ಇಂತಹವರಿಗೆ ಗಲ್ಲು ಶಿಕ್ಷೆಯಾಗುವಂತಹ ಕಾನೂನು ರೂಪಿಸಿ !

೧. ಇಂತಹವರಿಗೆ ಗಲ್ಲು ಶಿಕ್ಷೆಯಾಗುವಂತಹ ಕಾನೂನು ರೂಪಿಸಿ !

ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಸಂಸದ ಮತ್ತು ಕೋಲಕಾತಾ ಉಚ್ಚ ನ್ಯಾಯಾಲಯದ ನ್ಯಾಯವಾದಿ ಕಲ್ಯಾಣ ಬ್ಯಾನರ್ಜಿಯವರು ದೇವಿ ಸೀತಾಮಾತೆಗೆ ಅವಮಾನಿಸಿದ್ದರಿಂದಾಗಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ.

೨. ಕೇಂದ್ರ ಸರಕಾರವು ಖಾಲಿಸ್ತಾನಿಗಳ ಮೇಲೆ ಕ್ರಮ ಕೈಗೊಳ್ಳಬೇಕು !

ರೈತರ ಆಂದೋಲನದ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲಿನ ಆಲಿಕೆಯ ಸಮಯದಲ್ಲಿ ಈ ಆಂದೋಲನದಲ್ಲಿ ಖಾಲಿಸ್ತಾನಿಗಳು ನುಸುಳಿದ್ದಾರೆ, ಈ ಕುರಿತು ಗುಪ್ತಚರ ಇಲಾಖೆಯ ವರದಿಯನ್ನು ಸಲ್ಲಿಸುತ್ತೇವೆ ಎಂದು ಕೇಂದ್ರ ಸರಕಾರ ಹೇಳಿದೆ.

೩. ಕಾಂಗ್ರೆಸ್ಸಿಗರಿಂದ ಇನ್ನೇನು ಅಪೇಕ್ಷಿಸಬಹುದು ?

‘ನಥುರಾಮ ಗೋಡಸೆ ಭಾರತದ ಮೊದಲ ಉಗ್ರವಾದಿ, ಎಂದು ದಿಗ್ವಿಜಯ ಸಿಂಗ್ ಹೇಳಿದ್ದರು. ಅದಕ್ಕೆ ತಿರುಗೇಟು ನೀಡಿದ ಭಾಜಪದ ಸಂಸದೆ ಸಾಧ್ವಿ ಪ್ರಜ್ಞಾಸಿಂಹರವರು ‘ದೇಶಭಕ್ತರ ಅವಮಾನ ಮಾಡುವುದನ್ನಷ್ಟೇ ಕಾಂಗ್ರೆಸ್ ಕಲಿತಿದೆ, ಎಂದಿದ್ದಾರೆ.

೪. ಇತಿಹಾಸದ ಇಸ್ಲಾಮೀಕರಣವು ಯಾವಾಗ ನಿಲ್ಲುತ್ತದೆ ?

ಎನ್.ಸಿ.ಈ.ಆರ್.ಟಿ. ಯ ೧೨ ನೇ ತರಗತಿಯ ಇತಿಹಾಸದ ಪುಸ್ತಕದಲ್ಲಿ ‘ಮೊಘಲ ಆಕ್ರಮಕರು ಕೆಡವಿದ ದೇವಸ್ಥಾನಗಳನ್ನು ನಂತರ ಅವರು ದುರುಸ್ತಿ ಮಾಡಿದರು, ಎಂದು ಉಲ್ಲೇಖಿಸಲಾಗಿದೆ; ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷಿ ಆಧಾರಗಳು ಎನ್.ಸಿ.ಈ. ಆರ್.ಟಿ.ಯ ಬಳಿ ಇಲ್ಲ ಎಂಬುದು ಬೆಳಕಿಗೆ ಬಂದಿದೆ.

೫. ಇಂತಹ ವೆಬ್ ಸಿರೀಸ್‌ಗಳನ್ನು ಸರಕಾರ ಯಾವಾಗ ತಡೆಯಲಿದೆ ?

‘ಅಮೇಝಾನ್ ಪ್ರೈಮ್ ಈ ‘ಓಟಿಟಿ ಆಪ್‌ನಲ್ಲಿ ಜನವರಿ ೧೫ ರಿಂದ ಆರಂಭವಾಗಿದ್ದ ‘ತಾಂಡವ ವೆಬ್ ಸಿರೀಸ್‌ನಲ್ಲಿ ಭಗವಾನ ಶಿವನನ್ನು ಅವಮಾನಿಸಲಾಗಿದೆ. ಇದರಲ್ಲಿ ಜೆ.ಎನ್.ಯೂ. ವಿಶ್ವವಿದ್ಯಾಲಯದಲ್ಲಿ ಸಾಮ್ಯವಾದಿ ವಿಚಾರಸರಣಿಯನ್ನು ಬೆಂಬಲಿಸುವುದಲ್ಲದೇ ದೇವತೆಗಳ ಪಾತ್ರಧಾರಿಗಳಿಂದ ಆಕ್ಷೇಪಾರ್ಹ ಸಂವಾದಗಳನ್ನು ಹೇಳಿಸಲಾಗಿದೆ.

೬. ಹಿಂದೂಗಳ ವಿರುದ್ಧದ ಹೊಸ ಸಂಚನ್ನು ತಿಳಿಯಿರಿ !

ಆಂಧ್ರಪ್ರದೇಶದಲ್ಲಿ ಕಳೆದ ಒಂದೂವರೆ ವರ್ಷದಿಂದ ಹಿಂದೂಗಳ ದೇವಸ್ಥಾನಗಳ ಮೇಲಾಗುತ್ತಿರುವ ಆಕ್ರಮಣಗಳು ಮತ್ತು ವಿಗ್ರಹಗಳನ್ನು ಧ್ವಂಸ ಮಾಡಿದ ಪ್ರಕರಣದಲ್ಲಿ ಭಾಜಪ ಮತ್ತು ತೆಲುಗು ದೇಶಮ್ ಪಕ್ಷ ಇವುಗಳ ೨೦ ಕ್ಕೂ ಹೆಚ್ಚು ಕಾರ್ಯಕರ್ತರ ಪೈಕಿ ೧೫ ಜನರನ್ನು ಬಂಧಿಸಲಾಗಿದೆ.

೭. ಇಂತಹ ಕಟುಕರಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಬೇಕು !

ಮೇರಠ(ಉತ್ತರಪ್ರದೇಶ)ದಲ್ಲಿನ ಮವನಾ ಎಂಬ ಪ್ರದೇಶದಲ್ಲಿ ಗೋಹತ್ಯೆಯನ್ನು ತಡೆಯಲು ಹೋಗಿದ್ದ ಪೊಲೀಸರ ಮೇಲೆ ಮತಾಂಧ ಕಟುಕರ ಪರಿವಾರವು ಆಯುಧಗಳೊಂದಿಗೆ ಮಾರಣಾಂತಿಕ ಆಕ್ರಮಣ ಮಾಡಿತು. ಇದರಲ್ಲಿ ಓರ್ವ ಮಹಿಳಾ ಪೊಲೀಸ್ ಕಾನ್ಸಟೇಬಲ್ ಕೊರಳಿಗೆ ಗಲ್ಲಿಗೇರಿಸುವ ಹಗ್ಗವನ್ನು ಬಿಗಿದು ಅವಳನ್ನು ಕೊಲ್ಲಲು ಪ್ರಯತ್ನಿಸಲಾಯಿತು.