ಇಂತಹವರಿಗೆ ಸೆರೆಮನೆಗೆ ತಳ್ಳಿ !

೧. ಇಂತಹವರಿಗೆ ಸೆರೆಮನೆಗೆ ತಳ್ಳಿ !

ಇಂದಿನ ಹಿಂದೂ ಸಮಾಜವು ಪೂರ್ಣವಾಗಿ ಕೊಳೆತ್ತಿದ್ದು ಭಾರತದಲ್ಲಿ ಮುಸಲ್ಮಾನರ ಮೇಲೆ ಅನ್ಯಾಯವಾಗುತ್ತಿದೆ, ಎಂದು ಅಲೀಗಡ ಮುಸ್ಲೀಮ ವಿದ್ಯಾ ಪೀಠದ ವಿದ್ಯಾರ್ಥಿ ಶರಜೀಲ ಉಸ್ಮಾನಿ ಇವನು ಪುಣೆಯ ಎಲ್ಗಾರ ಪರಿಷತ್ತಿನಲ್ಲಿ ವಿಷ ಕಕ್ಕಿದನು.

೨. ಕಾಂಗ್ರೆಸ್ಸಿನ ಗೂಂಡಾಗಿರಿಯನ್ನು ತಿಳಿಯಿರಿ !

ಜಲಾಲಾಬಾದ(ಪಂಜಾಬ) ದಲ್ಲಿ ಚುನಾವಣೆಯ ಅರ್ಜಿಯನ್ನು ಸಲ್ಲಿಸುವಾಗ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲೀ ದಳ ಇವರ ಕಾರ್ಯಕರ್ತರ ನಡುವೆ ತೀವ್ರ ಕಲ್ಲು ತೂರಾಟ ನಡೆಯಿತು. ಆ ಸಮಯದಲ್ಲಿ ಅಕಾಲೀ ದಳದ ಅಧ್ಯಕ್ಷ ಸುಖಬೀರಸಿಂಹ ಬಾದಲ ಇವರ ವಾಹನದ ಮೇಲೆ ಕಲ್ಲು ತೂರಾಟ ಮಾಡಲಾಯಿತು.

೩. ಮೊದಲಿಗೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂತಿರುಗಿಸಿ !

ಜಮ್ಮೂ-ಕಾಶ್ಮೀರದ ಜನತೆಯ ಆಸೆ-ಆಕಾಂಕ್ಷೆಗಳನ್ನು ಗಮನದಲ್ಲಿಟ್ಟು ಗೌರವದಿಂದ ಮತ್ತು ಶಾಂತಿಯ ಮಾರ್ಗದಿಂದ ಕಾಶ್ಮೀರ ಸಮಸ್ಯೆ ಬಗೆಹರಿಸಬೇಕು, ಎಂದು ಪಾಕ್‌ನ ಸೇನಾ ಮುಖ್ಯಸ್ಥ ಜನರಲ್ ಕಮರ ಜಾವೇದ ಬಾಜವಾ ಇವರು ಹೇಳಿದ್ದಾರೆ.

೪. ಜನತೆಯ ಭದ್ರತೆ ಅಪಾಯದಲ್ಲಿ !

ಭಾರತದಲ್ಲಿ ೧ ಲಕ್ಷ ಜನಸಂಖ್ಯೆಗಾಗಿ ಕೇವಲ ೧೫೬ ಪೊಲೀಸರು ಇದ್ದಾರೆ. ಅಂದರೆ ದೇಶದಲ್ಲಿ ೬೪೧ ವ್ಯಕ್ತಿಗಳ ಭದ್ರತೆಯನ್ನು ಕೇವಲ ೧ ಪೊಲೀಸ್ ಸಿಬ್ಬಂದಿ ಮಾಡುತ್ತಿದ್ದಾನೆ, ಎಂಬ ಮಾಹಿತಿಯು ‘ಇಂಡಿಯಾ ಜಸ್ಟಿಸ್ ರಿಪೋರ್ಟ್ ೨೦೨೦ ರಲ್ಲಿ ನಮೂದಾಗಿದೆ.

೫. ವಿದೇಶಿಯರಿಗೆ ಈ ಧೈರ್ಯ ಎಲ್ಲಿಂದ ಬರುತ್ತದೆ ?

ಸ್ವೀಡನ್ನಿನ ಪರಿಸರವಾದಿ ಗ್ರೇಟಾ ಥನಬರ್ಗ ಇವಳು ಭಾರತದಲ್ಲಿನ ರೈತ ಆಂದೋಲನವನ್ನು ಬೆಂಬಲಿಸಿ ಟ್ವೀಟ್ ಮಾಡಿ ಒಂದು ಲೇಖನವನ್ನು (ಟೂಲ್ ಕಿಟ್) ಪೋಸ್ಟ್ ಮಾಡಿದ್ದಳು. ಈ ಟೂಲ್‌ಕಿಟ್ ಎಂದರೆ ಆಂದೋಲನದಲ್ಲಿ ವಿವಿಧ ರೀತಿಯ ಕೃತಿಗಳನ್ನು ಮಾಡುವ ಬಗ್ಗೆ ಮಾರ್ಗದರ್ಶಕ ಅಂಶಗಳ ಪಟ್ಟಿ ಇದೆ.

೬. ಇಂತಹ ಮದರಸಾಗಳನ್ನು ನಿಷೇಧಿಸಬೇಕು !

ಉತ್ತರಪ್ರದೇಶದಲ್ಲಿ ಮದರಸಾಗಳ ಹೆಸರಿನಲ್ಲಿ ಸರಕಾರಿ ನಿಧಿಯನ್ನು ಲೂಟಿಗೈದ ಪ್ರಕರಣ ಬೆಳಕಿಗೆ ಬಂದಿದೆ. ಹಾಗೆಯೇ ಕೆಲವು ಕಡೆಗಳಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಭ್ರಷ್ಟಾಚಾರವಾಗಿದೆ. ಸರಕಾರ ವಿಶೇಷ ತನಿಖಾ ಪಡೆಯ ಮೂಲಕ ಇವರ ವಿಚಾರಣೆ ಮಾಡುವ ಆದೇಶವನ್ನು ನೀಡಿದೆ.

೭. ಸಾಮ್ಯವಾದಿಗಳ ಸಂವಿಧಾನದ್ರೋಹ ಮತ್ತು ಹಿಂದೂದ್ವೇಷವನ್ನು ತಿಳಿಯಿರಿ

ಹಿಂದೂ ಐಕ್ಯ ವೇದಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಆರ್.ವಿ. ಬಾಬೂ ಇವರು  ‘ಹಲಾಲ್ ಪ್ರಮಾಣಿಕೃತ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಹಿಂದೂಗಳಿಗೆ ಕರೆ ನೀಡಿದ್ದರು. ಅದಕ್ಕಾಗಿ ಕೇರಳದ ಸಾಮ್ಯವಾದಿ ಸರಕಾರದ ಪೊಲೀಸರು ಅವರನ್ನು ಬಂಧಿಸಿದ್ದಾರೆ.