯಭಾ ಎಂಬ ಪ್ರದೇಶದಲ್ಲಿ ಹಿಂದೂ ಮಹಾಸಭೆಯ ಜಿಲ್ಲಾಧ್ಯಕ್ಷ ರೌನಕ ಠಾಕೂರರು ಗೋಕಳ್ಳಸಾಗಾಣಿಕೆಯನ್ನು ತಡೆಯಲು ಹೋಗಿದ್ದಾಗ ಅವರ ಮೇಲೆ ಮತಾಂಧರು ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡರು.

೩. ಅಂತಹವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಿ !

‘ಸಂಬಳ ಪಡೆಯುವ ಸಿಬ್ಬಂದಿಗಳು ಕೆಲಸದ ಸಮಯದಲ್ಲಿ ಮೃತಪಟ್ಟರೆ, ಅವರಿಗೆ ‘ಹುತಾತ್ಮ ಎಂದು ಹೇಗೆ ಕರೆಯಲು ಸಾಧ್ಯ ? ಎಂದು ಲೇಖಕಿ ಶೀಖಾ ಸರಮಾ ಇವರು ಫೇಸಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್‌ನ್ನು ಮಾಡಿದ ಪ್ರಕರಣದಲ್ಲಿ ಅಸ್ಸಾಮ ಪೊಲೀಸರು ದೇಶದ್ರೋಹದ ಅಪರಾಧದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿದ್ದಾರೆ.

೪. ಈಗ ಸತ್ಯವು ಬೆಳಕಿಗೆ ಬರುವುದು !

ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದ ಭೂಮಿಯಲ್ಲಿರುವ ಜ್ಞಾನವಾಪಿ ಮಸೀದಿಯ ಅತಿಕ್ರಮಣದ ಪ್ರಕರಣದಲ್ಲಿ ಪುರಾತತ್ತ್ವ ಇಲಾಖೆಗೆ ಸಮೀಕ್ಷೆ ಮತ್ತು ಉತ್ಖನನ ಮಾಡಲು ವಾರಾಣಸಿ ತ್ವರಿತಗತಿ ನ್ಯಾಯಾಲಯವು ಅನುಮತಿ ನೀಡಿದೆ.

೫. ಚಾರಧಾಮಗಳಷ್ಟೇ ಅಲ್ಲ, ದೇಶದಾದ್ಯಂತ ಎಲ್ಲ ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸುವುದು ಆವಶ್ಯಕ !

ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ತೀರಥಸಿಂಹ ರಾವತ ಇವರು ಬದ್ರೀನಾಥ, ಕೇದಾರನಾಥ, ಯಮುನೋತ್ರಿ ಮತ್ತು ಗಂಗೋತ್ರಿ ಈ ಚಾರಧಾಮಗಳ ಸಹಿತ ೫೧ ದೊಡ್ಡ ದೇವಸ್ಥಾನಗಳನ್ನು ದೇವಸ್ಥಾನ ಆಡಳಿತ ಮಂಡಳಿಯ ಹಿಡಿತದಿಂದ ಅಂದರೆ ಸರಕಾರೀಕರಣದಿಂದ ಶೀಘ್ರದಲ್ಲಿಯೇ ಮುಕ್ತಗೊಳಿಸಲಾಗುವುದು, ಎಂದು ಸಾಧು-ಸಂತರಿಗೆ ಭರವಸೆ ನೀಡಿದರು.

೬. ದೇವಸ್ಥಾನಗಳ ಭೂಮಿಯನ್ನು ಅತಿಕ್ರಮಣದಿಂದ ಮುಕ್ತಗೊಳಿಸಿ !

ರಾಜಸ್ಥಾನದ ಮಹವಾದಲ್ಲಿ ಭೂಮಾಫಿಯಾದವರು ದೇವಸ್ಥಾನದ ಭೂಮಿಯ ಮೇಲೆ ಅತಿಕ್ರಮಣ ಮಾಡಿದ್ದರು. ಇದರಿಂದ ನಿರಾಶರಾಗಿದ್ದ ಅರ್ಚಕ ಶಂಭೂ ಶರ್ಮಾರವರು ನಿಧನರಾಗಿದ್ದರು. ಹಾಗಾಗಿ ‘ಭೂಮಾಫಿಯಾಗಳ ಮೇಲೆ ಕ್ರಮಕೈಗೊಳ್ಳುವ ತನಕ ಮೃತದೇಹದ ಮೇಲೆ ಅಂತಿಮಸಂಸ್ಕಾರ ಮಾಡುವುದಿಲ್ಲ, ಎಂದು ಹೇಳಿ ಕಳೆದ ೭ ದಿನಗಳಿಂದ ಆಂದೋಲನ ನಡೆಯುತ್ತಿದೆ. (೧೧.೪.೨೦೨೧)

೭. ಇಂತಹವರ ಮೇಲೆ ಉಗ್ರಕ್ರಮ ಕೈಗೊಳ್ಳಬೇಕು !

ಉತ್ತರಪ್ರದೇಶದ ಡಾಸನಾ ದೇವಿ ದೇವಸ್ಥಾನದ ಮಹಂತ ಯತಿ ನರಸಿಂಹಾನಂದ ಸರಸ್ವತಿಯವರು ಮಹಮ್ಮದ್ ಪೈಗಂಬರ ಇವರು ಕುರಿತು ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದಾರೆಂದು ಆರೋಪಿಸಿ ಬರೇಲಿಯಲ್ಲಿ ಶುಕ್ರವಾರದ ನಮಾಜಿನ ನಂತರ ಸಾವಿರಾರು ಮುಸಲ್ಮಾನರು ಅವರ ಶಿರಚ್ಛೇದ ಮಾಡಬೇಕೆಂದು ಆಗ್ರಹಿಸಿದ್ದಾರೆ.